ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಗದ ಡೇಟಾ ಯೋಜನೆ: ಏರ್‌ಟೆಲ್, ವೊಡಾಫೋನ್ ಐಡಿಯಾಗೆ ಟ್ರಾಯ್ ಪ್ರಶ್ನೆ

|
Google Oneindia Kannada News

ನವದೆಹಲಿ, ಆಗಸ್ಟ್‌ 03: ತನ್ನ ಚಂದಾದಾರರಿಗೆ ನೀಡುತ್ತಿದ್ದ ರೆಡ್‌ಎಕ್ಸ್‌ ಪ್ರೀಮಿಯಂ, ಪ್ಲಾಟಿನಂ ಯೋಜನೆಗಳ ಕುರಿತಾಗಿ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಕಂಪನಿಗಳಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ. ಅಲ್ಲದೆ ಮಂಗಳವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.

ಈಗಾಗಲೇ ವಿವಾದಕ್ಕೆ ತುತ್ತಾಗಿರುವ ವೇಗದ ಡೇಟಾ ಯೋಜನೆಗಳು ಇತರ ಯೋಜನೆಗಳ ಚಂದಾದಾರರಿಗೆ ನೀಡುತ್ತಿರುವ ಸೇವಾ ಗುಣಮಟ್ಟವನ್ನು ಕಡಿಮೆ ಮಾಡಿಲ್ಲ, ಯಾವ ನಿಯಮವನ್ನೂ ಉಲ್ಲಂಘಿಸಿಲ್ಲ ಎಂಬ ಹೇಳಿಕೆಗೆ ಹೆಚ್ಚಿನ ಆಧಾರ ಒದಗಿಸುವಂತೆ ಟ್ರಾಯ್ ಈ ಎರಡೂ ಟೆಲಿಕಾಂ ಕಂಪನಿಗಳಿಗೆ ಪ್ರಶ್ನೆಗಳನ್ನು ಕೇಳಿದೆ.

ವೊಡಾಫೋನ್ ಐಡಿಯಾ ರೆಡ್‌ಎಕ್ಸ್ ಪ್ಲಾನ್: ಟ್ರಾಯ್‌ ಆದೇಶಕ್ಕೆ ತಡೆವೊಡಾಫೋನ್ ಐಡಿಯಾ ರೆಡ್‌ಎಕ್ಸ್ ಪ್ಲಾನ್: ಟ್ರಾಯ್‌ ಆದೇಶಕ್ಕೆ ತಡೆ

ಭಾರ್ತಿ ಏರ್‌ಟೆಲ್ ಟೆಲಿಕಾಂ ಕಂಪನಿಯು ಜುಲೈ 6ರಂದು ಪ್ಲಾಟಿನಂ ಹಾಗೂ ವೊಡಾಫೋನ್ ಐಡಿಯಾ ಕಂಪನಿಯು ರೆಡ್‌ಎಕ್ಸ್‌ ಪ್ರೀಮಿಯಂ ಯೋಜನೆಗಳನ್ನು ಘೋಷಿಸಿತ್ತು. 499 ರೂಪಾಯಿ ಹಾಗೂ ಅದಕ್ಕೆ ಮೇಲ್ಪಟ್ಟ ಪ್ರೀಮಿಯಂ ಪೋಸ್ಟ್‌ ಪೇಯ್ಡ್‌ ಗ್ರಾಹಕರಿಗೆ 4G ವೇಗದ ಡೇಟಾ ಹಾಗೂ ಇನ್ನಿತರ ಸೌಲಭ್ಯ ಒದಗಿಸುವುದಾಗಿ ಹೇಳಿತ್ತು.

TRAI Sends Further Queries To Vodafone Idea And Bharti Airtel

ಹೀಗಾಗಿ ಈ ವಿಶೇಷ ಯೋಜನೆಗಳ ಅಡಿಯಲ್ಲಿ ಗ್ರಾಹಕರಿಗೆ ಡೇಟಾ ನಿಗದಿ ಮಾಡಲಾಗಿದಿಯೇ ಎಂಬುದನ್ನು ವಿವರಿಸಿ ಎಂದು ಏರ್‌ಟೆಲ್‌ಗೆ ಸೂಚಿಸಲಾಗಿದೆ. ಏರ್‌ಟೆಲ್‌ಗೆ ಎರಡು ಡಜನ್‌ಗೂ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ರೀತಿ ಕೆಲವು ಆಯ್ಕೆಯ ಗ್ರಾಹಕರಿಗೆ ವಿಶೇಷ ಆದ್ಯತೆ ನೀಡುವುದರಿಂದ ಈ ಯೋಜನೆಗಳನ್ನು ಹೊಂದದೇ ಇರುವ ಗ್ರಾಹಕರಿಗೆ ಗುಣಮಟ್ಟದ ಕೊರತೆ ಎದುರಿಸಬೇಕಾಗುತ್ತದೆ ಎಂಬುದು ಟ್ರಾಯ್ ಅಭಿಪ್ರಾಯವಾಗಿದೆ.

English summary
The telecom regulator has shot off detailed technical queries to Vodafone Idea and Bharti Airtel regarding their Redx and platinum premium tariff plans
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X