ಚಿನ್ನದ ಬೆಲೆ ಇಳಿಕೆ: ಆಭರಣ ಚಿನ್ನ 10 ಗ್ರಾಂ 400 ರುಪಾಯಿ ಕಡಿಮೆ
ನವದೆಹಲಿ, ಜುಲೈ 2: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಗುರುವಾರ ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 47,150 ರುಪಾಯಿಗೆ ಇಳಿಕೆಗೊಂಡಿದೆ. ಶುದ್ಧ ಚಿನ್ನವು 10 ಗ್ರಾಂ 48,350 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 1,450 ರುಪಾಯಿ ಇಳಿಕೆಗೊಂಡು 48,600 ರುಪಾಯಿಗೆ ತಗ್ಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಎಸ್ಬಿಐ ಚಿನ್ನದ ಹಣಗಳಿಸುವ ಯೋಜನೆ: 13,212 ಕೆ.ಜಿ ಚಿನ್ನ ಸಂಗ್ರಹ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 02: 45,670-49,820 (380 ರುಪಾಯಿ ಇಳಿಕೆ)
ಜುಲೈ 01: 46,050-50,200
ಜೂನ್ 30: 45,680-49,830
ಜೂನ್ 29: 45,750-49,900
ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 02: 47,150-48,350 (400 ರುಪಾಯಿ ಇಳಿಕೆ)
ಜುಲೈ 01: 47,550-48,750
ಜೂನ್ 30: 47,100-48,300
ಜೂನ್ 29: 47,250-48,450
ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 02: 46,330-50,940 (410 ರುಪಾಯಿ ಇಳಿಕೆ)
ಜುಲೈ 01: 46,740-50,950
ಜೂನ್ 30: 46,270-50,480
ಜೂನ್ 29: 46,450-50,660
ಮುಂಬೈ ಚಿನ್ನದ ಬೆಲೆ
ಜುಲೈ 02: 46,540-47,540 (1,110 ರುಪಾಯಿ ಇಳಿಕೆ)
ಜುಲೈ 01: 47,650-48,650
ಜೂನ್ 30: 47,350-48,350
ಜೂನ್ 29: 47,300-48,300
ಜೈಪುರ ಚಿನ್ನದ ಬೆಲೆ
ಜುಲೈ 02: 47,150-48,350 (400 ರುಪಾಯಿ ಇಳಿಕೆ)
ಜುಲೈ 01: 47,550-48,750
ಜೂನ್ 30: 47,100-48,300
ಜೂನ್ 29: 47,250-48,450
ಚಂಡೀಗಡ ಚಿನ್ನದ ಬೆಲೆ
ಜುಲೈ 02: 46,660-48,660 (320 ರುಪಾಯಿ ಇಳಿಕೆ)
ಜುಲೈ 01: 46,980-48,980
ಜೂನ್ 30: 46,560-48,560
ಜೂನ್ 29: 46,690-48,990
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.