ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ಹೆಚ್ಚು ಟ್ರೆಂಡಿಂಗ್ ಟಾಪ್ 5 smartphone ಬ್ರ್ಯಾಂಡ್

|
Google Oneindia Kannada News

2020ರಲ್ಲಿ ಕೊರೊನಾವೈರಸ್ ಸಾಂಕ್ರಾಮಿಕದ ನಡುವೆ ಎಲ್ಲಾ ವ್ಯಾಪಾರ ವಹಿವಾಟು ಡಲ್ ಹೊಡೆದಂತೆ ಸ್ಮಾರ್ಟ್ ಫೋನ್ ಮಾರುಕಟ್ಟೆ ಕೂಡಾ ಹಿನ್ನೆಡೆ ಅನುಭವಿಸಿತ್ತು. ಆದರೆ, ಕ್ರಮೇಣ ಚೇತರಿಕೆ ಕಾಣಲು ಆನ್ ಲೈನ್ ಶಾಪಿಂಗ್ ನೆರವಾಯಿತು ಎಂದರೆ ತಪ್ಪಾಗಲಾರದು.

ಭಾರತೀಯ ಮಾರುಕಟ್ಟೆಯಲ್ಲಿ ನಂಬಿಕಸ್ಥ ಬ್ರ್ಯಾಂಡ್ ಗಳೆನಿಸಿದ ಒನ್‌ಪ್ಲಸ್, ಆಪಲ್ ಜೊತೆಗೆ ಇತರೆ ಬ್ರ್ಯಾಂಡ್ ಗಳು 2020ರಲ್ಲಿ ನಿಧಾನವಾಗಿ ಮಾರಾಟದಲ್ಲಿ ಪ್ರಗತಿ ಕಂಡಿವೆ.

2020ರಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರುಗಳ ಮಾಹಿತಿ ಇಲ್ಲಿದೆ2020ರಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರುಗಳ ಮಾಹಿತಿ ಇಲ್ಲಿದೆ

ಹೊಸ ವಿನ್ಯಾಸ, ತಂತ್ರಜ್ಞಾನ, ಆಕರ್ಷಕ ಹ್ಯಾಂಡ್ ಸೆಟ್ ಗಳನ್ನು ಸ್ಯಾಮ್ ಸಂಗ್, ಆಪಲ್, ಒನ್ ಪ್ಲಸ್ ಹಾಗೂ ಶಿಯೋಮಿ ಹೀಗೆ ಹಲವು ಬ್ರ್ಯಾಂಡ್ ಗಳು ಟ್ರೆಂಡ್ ನಲ್ಲಿತ್ತು. ಅತಿ ಹೆಚ್ಚು ಟ್ರೆಂಡ್ ನಲ್ಲಿದ್ದ ಟಾಪ್ 5 ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳ ವಿವರ ಮುಂದಿದೆ..

ಒನ್‌ಪ್ಲಸ್ 8 ಪ್ರೋ

ಒನ್‌ಪ್ಲಸ್ 8 ಪ್ರೋ

ಏಪ್ರಿಲ್ 2020ರಲ್ಲಿ ಬಿಡುಗಡೆಯಾದ ಒನ್‌ಪ್ಲಸ್ 8 ಪ್ರೋ ಅತ್ಯಂತ ಹೆಚ್ಚು ಟ್ರೆಂಡ್ ಹಾಗೂ ನಿರೀಕ್ಷೆ ಹುಟ್ಟಿಸಿದ ಬ್ರ್ಯಾಂಡ್ ಎನಿಸಿಕೊಂಡಿದೆ. 3 ಎಕ್ಸ್ ಆಪ್ಟಿಕಲ್ ಝೂಮ್ ಕ್ಯಾಮೆರಾ, 120 ಹಡ್ಜ್ ಸ್ಕ್ರೀನ್ ರಿಫ್ರೆಶ್ ದರ ಹೊಂದಿದ್ದು, ಅತ್ಯಂತ ವೇಗವಾಗಿ ವೈರ್ ಲೈಸ್ ಚಾರ್ಜಿಂಗ್ ಸಾಧನ ಹೊಂದಿದೆ. 4,510 ಎಂಎಎಚ್ ಬ್ಯಾಟರಿ ಕೆಪಾಸಿಟಿ ಇದೆ. ಎಚ್ ಡಿ ಆರ್ 10 ಪ್ಲಸ್ ಗುಣಮಟ್ಟದ ಚಿತ್ರ, ವಿಡಿಯೋ ಹೊಂದಿದ್ದು, ಗ್ರಾಹಕರ ನಿರೀಕ್ಷೆ ಹುಸಿಗೊಳಿಸದೆ ಅತ್ಯಂತ ಹೆಚ್ಚಿನ ಟ್ರೆಂಡ್, ಮಾರಾಟ ಕಂಡಿದೆ.

ಶಿಯೋಮಿ ನೋಟ್ ಸರಣಿ

ಶಿಯೋಮಿ ನೋಟ್ ಸರಣಿ

ಕೈಗೆಟುಕುವ ದರದಲ್ಲಿ ಸ್ಮಾರ್ಟ್ ಫೋನ್ ಗಳನ್ನು ನೀಡಲು ಆರಂಭಿಸಿದ ಶಿಯೋಮಿ ಈ ವರ್ಷದಲ್ಲಿ ಹೊರ ತಂದ ಮಿ ನೋಟ್ 10 ಅತ್ಯಂತ ಹೆಚ್ಚು ಟ್ರೆಂಡ್ ನಲ್ಲಿತ್ತು ಹಾಗೂ ಗ್ರಾಹಕ ಸ್ನೇಹಿ ಎನಿಸಿಕೊಂಡಿತ್ತು. 6.47 ಇಂಚು ಡಿಸ್ ಪ್ಲೇ, 5,260 ಎಂಎಎಚ್ ಬ್ಯಾಟರಿ, 108 ಎಂಪಿ ಕ್ಯಾಮೆರಾ ಹೊಂದಿದ್ದು, ಉತ್ತಮ ಗುಣಮಟ್ಟಡ ವಿಡಿಯೋ ಮೂಲಕ ಹೆಚ್ಚು ಗ್ರಾಹಕರನ್ನು ಆಕರ್ಷಿಸಿತು.

ಆಪಲ್ ಐಫೋನ್

ಆಪಲ್ ಐಫೋನ್

ಗುಣಮಟ್ಟದಲ್ಲಿ ಮಿಕ್ಕೆಲ್ಲ ಬ್ರ್ಯಾಂಡ್ ಗಳಿಗಿಂತ ಟಾಪ್ ಸ್ಥಾನದಲ್ಲಿದ್ದರೂ ಭಾರತದಲ್ಲಿ ಆಪಲ್ ಉತ್ಪನ್ನ ಖರೀದಿಸದೆ ಇರಲು ಬೆಲೆ ಮುಖ್ಯ ಕಾರಣ ಎನ್ನಬಹುದು. ವರ್ಷದ ಸ್ಮಾರ್ಟ್ ಫೋನ್ ಪಟ್ಟಿಯಲ್ಲಿ ಹೀಗಾಗಿ ಮೂರನೇ ಸ್ಥಾನದಲ್ಲಿ ಆಪಲ್ ಐಫೋನ್ 12 ಪ್ರೋ ಮ್ಯಾಕ್ಸ್ ಇದೆ. 6.7 ಇಂಚು ಸ್ಕ್ರೀನ್ , ಉತ್ತಮ ಲೋ ಲೈಟ್ ಕ್ಯಾಮೆರಾ, ಸುಧಾರಿತ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಐಫೋನ್ 12 ಪ್ರೋ ಮ್ಯಾಕ್ಸ್ ದುಬಾರಿಯಾದರೂ ಭಾರತದಲ್ಲಿ ಕ್ರೇಜ್ ಕಡಿಮೆ ಏನೂ ಆಗಿರಲಿಲ್ಲ. ತಕ್ಕಮಟ್ಟಿನ ಮಾರಾಟವನ್ನು ದಾಖಲಿಸಿತು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಸರಣು

ಸ್ಯಾಮ್ ಸಂಗ್ ಗ್ಯಾಲಕ್ಸಿ ಸರಣು

2020ರಲ್ಲಿ ಆರ್ಥಿಕ ಹೊಡೆತಕ್ಕೆ ಸಿಲುಕಿದರೂ ಸ್ಯಾಮ್ ಸಂಗ್ ನಿಧಾನಗತಿಯಲ್ಲಿ ಚೇತರಿಕೆ ಕಂಡು ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಮತ್ತೆ ಟಾಪ್ 5ರೊಳಗೆ ಸ್ಥಾನ ಪಡೆದುಕೊಂಡಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಸರಣಿಯ ಎಸ್ 20 ಉತ್ತಮ ಸ್ಕ್ರೀನ್ ರೀಫ್ರೆಶ್ ದರ (120 Hz) ಹೊಂದಿದ್ದು, ತಕ್ಕಮಟ್ಟಿನ ಬ್ಯಾಟರಿ ಬ್ಯಾಕಪ್, ರಿವರ್ಸ್ ಪವರ್ ಸೌಲಭ್ಯ, ಲೋ ಲೈಟ್ ಕ್ಯಾಮೆರಾ ಸೌಲಭ್ಯಗಳು ಸ್ಯಾಮ್ ಸಂಗ್ ಗ್ರಾಹಕರನ್ನು ಆಕರ್ಷಿಸಿತ್ತು.

ಒಪ್ಪೋ

ಒಪ್ಪೋ

ಸ್ಯಾಮ್ ಸಂಗ್ ಸಂಸ್ಥೆಯಂತೆ ಒಪ್ಪೋ ಕೂಡಾ ಈ ವರ್ಷ ಹೆಚ್ಚಿನ ಸದ್ದು ಮಾಡಿಲ್ಲ, ಆದರೆ, ಒಪ್ಪೋ ಫೈಂಡ್ ಎಕ್ಸ್ 2 ಪ್ರೋ ತನ್ನ 60 ಎಕ್ಸ್ ಆಪ್ಟಿಕಲ್ ಜೂಮ್ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆದಿದ್ದು ಸುಳ್ಳಲ್ಲ. ಟಾಪ್ ನಾಚ್ ಪ್ರೊಸೆಸರ್ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದರೂ ಬೆಲೆ ವಿಷಯದಲ್ಲಿ ರಾಜಿಯಾಗದ ಕಾರಣ ಐದನೆ ಸ್ಥಾನಕ್ಕೆ ದೂಡಲ್ಪಟ್ಟಿದೆ.

English summary
Here are the Top five smartphones of the year 2020 based on technical specifications, price and other specifications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X