• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಿಕ್ ಟಾಕ್ ಇಂಡಿಯಾ ತೊರೆದ ಸಿಇಒ ನಿಖಿಲ್ ಗಾಂಧಿ

|

ನವದೆಹಲಿ, ಮೇ 13: ಚೀನಾ ಮೂಲದ ಬೈಟ್ ಡ್ಯಾನ್ಸ್ ಒಡೆತನದ ಚುಟುಕು ವಿಡಿಯೋ ಹಂಚಿಕೆ ತಾಣ ಟಿಕ್ ಟಾಕ್ ಇಂಡಿಯಾದ ಸಿಇಒ ನಿಖಿಲ್ ಗಾಂಧಿ ತಮ್ಮ ಹುದ್ದೆ ತೊರೆದಿದ್ದಾರೆ. ನಿಖಿಲ್ ಸದ್ಯ ನೋಟಿಸ್ ಅವಧಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

   ಚೀನಾ ಕಂಪನಿ Tik Tok ಗೆ ಬಿತ್ತು ಮತ್ತೊಂದು ಪೆಟ್ಟು | Oneindia Kannada

   ಟಿಕ್ ಟಾಕ್ ಇಂಡಿಯಾ ಅಲ್ಲದೆ ಮಧ್ಯಪ್ರಾಚ್ಯ, ಆಫ್ರಿಕಾ, ಟರ್ಕಿ ಹಾಗೂ ದಕ್ಷಿಣ ಏಷ್ಯಾದ ವ್ಯವಹಾರವನ್ನು ನಿಖಿಲ್ ಮುನ್ನಡೆಸುತ್ತಿದ್ದರು. ಈ ನಿರ್ಧಾರ ಕಠಿಣವಾಗಿತ್ತು, ಆದರೆ, ನನ್ನ ಭವಿಷ್ಯದ ಗುರಿಯನ್ನು ಗಮನದಲ್ಲಿಟ್ಟುಕೊಂಡು ನನ್ನ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ ಎಂದು ನಿಖಿಲ್ ಹೇಳಿದ್ದಾರೆ.

   2019ರಲ್ಲಿ ಟಿಕ್ ಟಾಕ್ ಸೇರಿಕೊಂಡ ನಿಖಿಲ್ ಅವರು ವಿಡಿಯೋ ಹಂಚಿಕೆ ತಾಣ ಉತ್ತುಂಗಕ್ಕೇರುವಂತೆ ಮಾಡಿದ್ದರು. ಆದರೆ, 2020ರಲ್ಲಿ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ ಗಳನ್ನು ಭಾರತ ಸರ್ಕಾರ ಸುರಕ್ಷತಾ ಕಾರಣಗಳಿಗಾಗಿ ನಿರ್ಬಂಧಿಸಿತು. ನಂತರ ಗೂಗಲ್ ಪ್ಲೇ ನಿಂದಲೂ ಆಪ್ ಮಾಯವಾಯಿತು.

   ಮೂಂಬೈ ಮೂಲದ ನಿಖಿಲ್ ಅವರು ಇದಕ್ಕೂ ಮುನ್ನ ಟೈಮ್ಸ್ ನೆಟ್ವರ್ಕ್, ವಾಲ್ಟ್ ಡಿಸ್ನಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಯುಟಿವಿ ಗ್ಲೋಬಲ್ ಪ್ರಸರಣ ಸಂಸ್ಥೆ, ವಯಾಕಾಂ ಮೀಡಿಯಾ ಕಂಪನಿಯಲ್ಲೂ ಕೆಲಸ ಮಾಡಿದ್ದಾರೆ. ಸುಮಾರು 20 ವರ್ಷಗಳ ಕಾಲ ಮಾಧ್ಯಮ, ಮನರಂಜನೆ, ಆಪ್ ಆಧಾರಿತ ಸೇವಾ ಕ್ಷೇತ್ರದಲ್ಲಿ ಅನುಭವ ಹೊಂದಿದ್ದಾರೆ.

   English summary
   Nikhil Gandhi, the India Head of China’s ByteDance-owned short video-sharing platform TikTok, has decided to quit and is currently serving his notice period IANS reported.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X