ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ ತಿಂಗಳಿನಿಂದ ಟೊಯೊಟಾ ಕಿರ್ಲೋಸ್ಕರ್ ವಾಹನ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ಮಾರ್ಚ್ 28: ಜಪಾನ್‌ನ ಖ್ಯಾತ ವಾಹನಗಳ ತಯಾರಕ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಲಿಮಿಟೆಡ್ ಭಾರತದಲ್ಲಿ ತನ್ನ ಉತ್ಪನ್ನಗಳ ಮೇಲಿನ ಬೆಲೆ ಏರಿಕೆಗೆ ಮುಂದಾಗಿದೆ. ಟೊಯೊಟಾ ಕಿರ್ಲೋಸ್ಕರ್ ಮೋಟರ್(ಟಿಕೆಎಂ) ತನ್ನ ಎಲ್ಲಾ ಮಾದರಿ ವಾಹನಗಳ ಮೇಲಿನ ಬೆಲೆಯನ್ನು ಏಪ್ರಿಲ್ ತಿಂಗಳಲ್ಲಿ ಏರಿಕೆ ಮಾಡುವುದಾಗಿ ಘೋಷಿಸಿದೆ.

ಏಪ್ರಿಲ್ 1ರಿಂದ ಎಲ್ಲಾ ವಾಹನಗಳ ಬೆಲೆಯನ್ನು ಪರಿಷ್ಕರಿಸಲಾಗುವುದು, ಉತ್ಪಾದನಾ ವೆಚ್ಚ ಸರಿದೂಗಿಸಲು ಈ ಕ್ರಮ ಅನಿವಾರ್ಯ ಎಂದು ಜಪಾನ್ ಮೂಲದ ಟೊಯೊಟಾ ಸಂಸ್ಥೆಯ ಭಾರತದ ಘಟಕ ಹೇಳಿದೆ. ಮಾರುತಿ ಸುಜುಕಿ ಹಾಗೂ ರಿನೋ ಇಂಡಿಯಾ ಈಗಾಗಲೇ ಬೆಲೆ ಏರಿಕೆ ಘೋಷಿಸಿವೆ.

''ಇದು ನಮಗೆ ಪರೀಕ್ಷೆಯ ಸಮಯ, ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ನಾವು ಹೆಚ್ಚಿನ ಹೊರೆಯನ್ನು ಗ್ರಾಹಕರ ಮೇಲೆ ಹಾಕಲು ಬಯಸುವುದಿಲ್ಲ, ಅಲ್ಪ ಪ್ರಮಾಣದಲ್ಲಿ ಬೆಲೆ ಏರಿಕೆ ಅನಿವಾರ್ಯ'' ಎಂದು ಟಿಕೆಎಂ ಹೇಳಿದೆ.

Toyota Kirloskar to hike vehicle prices from April

ಉಕ್ಕು, ಅಲ್ಯುಮಿನಿಯಂ ಬೆಲೆ ಏರಿಕೆಯಿಂದ ಆಟೋಮೊಬೈಲ್ ಉತ್ಪಾದನಾ ವೆಚ್ಚ ಕೂಡಾ ಹೆಚ್ಚಾಗುತ್ತಿದ್ದು ,ಅನೇಕ ಕಂಪನಿಗಳು ಬೆಲೆ ಏರಿಕೆ ಹಾದಿ ಹಿಡಿದಿವೆ. ಕಾರು ಉತ್ಪಾದನಾ ಸಂಸ್ಥೆಗಳಲ್ಲದೆ, ಹೀರೋ ಮೋಟೋಕಾರ್ಪ್ ಕೂಡಾ ದ್ವಿಚಕ್ರವಾಹನಗಳ ಮೇಲಿನ ಬೆಲೆ ಏರಿಕೆ ಘೋಷಿಸಿದೆ. ಇಂಧನ ದರ ಏರಿಕೆ ಒತ್ತಡದಲ್ಲಿರುವ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ಪಾದನಾ ವೆಚ್ಚ ಹೊಸ ಹೊರೆಯಾಗುತ್ತಿದೆ.

English summary
Toyota Kirloskar Motor (TKM) on Saturday said it will hike prices of its models with effect from next month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X