ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ರಿಟರ್ನ್ ಇ-ಪರಿಶೀಲನೆ ಕಡ್ಡಾಯ: ಇ-ಪರಿಶೀಲನೆಗೆ ಮಾಡುವುದು ಹೀಗೆ

|
Google Oneindia Kannada News

ಜುಲೈ 31, 2022 ರವರೆಗೆ 5.82 ಕೋಟಿ ಜನರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ ಮತ್ತು ಅವರಲ್ಲಿ 4 ಕೋಟಿ ತೆರಿಗೆದಾರರು ಮಾತ್ರ ಆದಾಯ ತೆರಿಗೆ ರಿಟರ್ನ್ ಇ-ಪರಿಶೀಲನೆ ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆಯು ಪರಿಶೀಲನೆ ಮಾಡದ ಐಟಿಆರ್‌ಗಳನ್ನು ಅಮಾನ್ಯವೆಂದು ಪರಿಗಣಿಸುತ್ತದೆ. ಆದ್ದರಿಂದ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್‌ಗಳನ್ನು ಪರಿಶೀಲಿಸುವ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಸರಳ ವಿಧಾನದ ಮೂಲಕ ನೀವು ಆದಾಯ ಆದಾಯ ತೆರಿಗೆ ರಿಟರ್ನ್ಸ್‌ ಇ-ಪರಿಶೀಲನೆ ಮಾಡಬಹುದಾಗಿದೆ.

ತೆರಿಗೆ ಪಾವತಿದಾರರಿಗೆ ಒಳ್ಳೆಯ ಸುದ್ದಿ ಏನೆಂದರೆ, ಇ-ಪೋರ್ಟಲ್ ಮೂಲಕ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್‌ಗಳ ಪರಿಶೀಲನೆಯ ಸಮಯ ಮಿತಿಯನ್ನು 120 ದಿನಗಳಿಂದ 30 ದಿನಗಳವರೆಗೆ 1ನೇ ಆಗಸ್ಟ್ 2022 ರಂದು ಅಥವಾ ನಂತರ ಸಲ್ಲಿಸಿದ ರಿಟರ್ನ್ಸ್‌ಗಳಿಗೆ ಕಡಿಮೆ ಮಾಡಲಾಗಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) 29ನೇ ಜುಲೈ 2022 ರಂದು ಅಧಿಸೂಚನೆಯ ಮೂಲಕ ಇದನ್ನು ಪ್ರಕಟಿಸಿದೆ.

ತೆರಿಗೆ ಉಳಿತಾಯ; ಎಚ್‌ಆರ್‌ಎ, ಆರೋಗ್ಯ ವಿಮೆ ಮೂಲಕ ಲಕ್ಷ ರೂ. ಉಳಿಸಿ; ಹೇಗೆ ತಿಳಿಯಿರಿತೆರಿಗೆ ಉಳಿತಾಯ; ಎಚ್‌ಆರ್‌ಎ, ಆರೋಗ್ಯ ವಿಮೆ ಮೂಲಕ ಲಕ್ಷ ರೂ. ಉಳಿಸಿ; ಹೇಗೆ ತಿಳಿಯಿರಿ

ನೀವು ರಿಟರ್ನ್ಸ್ ಸಲ್ಲಿಸಿದ ನಂತರ ಒಂದು ತಿಂಗಳೊಳಗೆ ನೀವು ಐಟಿಆರ್ ಅನ್ನು ಇ-ಪರಿಶೀಲಿಸಬೇಕು. ಆದಾಯ ತೆರಿಗೆ ರಿಟರ್ನ್ಸ್‌ ಪ್ರಕ್ರಿಯೆ ಪೂರ್ಣಗೊಳಿಸಲು ಆಗಸ್ಟ್ 31 ರೊಳಗೆ ಇ-ಪರಿಶೀಲನೆ ನಡೆಸಬೇಕು.

 Title: Income Tax Return e-Verification Using Aadhaar-Based OTP : Know How To e-Verify ITR

ಇ-ಪರಿಶೀಲನೆ ಮಾಡುವುದು ಹೇಗೆ?; ಆಧಾರ್ ಆಧಾರಿತ ಒಟಿಪಿ (OTP)ಗಳು, ಬ್ಯಾಂಕ್ ಮತ್ತು ಡಿಮ್ಯಾಟ್ ಖಾತೆಗಳು, ನೆಟ್ ಬ್ಯಾಂಕಿಂಗ್, ಎಟಿಎಂ ಮತ್ತು ಡಿಜಿಟಲ್ ಸಹಿ ಪ್ರಮಾಣಪತ್ರಗಳು ಸೇರಿದಂತೆ ಲಭ್ಯವಿರುವ ಹಲವು ಆಯ್ಕೆಗಳ ಮೂಲಕ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ಗಳನ್ನು ಇ-ಪರಿಶೀಲಿಸಬೇಕು.

ಆದಾಯ ತೆರಿಗೆ ರಿಟರ್ನ್ಸ್‌ ಅನ್ನು ಇ-ಪರಿಶೀಲಿಸುವ ಸರಳ ವಿಧಾನವೆಂದರೆ ಆಧಾರ್ ಆಧಾರಿತ ಒಟಿಪಿ ವಿಧಾನ, ಅದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಬೇಕು.

ಆದಾಯ ತೆರಿಗೆ ಪೋರ್ಟಲ್‌ನ ಇ-ಪರಿಶೀಲನೆ ಪುಟಕ್ಕೆ ಭೇಟಿ ನೀಡಿ, ಆಧಾರ್ ಆಧಾರಿತ ಒಟಿಪಿ ಬಳಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಆಧಾರ್ ಮಾಹಿತಿಯನ್ನು ಮೌಲ್ಯೀಕರಿಸಲು ಕೇಳುವ ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ, ಆ ಬಾಕ್ಸ್‌ ಅನ್ನು ಭರ್ತಿ ಮಾಡಿ.

 Title: Income Tax Return e-Verification Using Aadhaar-Based OTP : Know How To e-Verify ITR

'ಜನರೇಟ್ ಆಧಾರ್ ಒಟಿಪಿ' ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು ಆರು-ಅಂಕಿಯ ಒಟಿಪಿ ಅನ್ನು ಸ್ವೀಕರಿಸುತ್ತೀರಿ.

ಒಟಿಪಿ ಅನ್ನು ನಮೂದಿಸಿ ಮತ್ತು ಸಲ್ಲಿಸಿ. ಈ ಒಟಿಪಿ 15 ನಿಮಿಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.

ಈಗ ನೀವು ಆದಾಯ ತೆರಿಗೆ ರಿಟರ್ನ್ಸ್‌ ಅನ್ನು ಇ-ಪರಿಶೀಲನೆ ಮಾಡಿರುವ ಸಂದೇಶ ಬರುತ್ತದೆ.

English summary
The taxpayers should know the importance of varifying income tax returns because the income tax department treats unverified ITRs as invalid. You must e-verify ITR within a month after filing the returns if you haven't already. ITR must be e-verified by August 31 in order to be processed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X