ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕ್‌ ಟಾಕ್ ಬ್ಯಾನ್: ದೇಸಿ ಆ್ಯಪ್ ಚಿಂಗಾರಿ 1 ಕೋಟಿ ಡೌನ್ ಲೋಡ್

|
Google Oneindia Kannada News

ಬೆಂಗಳೂರು, ಜುಲೈ 3: ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಟಿಕ್‌ ಟಾಕ್ ಸೇರಿದಂತೆ 59 ಚೀನಿ ಆ್ಯಪ್‌ಗಳನ್ನು ನಿಷೇಧಗೊಳಿಸಿತ್ತು. ಇದಾದ ಬಳಿಕ ಟಿಕ್‌ಟಾಕ್‌ನ ದೇಸಿ ಪರ್ಯಾಯ ಮತ್ತು 'ಮೇಡ್ ಇನ್ ಇಂಡಿಯಾ' ಆ್ಯಪ್ ಚಿಂಗಾರಿ ಅಲ್ಪಾವಧಿಯಲ್ಲಿಯೇ 10 ಮಿಲಿಯನ್ ಡೌನ್ ಲೋಡ್ಗಳ(ಒಂದು ಕೋಟಿ) ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಘೋಷಿಸಿದೆ.

Recommended Video

Modi in Leh,ಚೀನಾ ಕ್ಯಾತೆ ಬಳಿಕ ಗಲ್ವಾನ್ ಕಣಿವೆ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ | Oneindia Kannada

ಟಿಕ್‌ ಟಾಕ್ ಬ್ಯಾನ್ ಆಗಿ ಒಂದೇ ವಾರದಲ್ಲಿ ಟಿ ಭಾರತದ ಆ್ಯಪ್ ಚಿಂಗಾರಿ 10 ಮಿಲಿಯನ್ ಡೌನ್ ಲೋಡ್ ನ್ನು ಕಂಡಿದ್ದು, ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಟಾಪ್ 2 ಆ್ಯಪ್ ಗಳ ಪೈಕಿ ಒಂದಾಗಿದೆ.

ಟಿಕ್ ಟಾಕ್ ನಿಂದ ಪಿಎಂ ಕೇರ್ಸ್ ಫಂಡ್ ಗೆ 30 ಕೋಟಿ: ಮೊದಲು ಅದನ್ನು ವಾಪಸ್ ಕೊಡಿಟಿಕ್ ಟಾಕ್ ನಿಂದ ಪಿಎಂ ಕೇರ್ಸ್ ಫಂಡ್ ಗೆ 30 ಕೋಟಿ: ಮೊದಲು ಅದನ್ನು ವಾಪಸ್ ಕೊಡಿ

"ಗ್ರಾಹಕರ ಸಂಖ್ಯೆ ಹಾಗೂ ಆ್ಯಪ್ ನ ದಿನನಿತ್ಯದ ಬಳಕೆಯ ಅವಧಿ ಏರಿಕೆಯಾಗುತ್ತಿದೆ. ಗ್ರಾಹಕರಿಗೆ ಉತ್ತಮವಾಗಿರುವುದನ್ನು ನೀಡುವುದಕ್ಕೆ ನಮ್ಮ ತಂಡ ಹಗಲು ರಾತ್ರಿ ಕೆಲಸ ಮಾಡುತ್ತಿದೆ ಎಂದು ಚಿಂಗಾರಿಯ ಸಂಸ್ಥಾಪಕರಲ್ಲಿ ಒಬ್ಬರಾದ ಬಿಸ್ವಾತ್ಮ ನಾಯಕ್ ಹೇಳಿದ್ದಾರೆ.

TikToks Desi Alternative Chingari App Over 10 Million Downloads

ಇದಕ್ಕೂ ಮುನ್ನ ಅಪ್ಲಿಕೇಶನ್ ಪ್ರಾರಂಭವಾದ ಕೇವಲ 72 ಗಂಟೆಗಳಲ್ಲಿ ಸುಮಾರು 5 ಲಕ್ಷ ಡೌನ್‌ಲೋಡ್‌ಗಳನ್ನು ಗಳಿಸಿದೆ. ಚಂದಾದಾರರಲ್ಲಿ 400 ಪರ್ಸೆಂಟ್‌ರಷ್ಟು ಬೆಳವಣಿಗೆ ಕಂಡುಬಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

English summary
TikTok’s desi alternative and 'Made in India' app Chingari has announced that it has achieved a new milestone of more than 10 million downloads in a short time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X