ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಒಟ್ಟಾರೆ ತೆರಿಗೆ ಸಂಗ್ರಹ ಶೇಕಡಾ 22.5ರಷ್ಟು ಕುಸಿತ: ಮೂಲಗಳು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ಎರಡನೇ ತ್ರೈಮಾಸಿಕದಲ್ಲಿ ಮುಂಗಡ ತೆರಿಗೆ ಸಂಗ್ರಹ ಸೇರಿದಂತೆ ಕೇಂದ್ರದ ಒಟ್ಟು ತೆರಿಗೆ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ 15 ರವರೆಗೆ ಶೇಕಡಾ 22.5ರಷ್ಟು ಇಳಿದು 2,53,532.3 ಕೋಟಿಗೆ ತಲುಪಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 15, 2019 ಕ್ಕೆ ಕೊನೆಗೊಂಡ ಇದೇ ಅವಧಿಯಲ್ಲಿ ಒಟ್ಟು ತೆರಿಗೆ ಸಂಗ್ರಹವು 3,27,320.2 ಕೋಟಿ ಎಂದು ಮುಂಬೈ ವಲಯದ ಆದಾಯ ತೆರಿಗೆ ಇಲಾಖೆ ಮೂಲ ಬುಧವಾರ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದೆ.

ರಾಜ್ಯಗಳಿಗೆ ಕೊಡಬೇಕಾದ ಜಿಎಸ್‌ಟಿ ಪರಿಹಾರ 1.51 ಲಕ್ಷ ಕೋಟಿ ತಲುಪಿದೆ: ಕರ್ನಾಟಕಕ್ಕೆ ಎಷ್ಟು ಪಾಲು ಬರಬೇಕು?ರಾಜ್ಯಗಳಿಗೆ ಕೊಡಬೇಕಾದ ಜಿಎಸ್‌ಟಿ ಪರಿಹಾರ 1.51 ಲಕ್ಷ ಕೋಟಿ ತಲುಪಿದೆ: ಕರ್ನಾಟಕಕ್ಕೆ ಎಷ್ಟು ಪಾಲು ಬರಬೇಕು?

ಆದಾಗ್ಯೂ, ಪ್ರಸಕ್ತ ತ್ರೈಮಾಸಿಕದಲ್ಲಿ ಮುಂಗಡ ತೆರಿಗೆ ಸಂಖ್ಯೆಯನ್ನು ಪ್ರತ್ಯೇಕವಾಗಿ ಹಂಚಿಕೊಳ್ಳಲು ಮೂಲವು ನಿರಾಕರಿಸಿದೆ. ತಾತ್ಕಾಲಿಕ ಅಂಕಿ-ಅಂಶಗಳ ಬಗ್ಗೆ ಮೂಲವು ಕೆಲವು ವಿವರಗಳನ್ನು ಹಂಚಿಕೊಂಡಿದೆ.

Total Tax Collection Till Sept 15 Of This Fiscal Falls 22.5%: Income Tax Department sources

ಬ್ಯಾಂಕುಗಳು ತ್ರೈಮಾಸಿಕ ಅಂತ್ಯದ ವೇಳೆಗೆ ಅಂತಿಮ ಡೇಟಾವನ್ನು ನವೀಕರಿಸಲು ಸಾಧ್ಯವಾಗುವುದರಿಂದ ಸಂಖ್ಯೆಗಳು ತಾತ್ಕಾಲಿಕವಾಗಿವೆ ಎಂದು ಮೂಲಗಳು ತಿಳಿಸಿವೆ.

ಜೂನ್‌ನಿಂದ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ, ಸಾಂಕ್ರಾಮಿಕ ರೋಗದಿಂದಾಗಿ ದೇಶವು ಸಂಪೂರ್ಣ ಲಾಕ್‌ಡೌನ್ ಆಗಿದ್ದರಿಂದ, ಒಟ್ಟು ತೆರಿಗೆ ಸಂಗ್ರಹವು ಶೇಕಡಾ 31 ರಷ್ಟು ಕುಸಿದಿದೆ.

English summary
Total tax collection of the Centre, including advance tax collection for the second quarter, fell 22.5 per cent to ₹2,53,532.3 crore till September 15
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X