ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಸಾಲಗಾರರು ಬ್ಯಾಂಕ್‌ಗೆ ಹಿಂತಿರುಗಿಸದ ಮೊತ್ತ 84,632 ಕೋಟಿ ರೂಪಾಯಿ

|
Google Oneindia Kannada News

ನವದೆಹಲಿ, ಫೆಬ್ರವರಿ 09: ದೇಶದಲ್ಲಿ ಉದ್ದೇಶಪೂರ್ವಕವಾಗಿ ಸಾಲ ಹಿಂದಿರುಗಿಸದ ಅಗ್ರ 100 ಸಾಲಗಾರರ ಪಟ್ಟಿ ಬಿಡುಗಡೆಯಾಗಿದ್ದು, ಈ ಡಿಫಾಲ್ಟರ್‌ಗಳು ಬ್ಯಾಂಕ್‌ಗಳಿಗೆ ಹಿಂತಿರುಗಿಸಬೇಕಾದ ಒಟ್ಟು ಮೊತ್ತವು 84,632 ಕೋಟಿ ರೂಪಾಯಿನಷ್ಟಿದೆ.

ಮಾರ್ಚ್ 2020ರ ವೇಳೆಗೆ ಟಾಪ್ 10 ಸಾಲಗಾರರಲ್ಲಿ ಗೀತಾಂಜಲಿ ಜೆಮ್ಸ್, ವಿನ್ಸಮ್ ಡೈಮಂಡ್ಸ್ ಮತ್ತು ಜ್ಯುವೆಲ್ಲರಿ, ಕಿಂಗ್‌ಫಿಶರ್ ಏರ್‌ಲನ್ಸ್‌ನಿಂದಲೇ ಬರಬೇಕಾದ ಮೊತ್ತವು ಶೇಕಡಾ 32ರಷ್ಟಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಅಂಕಿ ಅಂಶಗಳು ತೋರಿಸಿವೆ.

ಬ್ಯಾಂಕ್‌ಗಳು ತಮ್ಮ ಬ್ಯಾಲೆನ್ಸ್ ಶೀಟ್ ಸರಿಯಾಗಿ ಇರಿಸಿಕೊಳ್ಳಲು ಮತ್ತು ತೆರಿಗೆ ಅನುಕೂಲ ಪಡೆಯಲು ಸುಮಾರು ನಾಲ್ಕನೇ ಮೂರು ಭಾಗದಷ್ಟು ಮೊತ್ತವನ್ನು ರೈಟ್ ಆಫ್ ಮಾಡಲಾಗಿದೆ.

 Top 100 Wilful Defaulters Owe Lenders Rs 84,632 Crore: Know More

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿರುವ ಆರ್‌ಬಿಐ ಮಾಹಿತಿಯ ಪ್ರಕಾರ, ಟಾಪ್ 100 ಉದ್ದೇಶಪೂರ್ವಕ ಸಾಲಗಾರರ ಒಟ್ಟು ಗಾತ್ರವು 2019 ರ ಮಾರ್ಚ್ ವೇಳೆಗೆ 80,344 ಕೋಟಿ ರೂ.ಗಳಿಂದ ಶೇಕಡಾ 5.34ರಷ್ಟು ಏರಿಕೆಯಾಗಿದೆ.

ಮಾರ್ಚ್‌ 2020ರವರೆಗೆ ಹೆಚ್ಚಿನ ಮೊತ್ತ ಬಾಕಿ ಉಳಿಸಿಕೊಂಡಿರುವ ಅಗ್ರ ಸಾಲಗಾರರು

ಗೀತಾಂಜಲಿ ಜೆಮ್ಸ್ 5,693 ಕೋಟಿ ರೂಪಾಯಿ

ಆರ್‌ಇಐ ಆಗ್ರೋ 4,403 ಕೋಟಿ ರೂಪಾಯಿ

ವಿನ್ಸಮ್ ಡೈಮಂಡ್ಸ್ 3,375 ಕೋಟಿ ರೂಪಾಯಿ

ಕುಡೋಸ್ ಕೆಮಿ 2,326 ಕೋಟಿ ರೂಪಾಯಿ

ರೊಟೊಮ್ಯಾಕ್ ಗ್ಲೋಬಲ್ 2,028 ಕೋಟಿ ರೂಪಾಯಿ

ಜ್ಹೂಮ್ ಡೆವಲಪರ್ಸ್ 1,927 ಕೋಟಿ ರೂಪಾಯಿ

ಎಬಿಜಿ ಶಿಪ್ ಯಾರ್ಡ್ 1,875 ಕೋಟಿ ರೂಪಾಯಿ

ಫ್ರಾಸ್ಟ್ ಇಂಟರ್ ನ್ಯಾಷನಲ್ 1,840 ಕೋಟಿ ರೂಪಾಯಿ

ಫಾರೆವರ್ ಪ್ರಿಷಿಯಸ್ ಜ್ಯುವೆಲ್ಲರಿ 1,715 ಕೋಟಿ ರೂಪಾಯಿ

ಕಿಂಗ್ ಫಿಶರ್ ಏರ್ ಲೈನ್ಸ್ 1,663 ಕೋಟಿ ರೂಪಾಯಿ

English summary
The country’s top 100 wilful Defaulters owe Rs 84,632 crore to banks as of March 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X