• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್ ಟ್ರೆಂಡ್ ರಾಯಭಾರಿಯಾದ ನಟಿ ಕೀರ್ತಿ ಸುರೇಶ್

By Mahesh
|

ಬೆಂಗಳೂರು, ಆಗಸ್ಟ್ 24: ರಿಲಯನ್ಸ್ ರಿಟೈಲ್‍ನ ಅಪಾರೆಲ್ ಮತ್ತು ಅಕ್ಸೆಸರಿಗಳ ವಿಶೇಷಜ್ಞ ಸರಣಿಯಾ ಟ್ರೆಂಡ್ಸ್ ಗೆ ಹೊಸ ರಾಯಭಾರಿಯಾಗಿ ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಒಪ್ಪಂದ ಮಾಡಿಕೊಂಡಿದ್ದಾರೆ.

ಅವರನ್ನು ದಕ್ಷಿಣ ಭಾರತ ಪ್ರದೇಶದ (ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳ) ತನ್ನ ಬ್ರಾಂಡ್ ರಾಯಭಾರಿಯಾಗಿ ಘೋಷಿಸಿದೆ. ಕೀರ್ತಿ ಸುರೇಶ್ ಅವರನ್ನು ಒಳಗೊಂಡ ಟ್ರೆಂಡ್ಸ್‍ನ ಹೊಚ್ಚ ಹೊಸ ಗೆಟ್ ದೆಮ್ ಟಾಕಿಂಗ್' ಹಬ್ಬದ ಅಭಿಯಾನದ ಮೊದಲ ನೋಟವನ್ನು ಕೂಡಾ ಇಂದು ಅನಾವರಣಗೊಳಿಸಲಾಯಿತು.

ಚೆನ್ನೈನ ಹೃದಯ ಭಾಗದಲ್ಲಿರುವ ವಿಆರ್ ಮಾಲ್‍ನಲ್ಲಿ ಈ ವೈಭವೋಪೇತ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಕೀರ್ತಿ ಅವರ ಮನಮೋಹಕ ಮತ್ತು ಗ್ಲಾಮರಸ್ ಪ್ರವೇಶವನ್ನು ವಿಶೇಷ ಮರಳಿನ ಕಲೆಯ ಪ್ರದರ್ಶನದ ಮೂಲಕ ಬಿಂಬಿಸಲಾಯಿತು.

ಕೀರ್ತಿಯೊಂದಿಗಿನ ಟ್ರೆಂಡ್ಸ್ ನ ಹೊಸ ಹಬ್ಬದ ಟಿವಿ ಅಭಿಯಾನ ಅಕ್ಟೋಬರ್‍ನಿಂದ ಪ್ರಮುಖ ಪ್ರಾದೇಶಿಕ ಸ್ಯಾಟಲೈಟ್ ಟಿವಿ ಚಾನೆಲ್‍ಗಳಲ್ಲಿ- ತಮಿಳು, ತೆಲುಗು, ಕನ್ನಡ- ಪ್ರಸಾರ ಆರಂಭಗೊಳ್ಳಲಿದೆ.

ಫಾರ್ಚೂನ್ 'ಚೇಂಜ್ ದ ವರ್ಲ್ಡ್' ಪಟ್ಟಿ: ಮೊದಲ ಸ್ಥಾನದಲ್ಲಿ ಜಿಯೋ

ಕೀರ್ತಿ ಸುರೇಶ್ ಮಾತು:"ಫ್ಯಾಶನ್ ಮತ್ತು ಟ್ರೆಂಡ್ಸ್ ಜತೆಜತೆಯಾಗಿ ಸಾಗುತ್ತವೆ. ಟ್ರೆಂಡ್ಸ್ ಬ್ರಾಂಡ್ ಭಾರತದಾದ್ಯಂತ ಗ್ರಾಹಕರಿಂದ ಪ್ರೀತಿಗೆ ಪಾತ್ರವಾಗಿದೆ ಹಾಗೂ ಸ್ವೀಕರಿಸಲ್ಪಟ್ಟಿದೆ. ಕೈಗಟಕುವ ಬೆಲೆಯಲ್ಲಿ ಅದ್ಭುತ ಫ್ಯಾಶನ್ ಅನ್ನು ಈ ಉಡುಪುಗಳು ಹೊಂದಿವೆ.

ಟ್ರೆಂಡ್ಸ್ ನೊಂದಿಗೆ ಸಹಭಾಗಿತ್ವ ಸಾಧಿಸುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಟ್ರೆಂಡ್ಸ್‍ನ ಬಟ್ಟೆಗಳನ್ನು ನಾನು ತುಂಬಾ ಪ್ರೀತಿಸುತ್ತೇನೆ. ಫೆಸ್ಟೀವ್ ಕುರ್ತಿಗಳು ಫ್ಯಾಶನೇಬಲ್, ಆರಾಮದಾಯಕ ಹಾಗೂ ಟ್ರೆಂಡಿಯಾಗಿವೆ.''

ಕೀರ್ತಿ ಸುರೇಶ್ ಜತೆ ಟ್ರೆಂಡ್ಸ್ ಹಬ್ಬದ ಅಭಿಯಾನ- ಸಿಒಒ ಮಾತು: ಈ ಸಹಭಾಗಿತ್ವದ ಕುರಿತು ಮಾತನಾಡಿದ ವಿಪಿನ್ ತ್ಯಾಗಿ, ಸಿಒಒ, ಟ್ರೆಂಡ್ಸ್, 'ಟ್ರೆಂಡ್ಸ್ ಇಂದು ಇತ್ತೀಚಿನ ಫ್ಯಾಶನ್ ಅನ್ನು ಒದಗಿಸುವ ಮೂಲಕ ಭಾರತದ ಅತಿದೊಡ್ಡ ಅಪಾರೆಲ್ ತಾಣವಾಗಿದೆ. ತಮಿಳುನಾಡು ಮತ್ತು ದಕ್ಷಿಣ ಭಾರತ ನಮಗೆ ತುಂಬಾ ಮಹತ್ವದ್ದಾಗಿದೆ. ಈ ಭಾಗದ ಜನರಿಂದ ಟ್ರೆಂಡ್ಸ್ ಅತ್ಯುತ್ತಮ ಪ್ರತಿಸ್ಪಂದನೆಯನ್ನು ಪಡೆದಿದೆ. ಭವಿಷ್ಯದಲ್ಲಿ ನಿರಂತರ ಪ್ರಗತಿಯನ್ನು ಮುಂದುವರಿಸಲು ನಾವು ಯೋಜಿಸಿದ್ದೇವೆ.

"ತಮಿಳುನಾಡಿನದಲ್ಲಿ 61 ಮಳಿಗೆಗಳ ಸಹಿತ ದಕ್ಷಿಣ ಭಾರತದಲ್ಲಿ ಒಟ್ಟಾರೆ 229 ಮಳಿಗೆಗಳನ್ನು ನಾವು ಹೊಂದಿದ್ದೇವೆ. ಕೀರ್ತಿ ಸುರೇಶ್ ಅವರೊಂದಿಗಿನ ಈ ಸಹಭಾಗಿತ್ವವವು ಟ್ರೆಂಡ್ಸ್‍ಗೆ ಗ್ರಾಹಕರೊಂದಿಗೆ ಬಲಿಷ್ಠವಾದ ಬಂಧ ಬೆಳೆಸಲು ನೆರವಾಗಲಿದೆ. ಕೀರ್ತಿ ಅವರು ದಕ್ಷಿಣ ಭಾರತ ಹಾಗೂ ತಮಿಳುನಾಡಿನಲ್ಲಿ ತುಂಬಾ ಜನಪ್ರಿಯರಾದ ನಟಿಯಾಗಿದ್ದಾರೆ. ಇವರು ಸೌಂದರ್ಯ ಹಾಗೂ ಪ್ರತಿಭೆಯನ್ನು ಹೊಂದಿದ್ದು ಟ್ರೆಂಡ್ಸ್‍ನ ಪ್ರತಿನಿಧಿಯಾಗಲು ಸೂಕ್ತವಾಗಿದ್ದಾರೆ'' ಎಂದರು.

English summary
“Trends signs up Keerthy Suresh as brand ambassador” along with couple of event pictures. Trends, the apparel and accessories specialty chain of Reliance Retail, today announced Keerthy Suresh as their brand ambassador for South India region(Tamil Nadu, Karnataka, Andhra Pradesh, Telangana and Kerala).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more