ಟೊಯೊಟೊ ಹೊಸ ಫಾರ್ಚೂನರ್ ಬಿಡುಗಡೆ: ಬೆಲೆ 29.98 ರಿಂದ 37.43 ಲಕ್ಷ ರೂ.
ನವದೆಹಲಿ, ಜನವರಿ 06: ಜಪಾನ್ನ ಖ್ಯಾತ ವಾಹನಗಳ ತಯಾರಕ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಲಿಮಿಟೆಡ್ ತನ್ನ ಪ್ರೀಮಿಯಂ ಎಸ್ಯುವಿ ಫಾರ್ಚೂನರ್ ಲೆಜೆಂಡರ್ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ತನ್ನ ಮುಂದಿನ ಆವೃತ್ತಿಯ ಎಸ್ಯುವಿ ಫಾರ್ಚೂನರ್ ಲೆಜೆಂಡರ್ ಬೆಲೆ 29.98 ರಿಂದ 37.43 ಲಕ್ಷ ರೂಪಾಯಿ ಆಗಿದ್ದು, ಹೊಸ ವೈಶಿಷ್ಟ್ಯ ಭರಿತ ಆವೃತ್ತಿಯಾದ ಲೆಜೆಂಡರ್ ಬೆಲೆ 37.58 ಲಕ್ಷ ರೂ.
2.8 ಲೀಟರ್ ಡೀಸೆಲ್ ಎಂಜಿನ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಮತ್ತು 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಹೊಂದಿರುವ ಈ ಕಾರು 2.7 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಸಹ ಲಭ್ಯವಿದೆ. ಇದು ಗರಿಷ್ಠ 204 ಪಿಎಸ್ ಪವರ್ ಮತ್ತು 500 ಟಾರ್ಕ್ನ ಎನ್ಎಂ ಹೊಂದಿದೆ.
ಟೊಯೊಟಾ ವಾಹನಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಫಾರ್ಚೂಚರ್ ಒಂದಾಗಿದ್ದು, ತನ್ನ ವಿಭಾಗದಲ್ಲಿ ಶೇಕಡಾ 53ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.
2009 ರಲ್ಲಿ ಪ್ರಾರಂಭವಾದಾಗಿನಿಂದ, ಇಲ್ಲಿಯವರೆಗೆ 1,70,000 ಕ್ಕೂ ಹೆಚ್ಚು ವಾಹನಗಳು ದೇಶದಲ್ಲಿ ಮಾರಾಟವಾಗಿವೆ.
ಹೊಸ ಫಾರ್ಚೂನರ್ ಹೊಸ ಫ್ರಂಟ್ ಗ್ರಿಲ್, ಸ್ಕಲ್ಪ್ಟೆಡ್ ಸೈಡ್ ಪೊಂಟೂನ್ ಶೇಪ್ಡ್ ಬಂಪರ್, ಎಲ್ಇಡಿ ಲೈನ್ ಗೈಡ್ನೊಂದಿಗೆ ಹೊಸ ಹೆಡ್ಲ್ಯಾಂಪ್ ವಿನ್ಯಾಸ, ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್ (ಡಿಆರ್ಎಲ್) ಮತ್ತು ಮಲ್ಟಿ ಆಕ್ಸಿಸ್ ಸ್ಪೋಕ್ ಅಲಾಯ್ ವೀಲ್ಗಳಂತಹ ಹೊಸ ಬಾಹ್ಯ ವೈಶಿಷ್ಟ್ಯಗಳನ್ನು ಹೊಂದಿದೆ.