ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಗ್ರಾಹಕರಿಗೆ ಕೊಡುಗೆ, ರೋಮಿಂಗ್ ದರ ಕಡಿತ

|
Google Oneindia Kannada News

ನವದೆಹಲಿ, ಏ.10 : ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಮೊಬೈಲ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ರೋಮಿಂಗ್ ಶುಲ್ಕವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಮೇ.1ರಿಂದ ನೂತನ ದರಗಳು ಜಾರಿಗೆ ಬರಲಿವೆ.

ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಈ ಕುರಿತು ಗುರುವಾರ ಆದೇಶ ಹೊರಡಿಸಿದೆ. ಮೇ.1ರಿಂದ ಅನ್ವಯವಾಗುವಂತೆ ಗ್ರಾಹಕರಿಗೆ ರೋಮಿಂಗ್ ಶುಲ್ಕಗಳನ್ನು ಕಡಿತಗೊಳಿಸುವಂತೆ ಮೊಬೈಲ್ ಸೇವಾ ಕಂಪನಿಗಳಿಗೆ ನಿರ್ದೇಶನ ನೀಡಿದೆ. [ಮೊಬೈಲ್ ಒನ್ ನನ್ನ ಅನಿಸಿಕೆ: ಶ್ರೀಹರ್ಷ ಸಾಲಿಮಠ]

Mobile

ಟ್ರಾಯ್ ಕಾರ್ಯದರ್ಶಿ ಸುಧೀರ್ ಗುಪ್ತಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಶುಲ್ಕ ಕಡಿತಗೊಳ್ಳುವುದರಿಂದ ಎಲ್ಲಾ ಮೊಬೈಲ್ ಗ್ರಾಹಕರಿಗೂ ಅನುಕೂಲವಾಗಲಿದೆ. ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ಇರುವುದರಿಂದ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ತಿಳಿಸಿದ್ದಾರೆ. [ಗೋಲ್ ಮಾಲ್ ಮೆಸೇಜ್ ನಂಬಿ ಉತ್ರ ಕೊಟ್ರೇ...!]

ಕರೆಗಳ ದರ ಪಟ್ಟಿ : ರೋಮಿಂಗ್ ಶುಲ್ಕ ಕಡಿತಗೊಳಿಸಿರುವುದರಿಂದ ಸ್ಥಳೀಯ ವಾಯ್ಸ್ ಕಾಲ್‌ ಮೇಲಿನ ರೋಮಿಂಗ್ ದರ ನಿಮಿಷಕ್ಕೆ 80 ಪೈಸೆಯಾಗಲಿದೆ. ಒಳಬರುವ ಕರೆಗಳ ದರ ನಿಮಿಷಕ್ಕೆ 45 ಪೈಸೆಗೆ ಇಳಿಕೆಯಾಗಲಿದೆ. ಹೊರ ಹೋಗುವ ಎಸ್‌ಎಂಎಸ್ ಶುಲ್ಕ 1 ರೂ.ನಿಂದ 25 ಪೈಸೆಗೆ ಇಳಿಯಲಿದೆ. [ಅಗ್ಗವಾಗಲಿದೆ ಮೊಬೈಲ್, ಸ್ಥಿರ ದೂರವಾಣಿ ದರ]

ಸದ್ಯದ ದರದ ಪ್ರಕಾರ ಸ್ಥಳೀಯ ಹೊರ ಹೋಗುವ ವಾಯ್ಸ್‌ ಕಾಲ್ ಶುಲ್ಕ ನಿಮಿಷಕ್ಕೆ 1 ರೂ. ಇದ್ದು, ಒಳ ಕರೆಗಳ ಶುಲ್ಕ ನಿಮಿಷಕ್ಕೆ 75 ಪೈಸೆ ಇದೆ. ಈ ದರಗಳು 80 ಮತ್ತು 45 ಪೈಸೆಗಳಿಗೆ ಇಳಿಕೆಯಾಗಲಿದೆ.

ರಾಷ್ಟ್ರೀಯ ರೋಮಿಂಗ್ : ಟ್ರಾಯ್ ರಾಷ್ಟ್ರೀಯ ರೋಮಿಂಗ್ ಶುಲ್ಕಗಳನ್ನು ಕಡಿತ ಮಾಡಲು ಸೂಚನೆ ನೀಡಿದೆ. ಅದರಂತೆ ಪ್ರತಿ ನಿಮಿಷದ ಕರೆಯ ದರ 1.50 ರೂ.ಗಳಿಂದ 1.15 ರೂ.ಗಳಾಗಲಿದೆ. ಪ್ರತಿ ಎಸ್‌ಎಂಎಸ್‌ ದರ 1.50 ರೂ.ಗಳಿಂದ 38 ಪೈಸೆಗಳಿಗೆ ಇಳಿಯಲಿದೆ.

English summary
Telecom Regulatory Authority of India (Trai) on Thursday slashed national roaming call charges by up to 23 per cent and SMS by around 75 per cent. The reduction charges which becomes applicable from May 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X