ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೊಮ್ಯಾಟೊ ಬೆಲೆ ಏರಿಕೆ, ಕೇಂದ್ರ ಸಚಿವರ ಪಾಸ್ವಾನ್ ಸಮರ್ಥನೆ

|
Google Oneindia Kannada News

ನವದೆಹಲಿ, ಜುಲೈ 10: ಈರುಳ್ಳಿಗೆ ಹೋಲಿಸಿದರೆ ಟೊಮ್ಯಾಟೊಗೆ ಆಯಸ್ಸು ಕಮ್ಮಿ. ಚಟ್ನಿ, ಸಾರು, ಜಾಮ್, ಗೊಜ್ಜು ಹೀಗೆ ಮಾರುಕಟ್ಟೆಯಿಂದ ತಂದ ದಿನವೇ ಬಳಸುವುದು ಮಾಮೂಲಿ. ಇಂಥ ಟೊಮ್ಯಾಟೊ ಬಳಕೆ ಈಗ ಹೆಚ್ಚಳವಾಗುತ್ತಿದೆ. ದೇಶದ ಬಹುತೇಕ ಎಲ್ಲಾ ನಗರಗಳಲ್ಲಿ ಸರಾಸರಿ 70 ರಿಂದ 80 ರು ಪ್ರತಿ ಕೆ.ಜಿಯಂತೆ ಮಾರಾಟವಾಗುತ್ತಿದೆ. ಈ ಬಗ್ಗೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸ್ಪಷ್ಟನೆ ನೀಡಿದ್ದಾರೆ.

ಸರಿಯಾದ ಪೂರೈಕೆ ಇಲ್ಲದ ಕಾರಣ, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದರಿಂದ ದಿಢೀರ್ ಆಗಿ ಬೆಲೆ ವ್ಯತ್ಯಾಸ ಕಂಡು ಬಂದಿದೆ. ಇನ್ನು ಹರ್ಯಾಣ, ಪಂಜಾಬ್ ಸೇರಿದಂತೆ ಹಲವೆಡೆ ಅಕಾಲಿಕ ಮಳೆಗೆ ಟೊಮ್ಯಾಟೊ ಬೆಳೆ ಹಾಳಾಗಿದೆ ಎಂದು ಗ್ರಾಹಕ ವ್ಯವಹಾರಗಳ ಖಾತೆ ಸಚಿವ್ ಪಾಸ್ವಾನ್ ಹೇಳಿದ್ದಾರೆ.

ಆಲೂಗೆಡ್ಡೆ ಮತ್ತು ಟೊಮ್ಯಾಟೊ ಬೆಳೆ ರಕ್ಷಣೆಗೆ ಸರಳ ಸೂತ್ರಗಳುಆಲೂಗೆಡ್ಡೆ ಮತ್ತು ಟೊಮ್ಯಾಟೊ ಬೆಳೆ ರಕ್ಷಣೆಗೆ ಸರಳ ಸೂತ್ರಗಳು

ಎಲ್ಲೆಡೆ ಟೊಮ್ಯಾಟೊ ಬೆಲೆ 80 ರು ಪ್ರತಿ ಕೆಜಿಯಂತೆ ತಲುಪಿಲ್ಲ, ಚೆನ್ನೈ ಬಿಟ್ಟು ಎಲ್ಲಾ ಮೆಟ್ರೋ ನಗರಗಳಲ್ಲಿ 60 ರು ನಂತೆ ಇದೆ ಎಂದಿದ್ದಾರೆ. ಕಳೆದ ತಿಂಗಳು ಚೆನ್ನೈ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ 20 ರು ನಂತೆ ಟೊಮ್ಯಾಟೊ ಮಾರಾಟವಾಗುತ್ತಿತ್ತು. ಸದ್ಯ ಹೈದರಾಬಾದಿನಲ್ಲಿ 37 ರು, ಚೆನ್ನೈನಲ್ಲಿ 40ರು ಹಾಗೂ ಬೆಂಗಳೂರಿನಲ್ಲಿ 46 ಪ್ರತಿ ಕೆಜಿಯಷ್ಟಿದೆ.

Tomato prices rise to Rs 60-70/kg in most cities; Paswan

ಗುರುಗ್ರಾಮ, ಗ್ಯಾಂಗ್ ಟೊಕ್,ಸಿಲಿಗುರಿ, ರಾಯ್ ಪುರ್ ನಲ್ಲಿ 70 ರು ಪ್ರತಿ ಕೆಜಿ, ಗೋರಖ್ ಪುರ್, ಕೋಟಾ, ದಿಮಾಪುರ್ ನಲ್ಲಿ 80 ರು ಪ್ರತಿ ಕೆಜಿಯಂತೆ ಮಾರಾಟವಾಗುತ್ತಿದೆ.

ಎಲ್ಲರ ಅಡುಗೆಮನೆಯ ಸಾರ್ವಭೌಮ ಅವಗೂದೆ ಯಾನೆ ಟೊಮೆಟೊ ಹಣ್ಣು!ಎಲ್ಲರ ಅಡುಗೆಮನೆಯ ಸಾರ್ವಭೌಮ ಅವಗೂದೆ ಯಾನೆ ಟೊಮೆಟೊ ಹಣ್ಣು!

ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬೆಂಗಾಲ ಹಾಗೂ ಒಡಿಶಾ ರಾಜ್ಯಗಳು ದೇಶದಲ್ಲಿ ಹೆಚ್ಚು ಟೊಮ್ಯಾಟೊ ಉತ್ಪಾದಿಸುವ ರಾಜ್ಯಗಳಾಗಿವೆ. ಉತ್ತರಪ್ರದೇಶ, ರಾಜಸ್ಥಾನ, ಜಾರ್ಖಂಡ್, ಪಂಜಾಬ್, ತಮಿಳುನಾಡು, ಕೇರಳ, ಜಮ್ಮು ಮತ್ತು ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶದಲ್ಲಿ ಬೇಡಿಕೆ ಹೆಚ್ಚಿದೆ. ಉತ್ಪಾದನಾ ಪ್ರಮಾಣ ಪ್ರತಿ ವರ್ಷ ಸರಾಸರಿ 18 ರಿಂದ 20 ಮಿಲಿಯನ್ ಟನ್ ಗಳಷ್ಟು ದಾಖಲಾಗುತ್ತದೆ. ಬಳಕೆ 11.51 ಮಿಲಿಯನ್ ಟನ್ ನಷ್ಟಿದೆ.

English summary
As retail prices of tomato surged to Rs 60-70 per kg in almost all big cities, Consumer Affairs Minister Ram Vilas Paswan on Thursday said the price volatility was due to lean production season and high perishability of the commodity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X