ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ: 10 ಗ್ರಾಂ 500 ರುಪಾಯಿ ಹೆಚ್ಚಳ
ನವದೆಹಲಿ, ಜೂನ್ 27: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಹಾವು-ಏಣಿ ಆಟ ಮುಂದುವರಿದಿದೆ. ಶನಿವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 500 ರುಪಾಯಿ ಏರಿಕೆಗೊಂಡಿದ್ದು, 47,200 ರುಪಾಯಿ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 48,400 ರುಪಾಯಿಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 400 ರುಪಾಯಿ ಹೆಚ್ಚಳಗೊಂಡು 48,100 ರುಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಎಷ್ಟು ಕಡಿಮೆ ಆಗಿದೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜೂನ್ 27: 45,740-49,870 (470 ರುಪಾಯಿ ಏರಿಕೆ)
ಜೂನ್ 26: 45,250-49,400
ಜೂನ್ 25: 45,490-49,640
ಜೂನ್ 24: 45,680-49,830
ದೆಹಲಿಯಲ್ಲಿ ಚಿನ್ನದ ಬೆಲೆ
ಜೂನ್ 27: 47,200-48,400 (500 ರುಪಾಯಿ ಏರಿಕೆ)
ಜೂನ್ 26: 46,700-47,900
ಜೂನ್ 25: 46,800-48,060
ಜೂನ್ 24: 47,050-48,250
ದಾಖಲೆಯ ಗಡಿ ಮುಟ್ಟಿದ್ದ ಚಿನ್ನದ ಬೆಲೆ ಸತತ 3ನೇ ಇಳಿಕೆ
ಚೆನ್ನೈನಲ್ಲಿ ಚಿನ್ನದ ಬೆಲೆ
ಜೂನ್ 27: 46,400-50,610 (220 ರುಪಾಯಿ ಏರಿಕೆ)
ಜೂನ್ 26: 46,180-50,390
ಜೂನ್ 25: 46,160-50,370
ಜೂನ್ 24: 46,350-50,560
ಮುಂಬೈ ಚಿನ್ನದ ಬೆಲೆ
ಜೂನ್ 27: 47,350-48,350 (100 ರುಪಾಯಿ ಏರಿಕೆ)
ಜೂನ್ 26: 47,250-48,250
ಜೂನ್ 25: 47,200-48,210
ಜೂನ್ 24: 47,400-48,400
ಜೈಪುರ ಚಿನ್ನದ ಬೆಲೆ
ಜೂನ್ 27: 47,200-48,400 (500 ರುಪಾಯಿ ಏರಿಕೆ)
ಜೂನ್ 26: 46,700-47,900
ಜೂನ್ 25: 46,860-48,060
ಜೂನ್ 24: 47,050-48,250
ಚಂಡೀಗಡ ಚಿನ್ನದ ಬೆಲೆ
ಜೂನ್ 27: 46,800-48,800 (ಬದಲಾವಣೆ ಇಲ್ಲ)
ಜೂನ್ 26: 46,800-48,800
ಜೂನ್ 25: 46,800-48,800
ಜೂನ್ 24: 47,000-49,000
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.