ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಾಯ್ ನಿಂದ 100 ಕೇಬಲ್ ಚಾನೆಲ್ ಗಳ ಗರಿಷ್ಠ ದರ ನಿಗದಿ

|
Google Oneindia Kannada News

ನವದೆಹಲಿ, ಜನವರಿ 14: ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊರ ತಂದಿರುವ ಹೊಸ ಕೇಬಲ್ ನೀತಿ ಫೆಬ್ರವರಿ 01ರಿಂದ ಜಾರಿಗೆ ಬರಲಿದೆ. ಹೊಸ ಲೆಕ್ಕಾಚಾರದಂತೆ ಗ್ರಾಹಕರಿಗೆ 100 ಚಾನೆಲ್ ಗಳನ್ನು ನೋಡಲು ಗರಿಷ್ಠ 154ರು ಗಳಾಗಲಿವೆ.

ದೂರದರ್ಶನದ ಉಚಿತ ಚಾನೆಲ್ ಗಳು ಸೇರಿದಂತೆ 100 ಚಾನೆಲ್ ಗಳ ಪ್ಯಾಕೇಜ್ ಗೆ 184ರು ಎಂದು ಈ ಹಿಂದೆ ನಿಗದಿ ಪಡಿಸಲಾಗಿತ್ತು. ಆದರೆ, ಈಗ ಈ ಮೊತ್ತ 154ರು ಗಳಾಗಲಿವೆ. ಚಂದಾದಾರರಿಕೆ ಮೊತ್ತ 130ರು ಪ್ಲಸ್ ತೆರಿಗೆ ಮೊತ್ತ ಸೇರಲಿದೆ. ಫ್ರೀ ಟು ಏರ್ ಚಾನೆಲ್ ಗಳನ್ನು ನೀಡಲು ಇದಕ್ಕಿಂತ ಹೆಚ್ಚಿನ ಮೊತ್ತ ಪಡೆಯಬಾರದು ಎಂದು ಕೇಬಲ್ ಆಪರೇಟರ್ಸ್ ಗಳಿಗೆ ಟ್ರಾಯ್ ಎಚ್ಚರಿಕೆ ನೀಡಿದೆ.

ಡಿ.29ರ ಬದಲಿಗೆ ಜನವರಿ 31ಕ್ಕೆ ಕೇಬಲ್ ಟಿವಿ ನಿಯಮ ಜಾರಿ ಡಿ.29ರ ಬದಲಿಗೆ ಜನವರಿ 31ಕ್ಕೆ ಕೇಬಲ್ ಟಿವಿ ನಿಯಮ ಜಾರಿ

100 ರು ಚಾನೆಲ್ ಗಳ ನಂತರ ಬೇಕಾದ ಚಾನೆಲ್ ಪಡೆಯಲು ಪ್ರತಿ 25 ಚಾನೆಲ್ ಗಳಿಗೆ 20 ರು ನಂತೆ ದರ ನಿಗದಿಯಾಗಿದೆ. ಎಚ್ ಡಿ ಚಾನೆಲ್ ಗಳು ಬೇಕಾದರೆ ದರ ಇನ್ನಷ್ಟು ಹೆಚ್ಚಾಗಲಿದೆ.

100ಕ್ಕೂ ಅಧಿಕ ಚಾನೆಲ್ ಉಚಿತ

100ಕ್ಕೂ ಅಧಿಕ ಚಾನೆಲ್ ಉಚಿತ

ನೂರಾರು ಚಾನೆಲ್ ಉಚಿತವಿದೆ: ದೂರದರ್ಶನದ ಉಚಿತ 26 ಚಾನೆಲ್ ಸೇರಿದಂತೆ 100 ಚಾನೆಲ್(74 Free to Air) ಗಳನ್ನು ವೀಕ್ಷಿಸಬಹುದು. ಇದಕ್ಕಾಗಿ 130 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಇದರೊಂದಿಗೆ ಶೇ. 18 ರಷ್ಟು ಜಿ.ಎಸ್.ಟಿ. ಪಾವತಿಸಿ 154 ರೂ.ಗೆ 100 ಚಾನಲ್ ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. HD ಚಾನೆಲ್ ಹೊರತು ಪಡಿಸಿ ಎಸ್ ಡಿ ಚಾನೆಲ್ ಗಳ 100ರ ಪ್ಯಾಕ್ ಗೆ 184ರು ಗಿಂತ ಅಧಿಕ ನೀಡಬೇಡಿ ಎಂದು ಟ್ರಾಯ್ ಸೂಚಿಸಿದೆ. ಪ್ರತಿ 25 ಉಚಿತ ಚಾನೆಲ್ ಗಳಿಗೆ ಜಿ.ಎಸ್.ಟಿ. ಸೇರಿ 25 ರೂ.ಪಾವತಿಸಬೇಕಿದೆ. ಪ್ರತಿಯೊಂದು ಚಾನೆಲ್ ಗೂ 1 ಪೈಸೆಯಿಂದ 19 ರೂ.ರವರೆಗೆ ದರ ನಿಗದಿಯಾಗಿದೆ ಎಂದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆ(ಟ್ರಾಯ್) ತಿಳಿಸಿದೆ.

ಡಿಸೆಂಬರ್ 29ರ ನಂತರ ಕೇಬಲ್ ಟಿವಿ ಆಫ್ ಆಗಲ್ಲ,ಮುಂದುವರೆಯುತ್ತೆ ಡಿಸೆಂಬರ್ 29ರ ನಂತರ ಕೇಬಲ್ ಟಿವಿ ಆಫ್ ಆಗಲ್ಲ,ಮುಂದುವರೆಯುತ್ತೆ

ಚಾನೆಲ್ ಗಳ ಆಯ್ಕೆ ಹೇಗೆ?

ಚಾನೆಲ್ ಗಳ ಆಯ್ಕೆ ಹೇಗೆ?

ಆಯ್ಕೆ ಹೇಗೆ? : ಒಂದು ಚಾನೆಲ್ ಅಥವಾ ಚಾನೆಲ್ ಗಳ ಸಮೂಹಗಳಿರುವ ಪ್ಯಾಕೆಜ್ ಹಾಕಿಸಿಕೊಳ್ಳಬಹುದು. ಜೀ, ಸೋನಿ, ಸ್ಟಾರ್, ಕಲರ್ಸ್ ವಾಹಿನಿ ಹೀಗೆ ಪ್ಯಾಕೆಜ್ ಗಳು ಸಿದ್ಧವಾಗಿವೆ. ಕೇಬಲ್/ ಡಿಟಿಎಚ್ ಅಪರೇಟರ್ ಸಂಪರ್ಕಿಸಿ, ಬೇಕಾದ ಪ್ಯಾಕೇಜ್ ಪಡೆಯಿರಿ
* ಉದಾಹರಣೆ: ಜೀ ಫ್ಯಾಮಿಲಿ ಪ್ಯಾಕೇಜ್ (68 ಚಾನೆಲ್ 45 ರುಗೆ ಲಭ್ಯ)
* ಸ್ಟಾರ್ ಇಂಡಿಯಾ ಪ್ಯಾಕೇಜ್ (ಹಿಂದಿಗೆ 49 ರು)
* ಸ್ಟಾರ್ ಸುವರ್ಣ 30ರು
* ಸೋನಿ ಪಿಕ್ಚರ್ಸ್ 32 ಚಾನೆಲ್ ಗೆ 90ರು
* ಕಲರ್ಸ್ ಕನ್ನಡ ವಾಹಿನಿ ಕೇವಲ 1 ರು ನ ಪ್ಯಾಕೇಜ್ ಘೋಷಿಸಿದೆ.

ಜನವರಿ 01ರಿಂದ ಯಾವೆಲ್ಲ ಸಾಮಗ್ರಿಗಳ ಬೆಲೆ ಇಳಿಕೆ, ಪಟ್ಟಿ ನೋಡಿ ಜನವರಿ 01ರಿಂದ ಯಾವೆಲ್ಲ ಸಾಮಗ್ರಿಗಳ ಬೆಲೆ ಇಳಿಕೆ, ಪಟ್ಟಿ ನೋಡಿ

ಪ್ರೀಪೇಯ್ಡ್ ಆಯ್ಕೆ ಗೊಂದಲ

ಪ್ರೀಪೇಯ್ಡ್ ಆಯ್ಕೆ ಗೊಂದಲ

ಕೇಬಲ್ ಆಪರೇಟರ್‌ಗಳಿಗೂ ಹೊಸ ವ್ಯವಸ್ಥೆ ಬಗ್ಗೆ ಇನ್ನು ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಆದರೆ, ಯಾವುದೇ ಕಾರಣಕ್ಕೂ ಸೆಟ್‌ ಆಪ್ ಬಾಕ್ಸ್ ಬದಲಾವಣೆ ಮಾಡುವುದು ಬೇಡ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಒಂದೆರಡು ತಿಂಗಳು ಗ್ರಾಹಕರಿಗೆ ಗೊಂದಲ ಉಂಟಾಗಬಹುದು ಬಳಿಕ ಎಲ್ಲವೂ ಸರಿಯಾಗಲಿದೆ ಎನ್ನುವುದು ಕೇಬಲ್ ಆಪರೇಟರ್‌ಗಳ ಮಾತು. ಗ್ರಾಮೀಣ ಭಾಗದ ಗ್ರಾಹಕರಿಗೂ ಇದರಿಂದ ಹೆಚ್ಚಿನ ಸಂಕಷ್ಟ ಉಂಟಾಗಲಿದೆ. ಪ್ರೀಪೇಯ್ಡ್ ಪ್ಯಾಕೇಜ್ ನಲ್ಲಿ ಮುಂಚಿತವಾಗಿ ಹಣ ಕಟ್ಟಿ ಎಂದು ಅವರಿಗೆ ವಿವರಿಸಿ ಹೇಳುವುದು ಕಷ್ಟ ಎಂದು ಕೇಬಲ್ ಆಪರೇಟರ್ಸ್ ಗೊಣಗುತ್ತಿದ್ದಾರೆ

ದೂರುಗಳಿದ್ದರೆ ಟ್ರಾಯ್ ಸಂಪರ್ಕಿಸಿ

ದೂರುಗಳಿದ್ದರೆ ಟ್ರಾಯ್ ಸಂಪರ್ಕಿಸಿ

ಏರ್ ಟೆಲ್, ಡಿಶ್ ಟಿವಿ, ಹಾಥ್ವೇ, ಸಿಟಿ ಕೇಬಲ್, ಸ್ಥಳೀಯ ಕೇಬಲ್ ಆಪರೇಟರ್ ಗಳು ತಮ್ಮ ದರ ಪಟ್ಟಿಯನ್ನು ಈಗಾಗಲೇ ಚಂದಾದರಿಗೆ ಪ್ರದರ್ಶಿಸತೊಡಗಿವೆ. ಪ್ರಸಾರಕಾರರು, ಡಿಟಿಎಚ್ ಆಪರೇಟರ್ ಗಳು ಮತ್ತು Multi System Operators(ಎಂಎಸ್ಒ)ಗಳ ಜತೆ ಟ್ರಾಯ್ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ ಬಳಿಕ ದರಗಳನ್ನು ನಿಗದಿ ಮಾಡಲಾಗಿದೆ. ದರ ಪಟ್ಟಿ ಬಗ್ಗೆ ಯಾವುದಾದರೂ ಡೌಟ್​ಗಳಿದ್ದರೆ 011-23237922 (ಎ.ಕೆ. ಭಾರಧ್ವಾಜ್​) ಮತ್ತು 011-23220209 (ಅರವಿಂದ್​ ಕುಮಾರ್​) ಇಲ್ಲವೇ ಇ- ಮೇಲ್​ [email protected] ಅಥವಾ [email protected]. ಗೆ ಸಂಪರ್ಕಿಸಬಹುದು

English summary
The consumer will have to pay a basic fee of Rs 130 (plus taxes, which will come to Rs 154) and this will include a tier of 100 channels. TRAI also says companies, local cable operators cannot levy additional charges for providing any free to air channel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X