ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೆ ಬೇಕಾದ ಟಿವಿ ಚಾನೆಲ್ ನೀವೆ ಆಯ್ಕೆ ಮಾಡಿಕೊಳ್ಳಿ: ಟ್ರಾಯ್

|
Google Oneindia Kannada News

ನವದೆಹಲಿ, ಜೂನ್ 26: ಭಾರತೀಯ ದೂರಸಂಪರ್ಕ ಪ್ರಾಧಿಕಾರ(ಟ್ರಾಯ್) ಹೊರ ತಂದಿರುವ ಹೊಚ್ಚ ಹೊಸ ನೀತಿ, ನಿಯಮ ಹಾಗೂ ಮೊಬೈಲ್ ಅಪ್ಲಿಕೇಷನ್ ಸಂಪೂರ್ಣ ಗ್ರಾಹಕ ಸ್ನೇಹಿಯಾಗಲಿದೆ. ಕೇಬಲ್ ಆಪರೇಟರ್ಸ್ ನೆರವಿಲ್ಲದೆ, ವೀಕ್ಷಕರು ತಮ್ಮ ಮನೆಯಲ್ಲಿನ ಟಿವಿ ಚಾನೆಲ್ ಗಳ ಪೈಕಿ ತಮಗಿಷ್ಟವಾದ ವಾಹಿನಿಗಳನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳುವ ಸೌಲಭ್ಯ ಇದೀಗ ಲಭ್ಯವಾಗಿದೆ.

Recommended Video

Corona count : Stats of the country in last 24 hours | Oneindia Kannada

ಟ್ರಾಯ್ ಹೊರ ತಂದಿರುವ Channel Selector App ಈಗ ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ. ಆದರೆ, ಈ ಆಪ್ ಬಳಸಿ ಚಾನೆಲ್ ಆಯ್ಕೆ ಮಾಡಿಕೊಳ್ಳಲು ಸೇವಾ ಸಂಸ್ಥೆಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಂಡಿರಬೇಕು.

TRAI launches Channel Selector App, subscribers can modify TV subscription

ಕೇಬಲ್ ಟಿವಿ ಗ್ರಾಹಕರ ಗಮನಕ್ಕೆ 130 ರು ಗೆ ಸಿಗಲಿದೆ ಹೆಚ್ಚು ಚಾನೆಲ್ಸ್ ಕೇಬಲ್ ಟಿವಿ ಗ್ರಾಹಕರ ಗಮನಕ್ಕೆ 130 ರು ಗೆ ಸಿಗಲಿದೆ ಹೆಚ್ಚು ಚಾನೆಲ್ಸ್

ನಿಮ್ಮ ಕೇಬಲ್ ಆಪರೇಟರ್ ಬಳಿ ನಿಮ್ಮ ನೋಂದಾಯಿತ ಸಂಖ್ಯೆ ಇದ್ದರೆ, ಗೂಗಲ್ ಪ್ಲೇಸ್ಟೋರಿನಿಂದ ಈ ಆಪ್ ಡೌನ್ಲೋಡ್ ಮಾಡಿಕೊಳ್ಳಿ, ನೋಂದಣಿ ಸಂಖ್ಯೆ ಹಾಗೂ ಒಟಿಪಿ ಹಾಕಿದರೆ, ಚಾನೆಲ್ ಆಯ್ಕೆಯ ಅವಕಾಶ ಲಭ್ಯವಾಗಲಿದೆ.

ಇದಲ್ಲದೆ, ಕೇಬಲ್ ಮತ್ತು ಬ್ರಾಡ್ ಕಾಸ್ಟಿಂಗ್ ಸೇವೆಗಳಿಗೆ ಸಂಬಂಧಿಸಿದಂತೆ ಟ್ರಾಯ್ ತಿದ್ದುಪಡಿ ತಂದಿದೆ. ಇದರ ಅನ್ವಯ ಕೇಬಲ್ ಆಪರೇಟರ್‌ಗಳು ಬದಲಾವಣೆ ಮಾಡಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಟ್ರಾಯ್ ಅಧ್ಯಕ್ಷ ಆರ್ ಎಸ್ ಶರ್ಮ ತಿಳಿಸಿದ್ದಾರೆ.

ಬೆಲೆ ಏರಿಕೆ ದೂರುಗಳಿದ್ದರೆ ಯಾರನ್ನು ಸಂಪರ್ಕಿಸಬೇಕು

ಬೆಲೆ ಏರಿಕೆ ದೂರುಗಳಿದ್ದರೆ ಯಾರನ್ನು ಸಂಪರ್ಕಿಸಬೇಕು

ಬೆಲೆ ಏರಿಕೆ ಬಗ್ಗೆ ಗ್ರಾಹಕರಿಂದ ಕೇಬಲ್ ಒಕ್ಕೂಟದಿಂದ ದೂರುಗಳು ಕೇಳಿ ಬಂದಿದ್ದರಿಂದ ಟ್ರಾಯ್ ಹಾಗೂ ಅಖಿಲ ಭಾರತ ಡಿಜಿಟಲ್ ಕೇಬಲ್ ಒಕ್ಕೂಟವು (AIDCF) ಮಾಸಿಕ ಕೇಬಲ್ ಟಿವಿ ಶುಲ್ಕದಲ್ಲಿ ಬದಲಾವಣೆ ತರಲು ಮುಂದಾಗಿದೆ. ತನ್ನ ಗ್ರಾಹಕರಿಗೆ 150 ಚಾನೆಲ್‌ಗಳ ಸೇವೆಯನ್ನು 130 ರೂ.ಗಳ ಕನಿಷ್ಠ ಮಟ್ಟದ ಶುಲ್ಕದ ದರದಲ್ಲಿ ನೀಡಲು AIDCF ನಿರ್ಧರಿಸಿದೆ. ದರ ಪಟ್ಟಿ ಬಗ್ಗೆ ಯಾವುದಾದರೂ ಗೊಂದಲಗಳಿದ್ದರೆ 011-23237922 (ಎ.ಕೆ. ಭಾರಧ್ವಾಜ್​) ಮತ್ತು 011-23220209 (ಅರವಿಂದ್​ ಕುಮಾರ್​) ಇಲ್ಲವೇ ಇ- ಮೇಲ್​ [email protected] ಅಥವಾ [email protected]. ಗೆ ಸಂಪರ್ಕಿಸಬಹುದು

ನಿಮಗೆ ಬೇಕಾದ ಪ್ಯಾಕೇಜ್ ಪಡೆಯುವ ಸೌಲಭ್ಯ

ನಿಮಗೆ ಬೇಕಾದ ಪ್ಯಾಕೇಜ್ ಪಡೆಯುವ ಸೌಲಭ್ಯ

ಟ್ರಾಯ್ ನಿಯಮ, ಚಾನೆಲ್ ಆಯ್ಕೆ ಹಾಗೂ ಕೇಬಲ್ ಆಪರೇಟರ್, ಡಿಟಿಎಚ್ ಕಂಪನಿಗಳ ಅಫರ್ ಬಗ್ಗೆ ಚಾನೆಲ್ ನಂಬರ್ 999(ಕೇಬಲ್ ಟಿವಿ ಅಪರೇಟರ್ ಸಂಪರ್ಕಿಸಿ ಕೇಳಿರಿ)ರಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಗ್ರಾಹಕರಿಗೆ ಎಸ್ಎಂಎಸ್ ಮೂಲಕ, ಪ್ರಾತ್ಯಕ್ಷಿಕೆ ವಿಡಿಯೋ, ಪಾಂಪ್ಲೆಟ್ ಮೂಲಕ ಕೂಡಾ ಮಾಹಿತಿ ನೀಡಲಾಗುತ್ತಿದೆ. ಈಗ ಹೊಸ ನಿಯಮದ ಪ್ರಕಾರ ಒಂದು ಚಾನೆಲ್ ಅಥವಾ ಚಾನೆಲ್ ಗಳ ಸಮೂಹಗಳಿರುವ ಪ್ಯಾಕೆಜ್ ಹಾಕಿಸಿಕೊಳ್ಳಬಹುದು.

ನೂರಾರು ಚಾನೆಲ್ ಉಚಿತವಿದೆ

ನೂರಾರು ಚಾನೆಲ್ ಉಚಿತವಿದೆ

ನೂರಾರು ಚಾನೆಲ್ ಉಚಿತವಿದೆ: ದೂರದರ್ಶನದ ಉಚಿತ 26 ಚಾನೆಲ್ ಸೇರಿದಂತೆ 100 ಚಾನೆಲ್(74 Free to Air) ಗಳನ್ನು ವೀಕ್ಷಿಸಬಹುದು. ಇದಕ್ಕಾಗಿ 130 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಇದರೊಂದಿಗೆ ಶೇ. 18 ರಷ್ಟು ಜಿ.ಎಸ್.ಟಿ. ಪಾವತಿಸಿ 154 ರೂ.ಗೆ 100 ಚಾನಲ್ ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. ಈಗ ಈ ಸಂಖ್ಯೆಯನ್ನು 150ಕ್ಕೇರಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿ ಶುಲ್ಕವನ್ನು ವಿಧಿಸಬೇಕಾಗಿಲ್ಲ, ಈ ಚಾನೆಲ್ ಬರದಿದ್ದರೆ ದೂರು ಸಲ್ಲಿಸಿ ಪಡೆಯಬಹುದು.

ಶುಲ್ಕದಲ್ಲಿ ಭಾರಿ ಬದಲಾವಣೆ ತರಲಾಗಿದೆ

ಶುಲ್ಕದಲ್ಲಿ ಭಾರಿ ಬದಲಾವಣೆ ತರಲಾಗಿದೆ

HD ಚಾನೆಲ್ ಹೊರತು ಪಡಿಸಿ ಎಸ್ ಡಿ ಚಾನೆಲ್ ಗಳ 100ರ ಪ್ಯಾಕ್ ಗೆ 184ರು ಗಿಂತ ಅಧಿಕ ನೀಡಬೇಡಿ ಎಂದು ಟ್ರಾಯ್ ಸೂಚಿಸಿದೆ. ಪ್ರತಿ 25 ಉಚಿತ ಚಾನೆಲ್ ಗಳಿಗೆ ಜಿ.ಎಸ್.ಟಿ. ಸೇರಿ 25 ರೂ.ಪಾವತಿಸಬೇಕಿದೆ. ಪ್ರತಿಯೊಂದು ಚಾನೆಲ್ ಗೂ 1 ಪೈಸೆಯಿಂದ 19 ರೂ.ರವರೆಗೆ ದರ ನಿಗದಿಯಾಗಿದೆ ಎಂದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆ(ಟ್ರಾಯ್) ತಿಳಿಸಿತ್ತು.

ಆದರೆ, ಈ ಶುಲ್ಕದಲ್ಲಿ ಭಾರಿ ಬದಲಾವಣೆ ತರಲಾಗಿದೆ. ಒಬ್ಬ ಬಳಕೆದಾರನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸಂಪರ್ಕವಿದ್ದರೆ ಆತನಿಗೆ 2 ಮತ್ತು ಆ ನಂತರ ಪಡೆಯುವ ಪ್ರತಿ ಮೊದಲ ಸಂಪರ್ಕಕ್ಕೆ ಶೇ 40ರಷ್ಟನ್ನು ಮಾತ್ರ ಎನ್‌ಸಿಎಫ್ ಶುಲ್ಕವಾಗಿ ವಿಧಿಸಬಹುದಾಗಿದೆ. 12 ರೂ. ಮತ್ತು ಅದಕ್ಕಿಂತ ಕಡಿಮೆ ಶುಲ್ಕ ಹೊಂದಿರುವ ಚಾನೆಲ್‌ಗಳನ್ನು ಮಾತ್ರ ಆಪರೇಟರ್‌ಗಳು ಚಾನೆಲ್ ಗುಚ್ಛದಲ್ಲಿ ಸೇರಿಸಬೇಕಾಗಿದೆ.

ಕೇಬಲ್ ಟಿವಿ ಶುಲ್ಕ ಇಳಿಕೆ; ಕಡಿಮೆ ಬೆಲೆಗೆ ಹೆಚ್ಚು ಚಾನೆಲ್ಕೇಬಲ್ ಟಿವಿ ಶುಲ್ಕ ಇಳಿಕೆ; ಕಡಿಮೆ ಬೆಲೆಗೆ ಹೆಚ್ಚು ಚಾನೆಲ್

English summary
TRAI new regulations/orders for the Television and broadcasting sector will give freedom to consumers to select television channels they want to watch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X