ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಯುವಿ ಪ್ರಿಯರ ಹಾಟ್ ಫೆವರಿಟ್ ಟೊಯೊಟಾ ಫಾರ್ಚೂನರ್

|
Google Oneindia Kannada News

ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಕಾರುಗಳಿಗೆ ವಿಶೇಷ ಬೇಡಿಕೆಯಿದ್ದು, ಎಸ್‌ಯುವಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಟೊಯೊಟಾ ನಿರ್ಮಾಣದ ಫಾರ್ಚೂನರ್ ಕಾರು ಹೊಸ ಟ್ರೆಂಡ್ ಸೃಷ್ಠಿಸಿದೆ ಎನ್ನಬಹುದು. 2009ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಟೊಯೊಟಾ ಫಾರ್ಚೂನರ್ ಎಸ್‌ಯುವಿ ಕಾರು ತನ್ನದೆ ಆದ ವಿಶಿಷ್ಟ ವಿನ್ಯಾಸಗಳಿಂದಾಗಿ ಆಫ್ ರೋಡ್ ವಿಭಾಗದಲ್ಲಿ ಭಾರೀ ಬೇಡಿಕೆ ಕಾಯ್ದುಕೊಂಡಿದ್ದು, ಲಕ್ಷಕ್ಕೂ ಅಧಿಕ ಗ್ರಾಹಕರ ಖುಷಿಗೆ ಕಾರಣವಾಗಿರುವುದಲ್ಲದೆ ಮಾರಾಟ ವಿಭಾಗದಲ್ಲೂ ಭಾರೀ ಮುನ್ನಡೆ ಸಾಧಿಸುತ್ತಿದೆ.

ಬಿಡುಗಡೆಯ ನಂತರ ಫಾರ್ಚೂನರ್ ಕಾರಿನಲ್ಲಿ ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆ ತಂದಿರುವ ಟೊಯೊಟಾ ಸಂಸ್ಥೆಯು ಸದ್ಯದ ಪರಿಸ್ಥಿತಿಗೆ ತಕ್ಕಂತೆ ಪ್ರಭಾವಶಾಲಿ ಕಾರ್ಯಕ್ಷಮತೆ ನೀಡುವಲ್ಲಿ ಯಶಸ್ವಿಯಾಗಿವೆ ಎನ್ನಬಹುದು. ಹೀಗಾಗಿಯೇ ಆಫ್ ರೋಡ್‌ನಲ್ಲಿ ಮಾತ್ರವಲ್ಲದೇ ನಗರಪ್ರದೇಶಗಳ ಸಂಚಾರಿ ದಟ್ಟಣೆಯನ್ನು ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿವೆ.

ಎಸ್‌ಯುವಿಗಳಲ್ಲೇ ವಿಶೇಷ ಎನ್ನಿಸಿರುವ ಫಾರ್ಚೂನರ್ ಕಾರು 7 ಸೀಟರ್ ವಿನ್ಯಾಸದೊಂದಿಗೆ 2.8-ಲೀಟರ್ ಡಿಸೇಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿವೆ. ಈ ಮೂಲಕ ಡೀಸೆಲ್ ಎಂಜಿನ್ ಮಾದರಿಯು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 174.5 ಬಿಎಚ್‌ಪಿ ಮತ್ತು 420 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ, 6-ಸ್ಪೀಡ್ ಆಟೋಮ್ಯಾಟಿಕ್ ಮಾದರಿಯ ಡಿಸೇಲ್ ಎಂಜಿನ್ ಮಾದರಿಯು 450 ಎನ್ಎಂ ಉತ್ಪಾದಿಸುತ್ತೆ. ಹಾಗೆಯೇ, ಪೆಟ್ರೋಲ್ ಎಂಜಿನ್ ಪ್ರೇರಿತ ಕಾರು 164 ಬಿಎಚ್‌ಪಿ ಮತ್ತು 245 ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದು.

Toyota Fortuner - India’s Favourite Premium SUV

ಇದರಲ್ಲಿ ಟೊಯೊಟಾ ಫಾರ್ಚೂನರ್ ಡೀಸೆಲ್ ಎಂಜಿನ್ ಪ್ರೇರಿತ ಕಾರಿನಲ್ಲಿ ಮಾತ್ರ ಆಲ್ ವೀಲ್ಹ್ ಡ್ರೈವ್(4ಡಬ್ಯುಡಿ) ಟೆಕ್ನಾಲಜಿ ಸೌಲಭ್ಯವಿದ್ದು, ಇದು ಕಠಿಣ ಭೂಪ್ರದೇಶಗಳಲ್ಲೂ ಸರಾಗವಾಗಿ ಕಾರು ಚಾಲನೆಗೆ ಸಹಕರಿಸುತ್ತೆ. ಈ ಮೂಲಕ 29-ಡಿಗ್ರಿ ಮೇಲ್ಮುಖವಾಗಿ ಹಾಗೂ 25-ಡಿಗ್ರಿ ಕೆಳಮುಖವಾಗಿ ನುಗ್ಗಬಲ್ಲ ಸಾಮರ್ಥ್ಯ ಹೊಂದಿರುವ ಫಾರ್ಚೂನರ್ ಒರಟಾದ ಭೂಪ್ರದೇಶಗಳನ್ನು ಸಲೀಸಾಗಿ ನಿಭಾಯಿಸಬಲ್ಲದು. ವಿಶೇಷ ಅಂದ್ರೆ, ಈ ಸೌಲಭ್ಯವು ಫಾರ್ಚೂನರ್ ಡಿಸೇಲ್ ವರ್ಷನ್ ಪ್ರತಿ ವೆರಿಯೆಂಟ್‌ಗಳಲ್ಲೂ ಲಭ್ಯವಿದ್ದು, ಇವು ಕಾರು ಚಾಲನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿವೆ

ಬಲಿಷ್ಠ ಎಂಜಿನ್‌ನೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿರುವ ಫಾರ್ಚೂನರ್ ಎಸ್‌ಯುವಿಯು, ಪೆಟ್ರೋಲ್ ಎಂಜಿನ್ ಮೂಲಕ ಪ್ರತಿ ಲೀಟರ್‌ಗೆ 10ಕಿ.ಮಿ ಮೈಲೇಜ್ ನೀಡಿದಲ್ಲಿ ಡಿಸೇಲ್ ಎಂಜಿನ್ ಪ್ರೇರಣೆಯೊಂದಿಗೆ ಪ್ರತಿ ಲೀಟರ್‌ಗೆ 12 ರಿಂದ 14 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

Toyota Fortuner - India’s Favourite Premium SUV

ಫಾರ್ಚೂನರ್ ಪ್ರೀಮಿಯಂ ಮತ್ತು ಲಗ್ಷುರಿ ವೈಶಿಷ್ಟ್ಯತೆಯುಳ್ಳ ಗರಿಷ್ಠ ಮಟ್ಟದ ಇಂಟೀರಿಯರ್ ಸೌಲಭ್ಯಗಳೊಂದಿಗೆ ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಕಪ್ಪು ಮತ್ತು ಕಂದು ಬಣ್ಣದ ಡ್ಯುಯಲ್ ಟೋನ್ ಕ್ಯಾಬಿನ್‌ಗಳು ಕಾರಿನ ಅಂದವನ್ನು ಹೆಚ್ಚಿಸಿವೆ. ಜೊತೆಗೆ ಕಾರಿನ ಡ್ಯಾಶ್‌ಬೋರ್ಡ್ ಸಿಲ್ವರ್ ಮಾದರಿಯೊಂದಿಗೆ ಮರದ ಟ್ರಿಮ್ ಹೊಂದಿರುವುದು ಕಾರಿನ ಐಷಾರಾಮಿ ಸೌಲಭ್ಯದ ಪ್ರಮುಖ ಆಕರ್ಷಣೆಯಾಗಿದೆ.

Toyota Fortuner - India’s Favourite Premium SUV

ಫಾರ್ಚೂನರ್ ಕಾರಿನಲ್ಲಿ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆ ನೇವಿಗೆಷನ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆಟೋ ರಿಯರ್ ಕೂಲರ್, ಕ್ರೂಸ್ ಕಂಟ್ರೋಲ್, ದೊಡ್ಡದಾದ ಎಂಐಡಿ, ಕೂಲ್ಡ್ ಅಪರ್ ಗ್ರೋವ್ ಬಾಕ್ಸ್ ಮತ್ತು ಆಯ್ಕೆ ರೂಪದಲ್ಲಿರುವ ಕ್ರೋಮ್ ಲೇಪಿತ ಕೂಲ್-ಬ್ಲೂ ಕಾಂಬಿಮೀಟರ್ ಸೌಲಭ್ಯವಿದೆ. ಇವುಗಳಲ್ಲಿ ಎರಡು ಪ್ರಮುಖ ಡ್ರೈವಿಂಗ್ ಮೋಡ್‌ಗಳಿದ್ದು, ಇಕೋ ಮತ್ತು ಪವರ್ ಮೂಲಕ ಎಲ್ಲಾ ಅವಧಿಯಲ್ಲೂ ಗರಿಷ್ಠ ಇಂಧನ ದಕ್ಷತೆ ಕಾಯ್ದುಕೊಳ್ಳಬಹುದಾಗಿದೆ.

Toyota Fortuner - India’s Favourite Premium SUV

ಫಾರ್ಚೂನರ್‌ನಲ್ಲಿ ಪ್ರಯಾಣಿಕರಿಗೆ ಅನೂಕರವಾಗುವ ಹಲವು ವಿಶೇಷ ಸೌಲಭ್ಯವಿದ್ದು, ಮೃದವಾದ ದಿಂಬುಗಳು, ಮೆಟಾಲಿಕ್ ಅಸೆಂಟ್ಸ್ ಜೊತೆ ವುಡ್ ಗ್ರೈನ್ ಪ್ಯಾಟರ್ನ್ ಸೌಲಭ್ಯಗಳು ಕಾರಿನ ಪ್ರಯಾಣಕ್ಕೆ ಮತ್ತಷ್ಟು ಮೆರಗು ತರಲಿವೆ. ಕಾರಿನಲ್ಲಿ 7 ಜನ ಅರಾಮದಾಯಕವಾಗಿ ಪ್ರಯಾಣಿಸಬಹುದಾಗಿದ್ದು, ಎರಡನೇ ಮತ್ತು ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೂ ಗರಿಷ್ಠ ಸುರಕ್ಷಾ ಸೌಲಭ್ಯಗಳಿದ್ದು, ದೂರದ ಪ್ರಯಾಣದಲ್ಲೂ ನಿಮಗೆ ಯಾವುದೇ ಬೇಸರ ತರಿಸದು.

Toyota Fortuner - India’s Favourite Premium SUV

ಟೊಯೊಟಾ ಫಾರ್ಚೂನರ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಏಳು ಏರ್‌ಬ್ಯಾಗ್, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್ ಜೊತೆ ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವಲ್ಲದೆ ಎಬಿಎಸ್ ಜೊತೆ ಇಬಿಡಿ ಮತ್ತು ಡೌನ್‌ಹಿಲ್ ಅಸಿಸ್ಟ್ ಕಂಟ್ರೋಲ್(4ಡಬ್ಲ್ಯಡಿ ವೆರಿಯೆಂಟ್‌ಗಳಲ್ಲಿ ಮಾತ್ರ) ಸೌಲಭ್ಯವಿದೆ.

Toyota Fortuner - India’s Favourite Premium SUV

ಹೀಗಾಗಿ ಎಸ್‌ಯುವಿ ಖರೀದಿಸುವ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ಫಾರ್ಚೂನರ್ ಆಫ್-ರೋಡ್ ಜೊತೆ ದಿನ ನಿತ್ಯದ ಪ್ರಯಾಣಕ್ಕೂ ಅನುಕೂಲಕರವಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದು. ಒಂದು ವೇಳೆ ನೀವು ಕೂಡಾ ಐಷಾರಾಮಿ ಸೌಲಭ್ಯವುಳ್ಳ ಅತ್ಯುತ್ತಮ ಎಸ್‌ಯುವಿ ಖರೀದಿ ಯೋಜನೆಯಲ್ಲಿದ್ದರೆ ಫಾರ್ಚೂನರ್ ಆಯ್ಕೆ ಉತ್ತಮ ಎನ್ನಿಸಲಿದ್ದು, ಕಾರಿನಲ್ಲಿ ಒದಗಿಸಲಾಗಿರುವ ಪ್ರೀಮಿಯಂ ಸೌಲಭ್ಯಗಳು ಕಾರಿನ ಖದರ್ ಹೆಚ್ಚಿಸಿವೆ.

English summary
When it comes to full-size seven-seater SUVs, the first name which comes to your mind would be the Toyota Fortuner; such is the popularity of the Toyota SUV on the Indian market. The Toyota Fortuner was launched in India in 2009 and since then, it has ruled the entire off-roader segment in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X