• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ರೂ ಕಾಲರ್ ನ ಮೆಸೆಂಜರ್ ಎಂಬ 'ಸ್ಮಾರ್ಟ್' ಅಪ್ಲಿಕೇಷನ್

By Mahesh
|

ಬೆಂಗಳೂರು, ಜುಲೈ 22: ಸ್ಮಾರ್ಟ್ ಫೋನ್ ಬಳಕೆದಾರರಲ್ಲಿ ಜನಪ್ರಿಯತೆ ಗಳಿಸಿರುವ ಆಪ್ಲಿಕೇಷನ್ ಪೈಕಿ ಟ್ರೂ ಕಾಲರ್ ಕೂಡಾ ಒಂದು. ಸ್ಪಾಮ್ ಕರೆಗಳು, ಕಿರಿಕಿರಿ ಕಾಲರ್ ಗಳ ಬಗ್ಗೆ ಸೂಚನೆ ನೀಡುವ ಈ ಅಪ್ಲಿಕೇಷನ್ ಎಲ್ಲರಿಗೂ ಗೊತ್ತಿದೆ. ಈಗ ಟ್ರೂ ಕಾಲರ್ ನಿಂದ ಮೆಸೆಂಜರ್ ಕೂಡಾ ಬಂದಿದ್ದು, ಹೊಸ ಸಾಧ್ಯತೆಗಳನ್ನು ತೋರಿಸುತ್ತಿದೆ.

ಅನಾಮಿಕ ಕರೆ, ಸ್ಪಾಮ್ ಕರೆಗಳನ್ನು ನಿಯಂತ್ರಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್ ) ಕೂಡಾ ಕೆಲ ಸೌಲಭ್ಯಗಳನ್ನು ನೀಡಿದೆ. ಮಾರ್ಕೆಟಿಂಗ್ ಕರೆ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಇದು ಸೂಕ್ತ ಎನ್ನಬಹುದು.

ಅದರೆ, ಟ್ರಾಯ್ ವೆಬ್ ತಾಣ, ಅದರಲ್ಲಿನ ಅರ್ಜಿ, ಮಾರ್ಕೆಟಿಂಗ್ ಕರೆ ವಿರುದ್ಧ ದೂರು ನೀಡಬೇಕಾದಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಯಾರಿಗೆ ಪುರುಸೊತ್ತಿದೆ ಹೇಳಿ, ಇಂಥ ಸಂದರ್ಭದಲ್ಲಿ ಸ್ವೀಡನ್ ಮೂಲದ ಟ್ರೂ ಕಾಲರ್ ಎಲ್ಲರ ನೆರವಿಗೆ ಬಂದಿತು.

ಅದರಲ್ಲೂ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಉಳ್ಳ ಸಾಧನಗಳಲ್ಲಿ ಇರಲೇಬೇಕಾದ ಅಪ್ಲಿಕೇಷನ್ ಗಳ ಪೈಕಿ ಅಗ್ರಸ್ಥಾನ ಗಳಿಸಿತು. ಇದಾದ ಬಳಿಕ ಟ್ರೂ ಡಯಲರ್ ಕೂಡಾ ಬಂದರೂ ಅಷ್ಟಾಗಿ ಜನಪ್ರಿಯತೆ ಗಳಿಸಲಿಲ್ಲ. ಜೊತೆಗೆ ಟ್ರೂ ಕಾಲರ್ ಅಷ್ಟು ಸುರಕ್ಷಿತವಲ್ಲ. ನಿಮ್ಮ ಖಾಸಗಿ ಮಾಹಿತಿ ಸೋರಿಕೆಯಾಗುತ್ತದೆ ಎಂಬ ಕೂಗು ಕೇಳಿ ಬಂದಿತ್ತು.

ಖಾಸಗಿ ಮಾಹಿತಿ ನೀಡಿದ್ದರೆ ಹಿಂಪಡೆಯಿರಿ

ಖಾಸಗಿ ಮಾಹಿತಿ ನೀಡಿದ್ದರೆ ಹಿಂಪಡೆಯಿರಿ

ಇದಕ್ಕೂ ಪರಿಹಾರ ಸೂಚಿಸಲಾಯಿತು. ಟ್ರೂ ಕಾಲರ್ ವೆಬ್ ಸೈಟ್ ಗೆ ಹೋಗಿ ನಿಮ್ಮ ಖಾಸಗಿ ಮಾಹಿತಿ ಇನ್ನಿತರ ಬೇಡದ ವಿವರಗಳನ್ನು ತೆಗೆದು ಹಾಕಿದರೆ ಸಾಕು ಎಂಬ ಉತ್ತರವೂ ಸಿಕ್ಕಿತು. ಈಗ ಟ್ರೂ ಮೆಸೆಂಜರ್ ಬಂದಿದ್ದು ಚಾಲ್ತಿಯಲ್ಲಿರುವ ಎಸ್ಎಂಎಸ್ ವ್ಯವಸ್ಥೆಯನ್ನೇ ಬದಲಾಯಿಸುವ ಕುರುಹು ತೋರಿದೆ.

ಸ್ಪಾಮ್ ಮುಕ್ತ ಸಂದೇಶ

ಸ್ಪಾಮ್ ಮುಕ್ತ ಸಂದೇಶ

ಟ್ರೂ ಕಾಲರ್ ನಂತೆ ಟ್ರೂ ಮೆಸೆಂಜರ್ ಕೂಡಾ ಕಾರ್ಯ ನಿರ್ವಹಿಸಲಿದ್ದು, ಅನಾಮಿಕ ಸಂಖ್ಯೆಯಿಂದ ಬೇಡದ ಸಂದೇಶಗಳು ಬರುವುದನ್ನು ನಿಲ್ಲಿಸಬಹುದು. ಸ್ಪಾಮ್ ಡೇಟಾಬೇಸ್ ಕೂಡಾ ಚಾಲ್ತಿಯಲ್ಲಿರುವುದರಿಂದ ಸುಲಭವಾಗಿ ಕಿರಿಕಿರಿ ಸಂದೇಶಗಳನ್ನು ಬ್ಲಾಕ್ ಮಾಡಬಹುದು.

ಟ್ರೂ ಮೆಸೆಂಜರ್ ಭಾರತದಲ್ಲಿ ಮಾತ್ರ ಲಭ್ಯ

ಟ್ರೂ ಮೆಸೆಂಜರ್ ಭಾರತದಲ್ಲಿ ಮಾತ್ರ ಲಭ್ಯ

ಟ್ರೂ ಮೆಸೆಂಜರ್ ಸದ್ಯಕ್ಕೆ ಭಾರತದಲ್ಲಿ ಮಾತ್ರ ಲಭ್ಯವಿದ್ದು, ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಟ್ರೂ ಕಾಲರ್ ಸದ್ಯಕ್ಕೆ 150 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ.

ಪ್ರಾತ್ಯಕ್ಷಿಕೆ ವಿಡಿಯೋ ಇಲ್ಲಿದೆ

ಬಳಕೆದಾರರ 80 ಮಿಲಿಯನ್ ಜನ ಭಾರತದಿಂದ ಹೊರಗಿದ್ದಾರೆ. ಈ ಸಂಖ್ಯೆಯನ್ನು 120 ಮಿಲಿಯನ್ ಗೇರಿಸುವ ಗುರಿಯನ್ನು ಟ್ರೂ ಕಾಲರ್ ಹೊಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Truecaller’s Truemessenger launched to make SMS smarter. Truemessenger is currently only available in India, and will soon expand to other countries. It has also only launched on the Android platform. Google Play Store to download the app for free.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more