ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೊಗರಿ ಬೇಳೆ ಪ್ರತಿ ಕೆ.ಜಿಗೆ 110 ರು ಮಾತ್ರ

By Mahesh
|
Google Oneindia Kannada News

ಚೆನ್ನೈ, ಅ.21: ತೊಗರಿಬೇಳೆ ಅಕ್ರಮ ದಾಸ್ತಾನು ವಿರುದ್ಧ ಕೇಂದ್ರ ಸರ್ಕಾರ ಕ್ರಮ ಜರುಗಿಸುತ್ತಿದೆ. ಪ್ರತಿ ಕೆಜಿ ಬೆಳೆಗೆ ಚಿನ್ನದ ಬೆಲೆ ಬಂದಿದೆ. ಈ ನಡುವೆ ಆಮದು ಬೆಳೆಯನ್ನು ಕೆಜಿಗೆ 110 ರು ದರದಂತೆ ಮಾರಲು ತಮಿಳುನಾಡು ಸರ್ಕಾರ ಮುಂದಾಗಿದೆ.

ತೊಗರಿ ಬೇಳೆಯ ಬೆಲೆ ಪ್ರತಿ ಕಿಲೋಕ್ಕೆ 210 ರು.ಗೆ ತಲುಪಿದೆ. ಉದ್ದಿನಬೇಳೆ 198 ರು, ಹೆಸರುಬೇಳೆ 135 ರು, ಮಸೂರ್ 120 ರು ಮತ್ತು ಕಡ್ಲೆ 84 ರು ಗೆ ಏರಿದೆ. ಐದು ರಾಜ್ಯಗಳಲ್ಲಿ ಅಕ್ರಮ ದಾಸ್ತಾನುಕೋರರ ಮೇಲೆ ನಡೆಸಿದ ದಾಳಿಗಳಲ್ಲಿ 5,800 ಟನ್‌ಗೂ ಅಧಿಕ ಬೇಳೆಕಾಳುಗಳ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ. [ತೊಗರಿ ದರ ಈ ಪರಿ ಏರಲು ಕಾರಣವೇನು?]

ಕಳೆದ ಕೆಲವು ತಿಂಗಳುಗಳಲ್ಲಿ ಐದು ರಾಜ್ಯಗಳಲ್ಲಿ 5,800 ಟನ್‌ಗೂ ಅಧಿಕ ಬೇಳೆಕಾಳುಗಳನ್ನು ವಶಪಡಿಸಿಕೊಳ್ಳಲಾಗಿದೆ. ತೆಲಂಗಾಣದಲ್ಲಿ ಸುಮಾರು 2,546,ಮಧ್ಯ ಪ್ರದೇಶದಲ್ಲಿ 2,295, ಆಂಧ್ರ ಪ್ರದೇಶದಲ್ಲಿ 600, ಕರ್ನಾಟಕದಲ್ಲಿ 360 ಮತ್ತು ಮಹಾರಾಷ್ಟ್ರದಲ್ಲಿ 1ಟನ್ ಬೇಳೆಕಾಳುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಸಿ.ವಿಶ್ವನಾಥ್ ಹೇಳಿದ್ದಾರೆ.

TN government to sell toor dal at Rs 110 a kg

ತಮಿಳುನಾಡಿನ ಬೆಲೆ ಕಡಿಮೆ: ಕೇಂದ್ರ ಸರ್ಕಾರದಿಂದ ಆಮದು ಮಾಡಿಕೊಂಡ ಸುಮಾರು 500 ಟನ್ ಗಳಷ್ಟು ತೊಗರಿಬೇಳೆಯನ್ನು ತಮಿಳುನಾಡು ಸರ್ಕಾರ ಕಡಿಮೆ ಬೆಲೆಯಲ್ಲಿ ಮಾರಲು ಮುಂದಾಗಿದೆ. ಈ ವ್ಯವಸ್ಥೆ ನವೆಂಬರ್ 1 ರಿಂದ ಜಾರಿಗೆ ಬರಲಿದ್ದು, 91 ಸಹಕಾರಿ ಸಂಘ ಮಳಿಗೆಗಳಲ್ಲಿ ಲಭ್ಯವಿರುತ್ತದೆ.

ನವೆಂಬರ್ 1 ರಿಂದ ಅರ್ಧ ಹಾಗೂ ಒಂದು ಕೆಜಿ ಪ್ಯಾ ಕ್ ಗಳಲ್ಲಿ ಮಾರಾಟ ಮಾಡಲಾಗುವುದು. ಚೆನ್ನೈ ನಲ್ಲಿ (56 ಮಳಿಗೆ), ತಿರುಚನಾಪಲ್ಲಿಯಲ್ಲಿ 14, ಕೊಯಮತ್ತೂರಿನಲ್ಲಿ 10 ಮಳಿಗೆಯಲ್ಲಿ ಕಡಿಮೆ ದರದಲ್ಲಿ ಸಿಗಲಿದೆ. ಧಾನ್ಯಗಳು 110 ರು ಪ್ರತಿ ಕೆಜಿಯಂತೆ ಹಾಗೂ ಅರ್ಧ ಕೆಜಿ 55ರು ನಂತೆ ಮಾರಾಟ ಮಾಡಲಾಗುವುದು.

ತಮಿಳುನಾಡಿನಲ್ಲಿ ಪಡಿತರ ಕಾರ್ಡ್ ದಾರರು ಧಾನ್ಯಗಳನ್ನು 30ರು ಪ್ರತಿ ಕೆಜಿಯಂತೆ ಪಡೆಯುತ್ತಿದ್ದರೆ, ಪಾಮೋಲಿನ್ ಆಯಿಲ್ 25 ರು ಪ್ರತಿ ಲೀಟರ್ ನಂತೆ ಸಿಗುತ್ತಿದೆ. ಕರ್ನಾಟಕ ಸರ್ಕಾರ ಕೂಡಾ ಅಕ್ರಮ ದಾಸ್ತಾನುಗಳ ಮೇಲೆ ಹೆಚ್ಚಿನ ನಿಗಾವಹಿಸಿ ಬೆಳೆ ಇಳಿಕೆ ಮಾಡಿ ಮಾರಾಟಕ್ಕೆ ಮುಂದಾದರೆ ನಿತ್ಯ ಬೆಳೆ ಸಾರು, ಬೆಳೆ ಒಬ್ಬಟ್ಟು ಹಬ್ಬದ ಸಮಯದಲ್ಲಿ ತಿನ್ನಬಹುದು. ಇಲ್ಲದಿದ್ದರೆ ಕರ್ನಾಟಕದ ಪ್ರಮುಖ ಧಾನ್ಯ ರಾಗಿ ಅಂಬಲಿಯೇ ಬೆಸ್ಟ್. (ಪಿಟಿಐ)

English summary
The Tamil Nadu government will make available 500 tonnes of imported toor dal allotted by the Central government at Rs 110 a kg through 91 cooperative outlets effective November 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X