ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕ್‌ಟಾಕ್ ಸೇರಿ 59 ಆಪ್‌ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ

|
Google Oneindia Kannada News

ನವದೆಹಲಿ, ಜನವರಿ 26: ಚೀನಾ ಆಕ್ರಮಣದ ವಿರುದ್ಧದ ಕ್ರಮವಾಗಿ ಸುಮಾರು 200 ಚೀನೀ ಆಪ್‌ಗಳನ್ನು ಭಾರತ ನಿಷೇಧಿಸಿದೆ. ಇವುಗಳಲ್ಲಿ ಟಿಕ್‌ಟಾಕ್, ವಿ ಚಾಟ್ ಸೇರಿದಂತೆ 59 ಆಪ್‌ಗಳ ನಿಷೇಧವನ್ನು ಶಾಶ್ವತಗೊಳಿಸಲಾಗಿದೆ. ಅಂದರೆ ಅವುಗಳು ಇನ್ನು ಮುಂದೆ ಯಾವುದೇ ರೀತಿ ಭಾರತದಲ್ಲಿ ಆರಂಭವಾಗಲಿ ಅವಕಾಶವಿಲ್ಲ.

2020ರ ಜೂನ್ ತಿಂಗಳಲ್ಲಿ ಭಾರತ ಮೊದಲ ಬಾರಿ ಆಪ್‌ಗಳ ನಿಷೇಧ ಕ್ರಮವನ್ನು ತೆಗೆದುಕೊಂಡಿತ್ತು. ಈಗ ಈ ನಿಷೇಧವು ಕಾಯಂ ಆಗಿ ಜಾರಿಯಾಗಲಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳು ತಿಳಿಸಿವೆ.

ಭಾರತೀಯರನ್ನು ವಾಟ್ಸಾಪ್ ವಿಭಿನ್ನವಾಗಿ ನಡೆಸಿಕೊಳ್ಳುತ್ತಿದೆ: ಕೇಂದ್ರದ ಆರೋಪಭಾರತೀಯರನ್ನು ವಾಟ್ಸಾಪ್ ವಿಭಿನ್ನವಾಗಿ ನಡೆಸಿಕೊಳ್ಳುತ್ತಿದೆ: ಕೇಂದ್ರದ ಆರೋಪ

ನಿಷೇಧಕ್ಕೆ ಒಳಗಾದ ಆಪ್‌ಗಳಿಂದ ಭಾರತವು ದತ್ತಾಂಶ ಸಂಗ್ರಹಣೆ ಸ್ವರೂಪ ಮತ್ತು ಅವುಗಳ ಬಳಕೆ ಬಗ್ಗೆ ವಿವರಗಳನ್ನು ಕೇಳಿತ್ತು. ಆದರೆ ಕಂಪೆನಿಗಳು ನೀಡಿರುವ ಪ್ರತಿಕ್ರಿಯೆಗಳು ಸರ್ಕಾರಕ್ಕೆ ತೃಪ್ತಿ ತಂದಿಲ್ಲ. ಹೀಗಾಗಿ ಈ ಆಪ್‌ಗಳಿಗೆ ಕಳೆದ ವಾರ ನೋಟಿಸ್ ಜಾರಿ ಮಾಡಿದೆ.

TikTok And 58 Other Chinese Apps Ban Now Parmanent In India

ಪಬ್‌ಜಿ ಮೊಬೈಲ್‌ನಂತಹ ಬಹು ಜನಪ್ರಿಯ ಸ್ಮಾರ್ಟ್‌ಫೋನ್ ಗೇಮ್‌ಗಳು ಭಾರತಕ್ಕೆಂದೇ ಪ್ರತ್ಯೇಕ ಆವೃತ್ತಿಯನ್ನು ಆರಂಭಿಸುವ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದವು. ಭಾರತದಲ್ಲಿ ಹೊಸದಾಗಿ ಸಂಸ್ಥೆ ಆರಂಭಿಸಲು ನೇಮಕಾತಿಗಳನ್ನು ಮಾಡುವ ಮೂಲಕ ಪಬ್‌ಜಿ ಮೊಬೈಲ್ ಇಂಡಿಯಾದ ಸ್ಥಾಪನೆಯನ್ನು ಕಳೆದ ನವೆಂಬರ್‌ನಲ್ಲಿ ಘೋಷಿಸಲಾಗಿತ್ತು. ಆದರೆ ಅದಕ್ಕೆ ಸಚಿವಾಲಯ ಅನುಮತಿ ನೀಡಿಲ್ಲ ಎನ್ನಲಾಗಿದೆ.

ಸ್ವದೇಶಿ ನಿರ್ಮಿತ 'ಹೈಕ್' ಮೆಸೇಜಿಂಗ್ ಆಪ್ ಸ್ಥಗಿತಸ್ವದೇಶಿ ನಿರ್ಮಿತ 'ಹೈಕ್' ಮೆಸೇಜಿಂಗ್ ಆಪ್ ಸ್ಥಗಿತ

ಈ ಬೆಳವಣಿಗೆಗಳನ್ನು ಗಮನಿಸಿದರೆ ಪಬ್‌ಜಿ ಗೇಮ್ ಭಾರತಕ್ಕೆ ಸಧ್ಯದ ಪರಿಸ್ಥಿತಿಯಲ್ಲಿ ಮರಳಿ ಬರುವ ಸಂಭವವಿಲ್ಲ. ಹಾಗೆಯೇ ಟಿಕ್‌ಟಾಕ್‌ನ ಭಾರತದ ಕಂಪೆನಿ ಬೈಟ್‌ಡ್ಯಾನ್ಸ್ ನೇಮಿಸಿಕೊಂಡ ನೂರಾರು ಉದ್ಯೋಗಿಗಳ ಭವಿಷ್ಯವೂ ಡೋಲಾಯಮಾನವಾಗಿದೆ. ಟಿಕ್‌ಟಾಕ್ ಮೇಲೆ ಭಾರತದ ಶಾಶ್ವತ ನಿಷೇಧ ಸಂಪೂರ್ಣವಾಗಿ ಜಾರಿಯಾದ ಬಳಿಕವೂ ಇದು ಭಾರತದಲ್ಲಿ ಪ್ರತ್ಯೇಕವಾಗಿ ಕಾರ್ಯಾಚರಣೆ ಮಾಡಲು ಸಾಧ್ಯವಾಗಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

English summary
Indian government now banned 59 Chinese apps permanently including TikTok, WeChat as they failed to response to the notice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X