ಚಿನ್ನದ ಬೆಲೆ ಮತ್ತಷ್ಟು ಜಿಗಿತ: ಯಾವ ನಗರದಲ್ಲಿ ಎಷ್ಟು ಹೆಚ್ಚಾಗಿದೆ ಗೊತ್ತಾ?
ನವದೆಹಲಿ, ಜುಲೈ 30: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತ 10ನೇ ದಿನ ಏರಿಕೆಗೊಂಡಿದೆ. ಗುರುವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 300 ರೂಪಾಯಿ ಏರಿಕೆಗೊಂಡು 51,800 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 53,000 ರೂ. ಗಡಿ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 3,050 ರೂಪಾಯಿ ಇಳಿಕೆಗೊಂಡು 63,000 ರೂಪಾಯಿಗೆ ತಗ್ಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಚಿನ್ನ ಇದೀಗ ಮತ್ತಷ್ಟು ದುಬಾರಿ: ಜುಲೈ 29ರ ದರ ಹೀಗಿದೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 30: 50,450-54,950 (600 ರೂಪಾಯಿ ಏರಿಕೆ)
ಜುಲೈ 29: 49,850-54,350
ಜುಲೈ 28: 49,550-54,050
ಜುಲೈ 27: 49,070-53,530
ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 30: 51,800-53,000 (300 ರೂಪಾಯಿ ಏರಿಕೆ)
ಜುಲೈ 29: 51,500-52,700
ಜುಲೈ 28: 51,250-52,450
ಜುಲೈ 27: 50,800-52,000
ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 30: 51,030-55,600 (290 ರೂಪಾಯಿ ಏರಿಕೆ)
ಜುಲೈ 29: 50,740-55,310
ಜುಲೈ 28: 50,370-54,940
ಜುಲೈ 27: 49,780-54,300
ಮುಂಬೈ ಚಿನ್ನದ ಬೆಲೆ
ಜುಲೈ 30: 51,100-52,100 (300 ರೂಪಾಯಿ ಏರಿಕೆ)
ಜುಲೈ 29: 51,400-52,400
ಜುಲೈ 28: 50,260-51,260
ಜುಲೈ 27: 50,620-51,650
ಜೈಪುರ ಚಿನ್ನದ ಬೆಲೆ
ಜುಲೈ 30: 51,800-53,000 (300 ರೂಪಾಯಿ ಏರಿಕೆ)
ಜುಲೈ 29: 51,500-52,700
ಜುಲೈ 28: 51,250-52,450
ಜುಲೈ 27: 50,800-52,000
ಚಂಡೀಗಡ ಚಿನ್ನದ ಬೆಲೆ
ಜುಲೈ 30: 51,800-54,800 (1200 ರೂಪಾಯಿ ಏರಿಕೆ)
ಜುಲೈ 29: 50,600-53,600
ಜುಲೈ 28: 50,200-53,200
ಜುಲೈ 27: 50,800-53,700
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.