ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ: ಬೆಳ್ಳಿ ಕೆಜಿಗೆ 1,500 ರುಪಾಯಿ ಹೆಚ್ಚಳ
ನವದೆಹಲಿ, ಜುಲೈ 1: ಮಂಗಳವಾರ ಇಳಿಕೆ ಕಂಡಿದ್ದ ಹಳದಿ ಲೋಹದ ಬೆಲೆಯು ಬುಧವಾರ ಏರಿಕೆ ದಾಖಲಿಸಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 450 ರುಪಾಯಿ ಏರಿಕೆಗೊಂಡು 47,550 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 48,750 ರುಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,500 ರುಪಾಯಿ ಹೆಚ್ಚಳಗೊಂಡು 50 ಸಾವಿರ ಗಡಿ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆ ಇಳಿಕೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 01: 46,050-50,200 (370 ರುಪಾಯಿ ಏರಿಕೆ)
ಜೂನ್ 30: 45,680-49,830
ಜೂನ್ 29: 45,750-49,900
ಜೂನ್ 28: 45,730-49,880
ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 01: 47,550-48,750 (450 ರುಪಾಯಿ ಏರಿಕೆ)
ಜೂನ್ 30: 47,100-48,300
ಜೂನ್ 29: 47,250-48,450
ಜೂನ್ 28: 47,210-48,410
ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 01: 46,740-50,950 (470 ರುಪಾಯಿ ಏರಿಕೆ)
ಜೂನ್ 30: 46,270-50,480
ಜೂನ್ 29: 46,450-50,660
ಜೂನ್ 28: 46,410-50,620
ಮುಂಬೈ ಚಿನ್ನದ ಬೆಲೆ
ಜುಲೈ 01: 47,650-48,650 (300 ರುಪಾಯಿ ಏರಿಕೆ)
ಜೂನ್ 30: 47,350-48,350
ಜೂನ್ 29: 47,300-48,300
ಜೂನ್ 28: 47,360-48,360
ಜೈಪುರ ಚಿನ್ನದ ಬೆಲೆ
ಜುಲೈ 01: 47,550-48,750 (450 ರುಪಾಯಿ ಏರಿಕೆ)
ಜೂನ್ 30: 47,100-48,300
ಜೂನ್ 29: 47,250-48,450
ಜೂನ್ 28: 47,210-48,410
ಚಂಡೀಗಡ ಚಿನ್ನದ ಬೆಲೆ
ಜುಲೈ 01: 46,980-48,980 (420 ರುಪಾಯಿ ಏರಿಕೆ)
ಜೂನ್ 30: 46,560-48,560
ಜೂನ್ 29: 46,690-48,990
ಜೂನ್ 28: 46,810-48,810
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.