• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೊಯೊಟೊ ಅರ್ಬನ್ ಕ್ರೂಸರ್ SUV ಸೆಪ್ಟೆಂಬರ್ 23ಕ್ಕೆ ಬಿಡುಗಡೆ: ಬುಕ್ಕಿಂಗ್ ಮಾಡಿದವರಿಗೆ ಸಿಗಲಿದೆ ಆಫರ್

|

ಟೊಯೊಟಾ ಮೋಟಾರ್ ತನ್ನ ಮುಂಬರುವ ಅರ್ಬನ್ ಕ್ರೂಸರ್ ಬಿಡುಗಡೆ ಎಸ್‌ಯುವಿ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದೆ. ಮಾರುತಿ ವಿಟಾರಾ ಬ್ರಿಜಾದಲ್ಲಿ ಟೊಯೋಟಾ ಸ್ಪಿನ್ ಆಫ್ ಮುಂದಿನ ವಾರ ಸೆಪ್ಟೆಂಬರ್ 23 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಅರ್ಬನ್ ಕ್ರೂಸರ್ ರೀಬ್ಯಾಡ್ಜ್ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಮುಂಗಡವಾಗಿ ಬುಕ್ಕಿಂಗ್ ಸಲ್ಲಿಸುವ ಗ್ರಾಹಕರಿಗೆ ಹೊಸ ಆಫರ್ ಒಂದನ್ನು ಘೋಷಣೆ ಮಾಡಿದೆ.

ಕಾರು, ಬೈಕ್ ಬೆಲೆ ಇಳಿಕೆ ಸಾಧ್ಯತೆ: ಜಿಎಸ್‌ಟಿ ಕಡಿತಕ್ಕೆ ಸರ್ಕಾರ ಪರಿಶೀಲನೆ

ಅರ್ಬನ್ ಕ್ರೂಸರ್ ಅಧಿಕೃತ ಬಿಡುಗಡೆಗೆ ಮುನ್ನ ಬುಕ್ಕಿಂಗ್ ಸಲ್ಲಿಸುವ ಗ್ರಾಹಕರಿಗೆ ರೆಸ್ಪೆಕ್ಟ್ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಪ್ಯಾಕೇಜ್ ಅಡಿಯಲ್ಲಿ ಕಾರು ಬಿಡುಗಡೆಗೂ ಬುಕ್ಕಿಂಗ್ ಸಲ್ಲಿಸುವ ಎಲ್ಲಾ ಗ್ರಾಹಕರಿಗೂ ಹೆಚ್ಚುವರಿಯಾಗಿ 2 ವರ್ಷಗಳ ಉಚಿತ ವಾರಂಟಿ ಆಫರ್ ಲಭ್ಯವಾಗಲಿದೆ. ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಬೆಸ್ಟ್ ಇನ್ ಫೀಚರ್ಸ್ ಪಡೆದುಕೊಳ್ಳಲಿರುವ ಹೊಸ ಕಾರು ಆಕರ್ಷಕ ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗಲಿದೆ.

ಟೊಯೋಟಾ ಈಗಾಗಲೇ ಭಾರತದಲ್ಲಿ ಅರ್ಬನ್ ಕ್ರೂಸರ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಾಗಿ ಬುಕಿಂಗ್ ಪ್ರಾರಂಭಿಸಿದೆ. ವ್ಯಾಪಾರಿ ಮೂಲಗಳ ಪ್ರಕಾರ, ಹೊಸ ಎಸ್‌ಯುವಿ ಬೆಲೆ ಬ್ರಿಜಾ ಮಾದರಿಯಲ್ಲಿಯೇ ಇರುತ್ತವೆ, ಆದರೆ ಹೋಲಿಸಿದರೆ ಸ್ವಲ್ಪ ದುಬಾರಿಯಾಗಲಿದೆ.

ಹೊಸ ಅರ್ಬನ್ ಕ್ರೂಸರ್ ಕಾರು ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಎಡ್ಎಕ್ಸ್ಐ ಪ್ಲಸ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, 1.5 ಪೆಟ್ರೋಲ್ ಹೈಬ್ರಿಡ್ ಮಾದರಿಯನ್ನು ಹೊಂದಿರುವ ಹೊಸ ಕಾರು ಮೂಲ ಕಾರಿನ ಬೆಲೆಗಿಂತಲೂ ತುಸು ಹೆಚ್ಚಿರಲಿದೆ.

English summary
Toyota Motor has confirmed the launch date of its upcoming 'youngest urban SUV' - the Urban Cruiser. Toyota's spin off on Maruti Vitara Brezza will be officially launched next week, on September 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X