ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್ ಹಾಗೂ ಕರ್ನಾಟಕದ ಮಧ್ಯದ ಒಪ್ಪಂದಕ್ಕೆ CAIT ಆಕ್ಷೇಪ

|
Google Oneindia Kannada News

ನವದೆಹಲಿ, ಜನವರಿ 29: ಕಳಂಕಿತ ಇ- ಕಾಮರ್ಸ್ ಕಂಪೆನಿ ಅಮೆಜಾನ್ ಜತೆಗೆ ಕರ್ನಾಟಕ ಸರ್ಕಾರವು ಒಪ್ಪಂದ (MoU) ಮಾಡಿಕೊಳ್ಳುತ್ತಿರುವುದಕ್ಕೆ ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಪ್ರಬಲವಾಗಿ ಟೀಕೆ ವ್ಯಕ್ತಪಡಿಸಿದೆ. ಸರ್ಕಾರದಿಂದ ಇ- ಕಾಮರ್ಸ್ ರಫ್ತು ನೆರವಿಗೆ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ. ಇ ಕಾಮರ್ಸ್ ಒಪ್ಪಂದ ಕುರಿತಂತೆ ಅಗತ್ಯ ಮಾರ್ಗಸೂಚಿಗಳನ್ನು ಕೇಂದ್ರ ಬಜೆಟ್ ಸಂದರ್ಭದಲ್ಲಿ ನಿರೀಕ್ಷಿಸಲಾಗಿದೆ.

"ಅಮೆಜಾನ್ ಜತೆಗೆ ಕರ್ನಾಟಕ ಸರ್ಕಾರವು MoU ಮಾಡಿಕೊಳ್ಳುತ್ತಿರುವುದನ್ನು ನಾವು ಪ್ರಬಲವಾಗಿ ಆಕ್ಷೇಪಿಸುತ್ತೇವೆ. ಆ ಕಂಪೆನಿಯು ಬಗ್ಗೆ ತನಿಖಾ ಸಂಸ್ಥೆಗಳ ವಿಚಾರಣೆ ಎದುರಿಸುತ್ತಿದ್ದು, ಜತೆಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಕರಣ ಕೂಡ ಇದೆ. ದುಷ್ಕೃತ್ಯಗಳಲ್ಲಿ ತೊಡಗಿರುವ, ಸ್ಪರ್ಧೆ ಇಲ್ಲದಂತೆ ಮಾಡುವ ಹಾಗೂ ದೇಶದ ಸಣ್ಣ ವರ್ತಕರನ್ನು ನಾಶಪಡಿಸುವ ಆರೋಪಗಳು ಅದರ ಮೇಲಿದೆ. ಇ ಕಾಮರ್ಸ್ ಮಾತ್ರವಲ್ಲದೆ ದೇಶದ ರೀಟೇಲ್ ವ್ಯವಹಾರವನ್ನು ಸಹ ಹತೋಟಿಯಲ್ಲಿ ಇರಿಸಿಕೊಳ್ಳುವ ನೀತಿ ರೂಪಿಸಿಕೊಳ್ಳುತ್ತಿದೆ," ಎಂದು ಸಿಎಐಟಿ ಹೇಳಿದೆ.

 ವಿದೇಶಿ ಹೂಡಿಕೆ ನಿಯಮಗಳನ್ನು ಪರಿಷ್ಕರಿಸಲು ಭಾರತ ಚಿಂತನೆ ವಿದೇಶಿ ಹೂಡಿಕೆ ನಿಯಮಗಳನ್ನು ಪರಿಷ್ಕರಿಸಲು ಭಾರತ ಚಿಂತನೆ

ಕರ್ನಾಟಕ ಸರ್ಕಾರಕ್ಕೆ ಈ ವಾಸ್ತವದ ಬಗ್ಗೆ ಗೊತ್ತಿಲ್ಲ ಎಂಬುದನ್ನು ನಂಬುವುದಕ್ಕೆ ಅಸಾಧ್ಯ. ಇದರ ಹೊರತಾಗಿ ಅಮೆಜಾನ್ ಜತೆ ಒಪ್ಪಂದ ಮಾಡಿಕೊಂಡಿದೆ. ಇದು ಕರ್ನಾಟಕದ ವರ್ತಕರ ಪಾಲಿಗೆ ಮಾತ್ರ ಅಲ್ಲ, ಇಡೀ ದೇಶದ ಪಾಲಿಗೆ ಗಂಭೀರ ಸಮಸ್ಯೆ. ಅಮೆಜಾನ್ ವಿರುದ್ಧ ಇರುವ ಆರೋಪ ಪಟ್ಟಿ ಮತ್ತು ತನಿಖೆಗಳನ್ನು ರಾಜ್ಯ ಸರ್ಕಾರ ಮೀರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

Traders body CAIT objects to MoU between Karnataka govt and Amazon

ಜಾರಿ ನಿರ್ದೇಶನಾಲಯದಿಂದ ತನಿಖೆ ಆರಂಭಿಸಿದ ದಿನಗಳಲ್ಲೇ ಕರ್ನಾಟಕ ಸರ್ಕಾರವು ಅಮೆಜಾನ್ ಜತೆ ಒಪ್ಪಂದಕ್ಕೆ ಬಂದಿರುವುದು ಎಂಥ ಮುಜುಗರದ ಸಂಗತಿ! ವರ್ತಕರ ರಕ್ತದಲ್ಲಿ ಕೈ ತೋಯ್ದಿರುವ ಅಮೆಜಾನ್ ಬಗ್ಗೆ ವಿಶ್ವದಾದ್ಯಂತ ಕಾನೂನು ಮತ್ತು ನೀತಿಗಳನ್ನು ಮೀರಿದ ಆರೋಪಗಳಿವೆ ಎಂದು ಸಿಎಐಟಿ ರಾಷ್ಟೀಯ ಅಧ್ಯಕ್ಷ ಬಿ.ಸಿ ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ ವಾಲ್ ಜಂಟಿ ಹೇಳಿಕೆ ನೀಡಿದ್ದಾರೆ.

ಫ್ಯೂಚರ್- ರಿಲಯನ್ಸ್ ವ್ಯವಹಾರವನ್ನು ಸೆಬಿ ತಡೆಯುವಂತಿಲ್ಲ: ಹೈ ಕೋರ್ಟ್ ಫ್ಯೂಚರ್- ರಿಲಯನ್ಸ್ ವ್ಯವಹಾರವನ್ನು ಸೆಬಿ ತಡೆಯುವಂತಿಲ್ಲ: ಹೈ ಕೋರ್ಟ್

ಕರ್ನಾಟಕ ಸರ್ಕಾರವು ವರ್ತಕ ಸಮುದಾಯದ ಬೆನ್ನಿಗೆ ಇರಿದಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಕರ್ನಾಟಕ ಸರ್ಕಾರವು ಬಹುರಾಷ್ಟ್ರೀಯ ಕಂಪೆನಿ ಮೂಲಕ ರಫ್ತು ಉತ್ತೇಜಿಸಲು ಮುಂದಾಗಿದೆ. ಆದರೆ ಈಗಿನ ಕ್ರಮವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ "ವೋಕಲ್ ಫಾರ್ ಲೋಕಲ್" ಹಾಗೂ "ಆತ್ಮನಿರ್ಭರ್ ಭಾರತ್"ಗೆ ಯಾವುದೇ ಕೊಡುಗೆ ನೀಡುವುದಿಲ್ಲ ಎಂದಿದ್ದಾರೆ.

English summary
The Confederation of All India Traders (CAIT) has strongly criticised the Karnataka Government for entering into an MOU with “tainted” e-commerce company Amazon to help drive e-commerce exports from the State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X