ಇಳಿಯುತ್ತಲೇ ಸಾಗಿದ ಚಿನ್ನದ ಬೆಲೆ: ಜುಲೈ 6ರ ದರ ಇಲ್ಲಿದೆ
ನವದೆಹಲಿ, ಜುಲೈ 6: ಭಾರತೀಯ ಮಾರುಕಟ್ಟೆಯಲ್ಲಿ ದಾಖಲೆಯ ಮಟ್ಟ ತಲುಪಿ ಕಳೆದ ಹಲವು ವಹಿವಾಟುಗಳಲ್ಲಿ ಇಳಿಯುತ್ತಲೇ ಸಾಗಿದ ಹಳದಿ ಲೋಹದ ಬೆಲೆ ಸೋಮವಾರ ಮತ್ತಷ್ಟು ಕುಸಿದಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 46,900 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 48,100 ರುಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,090 ರುಪಾಯಿ ಹೆಚ್ಚಾಗಿ 49,600 ರುಪಾಯಿಗೆ ಏರಿಕೆಯಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 06: 45,350-49,450 (310 ರುಪಾಯಿ ಇಳಿಕೆ)
ಜುಲೈ 05: 45,660-49,760
ಜುಲೈ 04: 45,650-49,750
ಜುಲೈ 03: 45,700-49,850
ಎಸ್ಬಿಐ ಚಿನ್ನದ ಹಣಗಳಿಸುವ ಯೋಜನೆ: 13,212 ಕೆ.ಜಿ ಚಿನ್ನ ಸಂಗ್ರಹ
ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 06: 46,900-48,100 (220 ರುಪಾಯಿ ಇಳಿಕೆ)
ಜುಲೈ 05: 47,120-48,320
ಜುಲೈ 04: 47,110-48,310 (40 ರುಪಾಯಿ ಇಳಿಕೆ)
ಜುಲೈ 03: 47,150-48,350
ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 06: 46,100-50,710 (140 ರುಪಾಯಿ ಇಳಿಕೆ)
ಜುಲೈ 05: 46,240-50,850
ಜುಲೈ 04: 46,230-50,840
ಜುಲೈ 03: 46,270-50,880
ದಾಖಲೆಯ ಗಡಿ ಮುಟ್ಟಿದ್ದ ಚಿನ್ನದ ಬೆಲೆ ಸತತ 3ನೇ ಇಳಿಕೆ
ಮುಂಬೈ ಚಿನ್ನದ ಬೆಲೆ
ಜುಲೈ 06: 46,950-47,950 (490 ರುಪಾಯಿ ಏರಿಕೆ)
ಜುಲೈ 05: 46,460-47,460
ಜುಲೈ 04: 46,510-47,510
ಜುಲೈ 03: 46,500-47,500
ಜೈಪುರ ಚಿನ್ನದ ಬೆಲೆ
ಜುಲೈ 06: 46,900-48,100 (220 ರುಪಾಯಿ ಇಳಿಕೆ)
ಜುಲೈ 05: 47,120-48,320
ಜುಲೈ 04: 47,110-48,310
ಜುಲೈ 03: 47,150-48,350
ಚಂಡೀಗಡ ಚಿನ್ನದ ಬೆಲೆ
ಜುಲೈ 06: 46,280-48,280 (60 ರುಪಾಯಿ ಇಳಿಕೆ)
ಜುಲೈ 05: 46,340-48,340
ಜುಲೈ 04: 46,330-48,330
ಜುಲೈ 03: 46,370-48,370
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.