ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕ್ ಟಾಕ್ ಹೋಯ್ತು ಸ್ನ್ಯಾಪ್ ಶಾಟ್ ಬಂತು: ಕನ್ನಡಿಗರ ದೇಸಿ ವೇದಿಕೆ

|
Google Oneindia Kannada News

ಬೆಂಗಳೂರು, ಆಗಸ್ಟ್‌ 27: ಅಂಗೈಯಲ್ಲಿ ಇಡೀ ಪ್ರಪಂಚವನ್ನು ಹಿಡಿದಿಡುವ ಈ ಕಾಲದಲ್ಲಿ ಡಿಜಿಟಲ್ ಮಾಧ್ಯಮ ಹೆಚ್ಚು ಆಕರ್ಷಕ ಮತ್ತು ವೇಗವಾಗಿ ಜನರನ್ನು ತಲುಪುವ ಸುಲಭ ವಿಧಾನವಾಗಿದೆ. ಈ ನಿಟ್ಟಿನಲ್ಲಿ ಹಲವಾರು ಆಪ್ ಗಳು ಬಂದಿವೆ ಮತ್ತು ಬರುತ್ತಿವೆ. ಜನರನ್ನು ಆಧುನಿಕ ತಂತ್ರಜ್ಞಾನ ಬಳಸಿ ಆಪ್ ಗಳ ಮೂಲಕ ಮನರಂಜಿಸಿವುದು ವಿಭಿನ್ನತೆಗಳಲ್ಲಿ ಒಂದಾಗಿದೆ. ಹೀಗೆ ಅನೇಕ ವಿಭಿನ್ನ ಮತ್ತು ವಿಶೇಷಗಳನ್ನು ಹೊತ್ತು ಕೊಂಡು ಅಪ್ಪಟ ಕನ್ನಡಿಗರ ತಂಡವೊಂದು " ಸ್ನ್ಯಾಪ್ ಶಾಟ್ " ಎಂಬ ಮನರಂಜನೆಯ ಆಪ್ ತಯಾರಿಸಿದ್ದು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

Recommended Video

BMRCL ಕಳೆದ ವರ್ಷ ₹598 ಕೋಟಿ ರೂ ನಷ್ಟ | Oneindia Kannada

ಡ್ಯಾನ್ಸ್ ,ಹಾಡುಗಾರಿಕೆ ,ಸಿನಿಮಾ ಪ್ರಚಾರ ಹೀಗೆ ನಾನಾ ವಿಧವಾದ ಪ್ರತಿಭೆ , ಕ್ರಿಯಾಶೀಲತೆಗೆ ಸರಳ , ಸುಂದರ ಮತ್ತು ಸುಲಭವಾಗಿ ಜನರಿಗೆ ಪರಿಚಯಿಸಲು ಈ ಆಪ್ ಸಹಕಾರಿಯಾಗಲಿದ್ದು ಒಂದು ಉತ್ತಮ ವೇದಿಕೆಯಾಗಲಿದೆ. ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವಿದೇಶಿ ಆಪ್ ಗಳ ಮೊರೆಹೋಗುತ್ತಿದ್ದ ಅದೆಷ್ಟು ಮಂದಿಗೆ ಈ ವಿಶೇಷ ರೀತಿಯಲ್ಲಿ ಮೂಡಿಬಂದಿರುವ ಈ ದೇಸಿ ಆಪ್ ಹೆಚ್ಚು ಉಪಯೋಗಕಾರಿಯಾಗಲಿದೆ.

 ಟಿಕ್‌ಟಾಕ್ ಸಿಇಒ ಕೆವಿನ್ ಮೇಯರ್ ರಾಜೀನಾಮೆ ಟಿಕ್‌ಟಾಕ್ ಸಿಇಒ ಕೆವಿನ್ ಮೇಯರ್ ರಾಜೀನಾಮೆ

TikTok Ban Impact: Made In India App Snapshot Coming Soon

ಇನ್ನೂ ಇದು ತಾಂತ್ರಿಕ ವಿಭಾಗದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿಕೊಂಡಿದ್ದು ಗೂಗಲ್ ಸಂಸ್ಥೆಯಿಂದಲೂ ಮಾನ್ಯತೆ ಪಡೆದಿದ್ದು, ಅಲ್ಲದೆ ಬಿಡುಗಡೆಗೆ ಕೂಡ ಸಜ್ಜಾಗಿದೆ. ಇದೀಗ ಕನ್ನಡ ಚಿತ್ರರಂಗದ ಅನೇಕ ನಟ - ನಟಿಯರು ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದು ತಮ್ಮ ಶುಭಹಾರೈಕೆಗಳನ್ನು ತಿಳಿಸುತ್ತಿದ್ದಾರೆ . ತಂಡದ ಪ್ರಕಾರ ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಸ್ನ್ಯಾಪ್ ಶಾಟ್ ನಿಮಗೆ ಲಭ್ಯವಿರಲಿದೆ.

TikTok Ban Impact: Made In India App Snapshot Coming Soon

ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಯೋಜನೆಗೆ ಪೂರಕವೆಂಬಂತೆ ಈ ತಂಡ ಕಾರ್ಯ ನಿರ್ವಹಿಸುತ್ತಿದ್ದು ವಿದೇಶಿ ಆಪ್ ಗೆ ಸಡ್ಡು ಹೊಡೆಯುವ ಉತ್ಸಾಹದಲ್ಲಿದ್ದಾರೆ. ಕನ್ನಡಿಗರ ಈ ಆಪ್ ಗೆ ನಿಮ್ಮ ಸಹಕಾರವೂ ಇರಲಿ ಎಂದು ಸ್ನ್ಯಾಪ್‌ ಶಾಟ್‌ ತಂಡ ಕೇಳಿಕೊಂಡಿದೆ.

English summary
Snapshot is an indian video creating and sharing talent make a showcase in snapshot app platform support for indian application
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X