ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿ ಚಾನೆಲ್ ಆಯ್ಕೆ ಮಾಡಿಕೊಳ್ಳಲು ವೆಬ್‌ತಾಣ ಪರಿಚಯಿಸಿದ ಟ್ರಾಯ್

|
Google Oneindia Kannada News

ಕೇಬಲ್ ಆಪರೇಟರ್ಸ್ ನೆರವಿಲ್ಲದೆ, ವೀಕ್ಷಕರು ತಮ್ಮ ಮನೆಯಲ್ಲಿನ ಟಿವಿ ಚಾನೆಲ್ ಗಳ ಪೈಕಿ ತಮಗಿಷ್ಟವಾದ ವಾಹಿನಿಗಳನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳುವ ಸೌಲಭ್ಯವನ್ನು ಭಾರತೀಯ ದೂರಸಂಪರ್ಕ ಪ್ರಾಧಿಕಾರ(ಟ್ರಾಯ್) ಇನ್ನಷ್ಟು ಉತ್ತಮಗೊಳಿಸಿದೆ. ಈ ಹಿಂದೆ ಮೊಬೈಲ್ ಅಪ್ಲಿಕೇಷನ್ ಹೊರ ತಂದಿದ್ದ ಟ್ರಾಯ್ ಇದೀಗ ಪ್ರತ್ಯೇಕ ವೆಬ್ ತಾಣ ಪ್ರಕಟಿಸಿದೆ.

ಸುಮಾರು 16 ಡಿಟಿಎಚ್ ಹಾಗೂ ಕೇಬಲ್ ಆಪರೇಟರ್ಸ್ ಟ್ರಾಯ್ ಹೊಸ ವೆಬ್ ತಾಣದಲ್ಲಿ ಲಭ್ಯವಿದೆ. ಟ್ರಾಯ್ ಹೊರ ತಂದಿರುವ Channel Selector App ಈಗ ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ. ಆದರೆ, ಈ ಆಪ್ ಬಳಸಿ ಚಾನೆಲ್ ಆಯ್ಕೆ ಮಾಡಿಕೊಳ್ಳಲು ಸೇವಾ ಸಂಸ್ಥೆಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಂಡಿರಬೇಕು.

ಕೇಬಲ್ ಟಿವಿ ಶುಲ್ಕ ಇಳಿಕೆ; ಕಡಿಮೆ ಬೆಲೆಗೆ ಹೆಚ್ಚು ಚಾನೆಲ್ಕೇಬಲ್ ಟಿವಿ ಶುಲ್ಕ ಇಳಿಕೆ; ಕಡಿಮೆ ಬೆಲೆಗೆ ಹೆಚ್ಚು ಚಾನೆಲ್

ಟ್ರಾಯ್ ಹಾಗೂ ಅಖಿಲ ಭಾರತ ಡಿಜಿಟಲ್ ಕೇಬಲ್ ಒಕ್ಕೂಟವು (AIDCF) ಮಾಸಿಕ ಕೇಬಲ್ ಟಿವಿ ಶುಲ್ಕದಲ್ಲಿ ಬದಲಾವಣೆ ತರಲು ಮುಂದಾಗಿದೆ. ತನ್ನ ಗ್ರಾಹಕರಿಗೆ 150 ಚಾನೆಲ್‌ಗಳ ಸೇವೆಯನ್ನು 130 ರೂ.ಗಳ ಕನಿಷ್ಠ ಮಟ್ಟದ ಶುಲ್ಕದ ದರದಲ್ಲಿ ನೀಡಲು AIDCF ನಿರ್ಧರಿಸಿದೆ. ದರ ಪಟ್ಟಿ ಬಗ್ಗೆ ಯಾವುದಾದರೂ ಗೊಂದಲಗಳಿದ್ದರೆ 011-23237922 (ಎ.ಕೆ. ಭಾರಧ್ವಾಜ್​) ಮತ್ತು 011-23220209 (ಅರವಿಂದ್​ ಕುಮಾರ್​) ಇಲ್ಲವೇ ಇ- ಮೇಲ್​ [email protected] ಅಥವಾ [email protected]. ಗೆ ಸಂಪರ್ಕಿಸಬಹುದು

TRAI launches TV Channel Selector web portal for people to check, modify subscription

ದೂರದರ್ಶನದ ಉಚಿತ 26 ಚಾನೆಲ್ ಸೇರಿದಂತೆ 100 ಚಾನೆಲ್(74 Free to Air) ಗಳನ್ನು ವೀಕ್ಷಿಸಬಹುದು. ಇದಕ್ಕಾಗಿ 130 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಇದರೊಂದಿಗೆ ಶೇ. 18 ರಷ್ಟು ಜಿ.ಎಸ್.ಟಿ. ಪಾವತಿಸಿ 154 ರೂ.ಗೆ 100 ಚಾನಲ್ ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. ಈಗ ಈ ಸಂಖ್ಯೆಯನ್ನು 150ಕ್ಕೇರಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿ ಶುಲ್ಕವನ್ನು ವಿಧಿಸಬೇಕಾಗಿಲ್ಲ, ಈ ಚಾನೆಲ್ ಬರದಿದ್ದರೆ ದೂರು ಸಲ್ಲಿಸಿ ಪಡೆಯಬಹುದು.

Recommended Video

Sled Dog Race - Norway's Arctic Challenge | ಸ್ಲೆಡ್ ಡಾಗ್ ರೇಸ್ - ನಾರ್ವೆಯ ಆರ್ಕ್ಟಿಕ್ ಚಾಲೆಂಜ್ | SL EP 02

HD ಚಾನೆಲ್ ಹೊರತು ಪಡಿಸಿ ಎಸ್ ಡಿ ಚಾನೆಲ್ ಗಳ 100ರ ಪ್ಯಾಕ್ ಗೆ 184ರು ಗಿಂತ ಅಧಿಕ ನೀಡಬೇಡಿ ಎಂದು ಟ್ರಾಯ್ ಸೂಚಿಸಿದೆ. ಪ್ರತಿ 25 ಉಚಿತ ಚಾನೆಲ್ ಗಳಿಗೆ ಜಿ.ಎಸ್.ಟಿ. ಸೇರಿ 25 ರೂ.ಪಾವತಿಸಬೇಕಿದೆ. ಪ್ರತಿಯೊಂದು ಚಾನೆಲ್ ಗೂ 1 ಪೈಸೆಯಿಂದ 19 ರೂ.ರವರೆಗೆ ದರ ನಿಗದಿಯಾಗಿದೆ ಎಂದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆ(ಟ್ರಾಯ್) ತಿಳಿಸಿತ್ತು. ಆದರೆ, ಈ ಶುಲ್ಕದಲ್ಲಿ ಭಾರಿ ಬದಲಾವಣೆ ತರಲಾಗಿದೆ. ಒಬ್ಬ ಬಳಕೆದಾರನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸಂಪರ್ಕವಿದ್ದರೆ ಆತನಿಗೆ 2 ಮತ್ತು ಆ ನಂತರ ಪಡೆಯುವ ಪ್ರತಿ ಮೊದಲ ಸಂಪರ್ಕಕ್ಕೆ ಶೇ 40ರಷ್ಟನ್ನು ಮಾತ್ರ ಎನ್‌ಸಿಎಫ್ ಶುಲ್ಕವಾಗಿ ವಿಧಿಸಬಹುದಾಗಿದೆ. 12 ರೂ. ಮತ್ತು ಅದಕ್ಕಿಂತ ಕಡಿಮೆ ಶುಲ್ಕ ಹೊಂದಿರುವ ಚಾನೆಲ್‌ಗಳನ್ನು ಮಾತ್ರ ಆಪರೇಟರ್‌ಗಳು ಚಾನೆಲ್ ಗುಚ್ಛದಲ್ಲಿ ಸೇರಿಸಬೇಕಾಗಿದೆ.

English summary
The Telecom Regulatory Authority of India (TRAI) on Wednesday launched a TV Channel Selector web portal on Wednesday for consumers who could not access its mobile phone app of the same name due to lack of a smartphone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X