ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕ್ ಟಾಕ್ Oracle, ವಾಲ್ಮಾರ್ಟ್ ಡೀಲ್ ಓಕೆ ಎಂದ ಅಧ್ಯಕ್ಷ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಸೆ. 20: "ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಇದು ಶೇ. 100ರಷ್ಟು ಆಗಿರಬೇಕು. ಮತ್ತು ನಾನು ಒಪ್ಪಂದವನ್ನು ನೋಡಬೇಕಾಗಿದೆ." ಎಂದು ಟಿಕ್ ಟಾಕ್ Oracle ಡೀಲ್ ಬಗ್ಗೆ ಎಚ್ಚರಿಕೆ ನೀಡಿದ್ದ ಟ್ರಂಪ್ ಈಗ ಎರಡು ಕಂಪನಿಗಳ ಒಪ್ಪಂದಗೆ ಓಕೆ ಎಂದಿದ್ದಾರೆ ಎಂಬ ಸುದ್ದಿ ಬಂದಿದೆ.

ಚೀನಾದ ಬೈಟ್‌ಡ್ಯಾನ್ಸ್‌ ಒಡೆತನದ ಟಿಕ್‌ಟಾಕ್ ಅಮೆರಿಕಾ ಕಾರ್ಯಾಚರಣೆಯನ್ನು ತನ್ನದಾಗಿಸಿಕೊಳ್ಳಲು ಒರಾಕಲ್ ಕಾರ್ಪ್ ಜೊತೆ ಕೈ ಜೋಡಿಸಿದೆ. ಈ ಮೂಲಕ ಅಮೆರಿಕದಲ್ಲಿ ತನ್ನ ಅಸ್ತಿತ್ವವನ್ನು ಟಿಕ್ ಟಾಕ್ ಉಳಿಸಿಕೊಂಡಿದೆ. ಟಿಕ್ ಟಾಕ್ ಸಂಸ್ಥೆಗೆ ಕ್ಲೌಂಡ್ ಸರ್ವೀಸ್ ನೀಡಲಿರುವ ಒರಾಕಲ್ 12.5% ಷೇರು ಹೊಂದಲಿದೆ. ಇದೇ ವೇಳೆ ವಾಲ್ಮಾರ್ಟ್ ಶೇ 7.5 ರಷ್ಟು ಪಾಲು ಹೊಂದಲಿದೆ. ಹೊಸದಾಗಿ ರೂಪುಗೊಳ್ಳಲಿರುವ ಆಡಳಿತ ಮಂಡಳಿಯಲ್ಲಿ ಸಿಇಒ ಡೌಗ್ ಮೆಕ್ ಮಿಲನ್ ಅವರು ಐದು ಸದಸ್ಯರಲ್ಲಿ ಒಬ್ಬರಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾನುವಾರದಿಂದ ಅಮೆರಿಕಾದಲ್ಲಿ ನಿಷೇಧಗೊಳ್ಳಲಿದೆ ಟಿಕ್‌ಟಾಕ್, ವೀಚಾಟ್!ಭಾನುವಾರದಿಂದ ಅಮೆರಿಕಾದಲ್ಲಿ ನಿಷೇಧಗೊಳ್ಳಲಿದೆ ಟಿಕ್‌ಟಾಕ್, ವೀಚಾಟ್!

ಒರಾಕಲ್ ಹಾಗೂ ವಾಲ್ಮಾಟ್ ಒಟ್ಟಾರೆ ಶೇ 20 ರಷ್ಟು ಪಾಲು ಹೊಂದಿದ್ದರೆ ಚೀನಾ ಮೂಲದ ಬೈಟ್ ಡ್ಯಾನ್ಸ್ ಶೇ 80 ರಷ್ಟು ಪಾಲು ಗಳಿಸಲಿದೆ. ಆದರೆ, ಈ ಒಪ್ಪಂದದ ಬಗ್ಗೆ ಮುಂದಿನ ಭಾನುವಾರ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಯುಎಸ್ ವಾಣಿಜ್ಯ ಇಲಾಖೆ ಪ್ರತಿಕ್ರಿಯಿಸಿದೆ.

"ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಇದು ಶೇ. 100ರಷ್ಟು ಆಗಿರಬೇಕು. ಮತ್ತು ನಾನು ಒಪ್ಪಂದವನ್ನು ನೋಡಬೇಕಾಗಿದೆ." ಎಂದು ಟ್ರಂಪ್ ಹೇಳಿದ್ದರು. ಹೀಗಾಗಿ, ಅಮೆರಿಕದಲ್ಲಿ ಟಿಕ್ ಟಾಕ್ ಉಳಿಯಬೇಕಾದರೆ ಇನ್ನಷ್ಟು ಪರೀಕ್ಷೆಗೊಳಪಡಬೇಕಾಗುತ್ತದೆ.

App Ban: ಭಾರತದ ಹಾದಿ ತುಳಿಯುತ್ತಾ ಅಮೆರಿಕ..?App Ban: ಭಾರತದ ಹಾದಿ ತುಳಿಯುತ್ತಾ ಅಮೆರಿಕ..?

ಮೆಸೇಜಿಂಗ್ ಅಪ್ಲಿಕೇಶನ್ ವೀಚಾಟ್‌(WeChat) ಮತ್ತು ವೀಡಿಯೊ ಹಂಚಿಕೆ ಅಪ್ಲಿಕೇಶನ್ ಟಿಕ್‌ಟಾಕ್ (TikTok) ವಿರುದ್ಧ ಅಮೆರಿಕ ಕೈಗೊಂಡ ಕ್ರಮದ ಕುರಿತು ಬೀಜಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅಮೆರಿಕಾ ದಮನಕಾರಿ ಕ್ರಮ ಕೈಗೊಳ್ಳುತ್ತಿದೆ ಎಂದು ಚೀನಾ ಆರೋಪಿಸಿತ್ತು. ಇದರ ಬೆನ್ನಲ್ಲೇ ಟಿಕ್ ಟಾಕ್ ನಿಷೇಧಕ್ಕೆ ಅಮೆರಿಕದಲ್ಲಿ ಗಡುವು ನೀಡಿದ ಸುದ್ದಿ ಬಂದಿತ್ತು.

ಚೀನಾದ ಅನೇಕ ಅಪ್ಲಿಕೇಶನ್‌ಗಳನ್ನು ಕಪ್ಪುಪಟ್ಟಿಗೆ

ಚೀನಾದ ಅನೇಕ ಅಪ್ಲಿಕೇಶನ್‌ಗಳನ್ನು ಕಪ್ಪುಪಟ್ಟಿಗೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ದೇಶದ ಭದ್ರತಾ ಹಿತದೃಷ್ಟಿಯ ಹಿನ್ನಲೆಯಲ್ಲಿ ಚೀನಾದ ಅನೇಕ ಅಪ್ಲಿಕೇಶನ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು, ಟಿಕ್‌ಟಾಕ್ ಬ್ಯಾನ್ ಮಾಡಲಾಗುವುದು ಎಂದು ಬಹಿರಂಗವಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಟಿಕ್‌ಟಾಕ್ ಸೇವೆಯನ್ನು ಖರೀದಿಸಲು ಮೈಕ್ರೋಸಾಫ್ಟ್ ಎದುರು ನೋಡುತ್ತಿದೆ ಎಂಬ ಸುದ್ದಿ ಬಂದಿತ್ತು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿಕ್‌ ಟಾಕ್ ಕಂಪನಿಯನ್ನು ಸೆಪ್ಟೆಂಬರ್ 15ರೊಳಗೆ ಅಮೆರಿಕಾದ ಕಂಪನಿಗೆ ಮಾರಾಟ ಮಾಡಬೇಕು ಇಲ್ಲವೆ ಬ್ಯಾನ್ ಮಾಡುವುದಾಗಿ ಹೇಳಿದ್ದರು. ನಂತರ ಈ ಗಡುವು ವಿಸ್ತರಿಸಲಾಗಿದೆ.

ಅಮೆರಿಕದಲ್ಲೂ ಉತ್ತಮ ಮಾರುಕಟ್ಟೆ

ಅಮೆರಿಕದಲ್ಲೂ ಉತ್ತಮ ಮಾರುಕಟ್ಟೆ

ಅಮೆರಿಕದಲ್ಲಿ 1500 ಉದ್ಯೋಗಿಗಳಿದ್ದಾರೆ. ಅಮೆರಿಕದಲ್ಲೂ ಟಿಕ್ ಟಾಕ್ ಉತ್ತಮ ಮಾರುಕಟ್ಟೆ ಹೊಂದಿದ್ದು ಪ್ರಸ್ತುತ 80 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ನಮ್ಮ ಸಂಸ್ಥೆ ಮೇಲೆ ಹೊರೆಸಿರುವ ಆರೋಪಗಳ ವಿರುದ್ಧ ಕಾನೂನು ಹೋರಾಟಕ್ಕಿಳಿಯಲಾಗಿದೆ. ಅಮೆರಿಕದ ವಿವಿಧ ಸಂಸ್ಥೆಗಳು ನಮ್ಮ ಸಂಸ್ಥೆ ಜೊತೆ ಒಪ್ಪಂದ ಹೊಂದಲು ಮುಂದಾಗಿದ್ದರೂ ಯಾವುದೇ ಒಪ್ಪಂದ ಇನ್ನೂ ಸಫಲವಾಗಿಲ್ಲ ಎಂದು ಬೈಟ್ ಡ್ಯಾನ್ಸ್ ಹೇಳಿದೆ.

ಮಾಹಿತಿ ವರ್ಗಾವಣೆ ಬಗ್ಗೆ ಕಳವಳ

ಮಾಹಿತಿ ವರ್ಗಾವಣೆ ಬಗ್ಗೆ ಕಳವಳ

2017 ರಲ್ಲಿ ಬೈಟ್ ಡ್ಯಾನ್ಸ್ ಜನಪ್ರಿಯ ಸಂಗೀತ ಅಪ್ಲಿಕೇಶನ್ ಅನ್ನು ಸ್ವಾಧೀನಪಡಿಸಿಕೊಂಡಿತು. ಮಾಹಿತಿಯನ್ನು ತೆಗೆದುಹಾಕಿದ ನಂತರ ವಿದೇಶಿ ಹೂಡಿಕೆ ಸಮಿತಿಯ ಮುಂದೆ ಹಾಜರಾಗುವಂತೆ ಯುನೈಟೆಡ್ ಸ್ಟೇಟ್ಸ್ ಬೈಟ್ ಡ್ಯಾನ್ಸ್ ಅನ್ನು ಕೇಳಿದೆ. ಟಿಕ್ ಟಾಕ್ ಪ್ರಸ್ತುತ ಅಮೆರಿಕಾದಲ್ಲಿ 80 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಟಿಕ್‌ಟಾಕ್ ಹೊಂದಿರುವ ಅಮೆರಿಕನ್ ಬಳಕೆದಾರರ ಮಾಹಿತಿಯನ್ನು ಯುನೈಟೆಡ್ ಸ್ಟೇಟ್ಸ್‌ಗೆ ವರ್ಗಾಯಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅಮೆರಿಕ ಮೂಲದ ಸಂಸ್ಥೆಗಳು ಯತ್ನಿಸುತ್ತಿವೆ.

ಟಿಕ್ ಟಾಕ್ ಜೊತೆ ಒಪ್ಪಂದಕ್ಕೆ ಪೈಪೋಟಿ

ಟಿಕ್ ಟಾಕ್ ಜೊತೆ ಒಪ್ಪಂದಕ್ಕೆ ಪೈಪೋಟಿ

ಜನರಲ್ ಅಟ್ಲಾಂಟಿಕ್ ಮತ್ತು ಸಿಕ್ವೊಯ ಕ್ಯಾಪಿಟಲ್ ಸೇರಿದಂತೆ ಈಗಾಗಲೇ ಬೈಟ್‌ಡ್ಯಾನ್ಸ್‌ನಲ್ಲಿ ಪಾಲು ಹೊಂದಿರುವ ಕೆಲವು ಅಮೆರಿಕಾ ಹೂಡಿಕೆದಾರರೊಂದಿಗೆ ಒರಾಕಲ್ ಕೆಲಸ ಮಾಡುತ್ತಿದೆ. ಒರಾಕಲ್ ಗೂ ಮುನ್ನ ಚೀನಾದ ಬೈಟ್‌ಡ್ಯಾನ್ಸ್‌ ಕಂಪನಿಯ ಒಡೆತನದ ಟಿಕ್‌ಟಾಕ್ ಖರೀದಿಗೆ ಟ್ವಿಟ್ಟರ್, ಮೈಕ್ರೋಸಾಫ್ಟ್ ಸಂಸ್ಥೆಗಳು ಕೂಡಾ ಮುಂದಾಗಿ, ಈ ಬಗ್ಗೆ ಮಾತುಕತೆ ನಡೆಸಿದ್ದವು.

ಇದಲ್ಲದೆ, ಚೀನಾ ಮೂಲದ ಜಾಗತಿಕ ಆತಿಥ್ಯ ತಂತ್ರಜ್ಞಾನ ಪೂರೈಕೆದಾರ ಶಿಜಿ ಗ್ರೂಪ್ ಮಂಗಳವಾರ ತನ್ನ 100 ಪ್ರತಿಶತದಷ್ಟು ನಿಯಂತ್ರಿತ ಅಮೆರಿಕಾ ಅಂಗಸಂಸ್ಥೆ ಸ್ಟೇನ್ ಟಚ್ ಅನ್ನು ಯುಎಸ್ ಹೋಟೆಲ್ ಆಪರೇಟಿಂಗ್ ಕಂಪನಿಯಾದ ಎಂಆರ್‌ಸಿಗೆ ಮಾರಾಟ ಮಾಡುವ ನಿರ್ಧಾರವನ್ನು ಅಂಗೀಕರಿಸಿದೆ ಎಂದು ದಿ ಗ್ಲೋಬಲ್ ಟೈಮ್ಸ್ ವರದಿ ಮಾಡಿತ್ತು. ಕೊನೆಗೆ ಒರಾಕಲ್, ವಾಲ್ ಮಾರ್ಟ್ ಹೂಡಿಕೆಗೆ ಶ್ವೇತಭವನ ಒಪ್ಪಿಗೆ ನೀಡಿದೆ.

English summary
Trump said he has given his blessing to a deal in which Oracle and Walmart would partner with TikTok in the U.S. Oracle will become TikTok’s cloud provider and a minority investor with a 12.5% stake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X