ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಏರಿಕೆ ಕುರಿತು "ಗೋಲ್ಡ್ ಗುರು" ಕೊಟ್ಟಿರುವ ಈ ವಾರದ ಟಿಪ್ಸ್ !

|
Google Oneindia Kannada News

ಬೆಂಗಳೂರು, ಮಾರ್ಚ್‌ 15: ಹಳದಿ ಲೋಹ ಚಿನ್ನ ಖರೀದಿಸುವರಿಗೆ ಗೋಲ್ಡ್ ಗುರು ಈ ವಾರ ಮಹತ್ವ ಟಿಪ್ಸ್ ನೀಡಿದ್ದಾರೆ. ಜಾಗತಿಕವಾಗಿ ನಡೆಯುತ್ತಿರುವ ಎರಡು ಬದಲಾವಣೆಯಿಂದ ಚಿನ್ನದ ಬೆಲೆ ಈ ವಾರ ಸ್ಥಿರವಾಗಿರುವುದು ಅನುಮಾನ. ಹೀಗಾಗಿ ಈ ವಾರದಲ್ಲಿ ಚಿನ್ನದ ವಹಿವಾಟು ನಡೆಸುದಕ್ಕಿಂತಲೂ ನೋಡಿಕೊಂಡು ಇರುವುದೇ ಸೂಕ್ತ ! ಚಿನ್ನದ ಬೆಲೆ ಕುರಿತು ಗೋಲ್ಡ್ ಗುರು ಈ ವಾರ ನೀಡಿರುವ ವಿಶ್ಲೇಷಣಾ ವರದಿ ವಿವರ ಇಲ್ಲಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಗ್ರಾಹಕರಿಗೆ ಖುಷಿ ಸುದ್ದಿ: ಚಿನ್ನದ ದರದಲ್ಲಿ ಕೊಂಚ ಇಳಿಕೆಗ್ರಾಹಕರಿಗೆ ಖುಷಿ ಸುದ್ದಿ: ಚಿನ್ನದ ದರದಲ್ಲಿ ಕೊಂಚ ಇಳಿಕೆ

ಚಿನ್ನದ ಬೆಲೆ ಈ ವಾರದಲ್ಲಿ ಸ್ಥಿರತೆ ಇರಲ್ಲ

ಚಿನ್ನದ ಬೆಲೆ ಈ ವಾರದಲ್ಲಿ ಸ್ಥಿರತೆ ಇರಲ್ಲ

ಅಮೆರಿಕಾದಲ್ಲಿ ಈ ವಾರದಲ್ಲಿ ಫೇಡರಲ್ ಮಾನಿಟರಿ ಪಾಲಿಸಿ ಘೋಷಣೆ ಬಾಕಿ ಇದೆ. ಈ ಘೊಷಣೆಯಲ್ಲಿ ಕೈಗೊಳ್ಳುವ ತೀರ್ಮಾನ ಅಮೆರಿಕ ಡಾಲರ್ ಮೌಲ್ಯದಲ್ಲಿ ಜಾಗತಿಕವಾಗಿ ಏರು ಪೇರಾಗಲಿದೆ. ಇದರ ಜತೆಗೆ ಅಮೆರಿಕಾದ ಗ್ಲೋಬಲ್ ಈಲ್ಡ್ ಬಾಂಡ್ ಬೆಲೆ ಕೂಡ ಏರಿಕೆಯಾಗುತ್ತಿದೆ. ಈ ಎರಡು ಕಾರಣದ ಪರಿಣಾಮವಾಗಿ ಹಳದಿ ಲೋಹ ಚಿನ್ನದ ಬೆಲೆಯಲ್ಲಿ ಏರು ಪೇರಾಗಲಿದೆ.

ಗ್ಲೋಬಲ್ ಈಲ್ಡ್ ಬಾಂಡ್ ಬೆಲೆ ಏರಿಕೆಯಾಗುವ ಮುನ್ಸೂಚನೆ ಸಿಗುತ್ತಿದ್ದಂತೆ ಹೂಡಿಕೆದಾರರು ಚಿನ್ನ ಹಾಗೂ ಷೇರು ಮಾರುಕಟ್ಟೆ ಮೇಲೆ ಹೂಡಿರುವ ಬಂಡವಾಳವನ್ನು ತೆಗೆದು ಗ್ಲೋಬಲ್ ಈಲ್ಡ್ ಬಾಂಡ್ ಮೇಲೆ ಹೂಡಿಕೆ ಮಾಡಬದಾಗಿರುತ್ತದೆ. ಗ್ಲೋಬಲ್ ಈಲ್ಡ್ ಬಾಂಡ್ ಮೇಲೆ ಹೂಡಿಕೆ ಜಾಸ್ತಿಯಾದರೆ ಚಿನ್ನದ ಮೇಲಿನ ಹೂಡಿಕೆ ಕಡಿಮೆಯಾಗಲಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿಯಲಿದೆ. ಇದರ ಲಾಭ ಚಿನ್ನದ ಪ್ರಿಯರಿಗೆ ಸಿಗಲಿದೆ.

ಫೆಡರಲ್ ಮಾನಿಟರಿ ಸಭೆಯ ಘೋಷಣೆ

ಫೆಡರಲ್ ಮಾನಿಟರಿ ಸಭೆಯ ಘೋಷಣೆ

ಇನ್ನೊಂದಡೆ ಅಮೆರಿಕದಲ್ಲಿ ಫೆಡರಲ್ ಮಾನಿಟರಿ ಪಾಲಿಸಿ ಘೋಷಣೆಯಾಗಿ ಅಮೆರಿಕ ಡಾಲರ್ ಮೌಲ್ಯ ಜಾಗತಿಕವಾಗಿ ಹೆಚ್ಚಳವಾದರೆ ಚಿನ್ನದ ಬೆಲೆಯೂ ಜಾಸ್ತಿಯಾಗಲಿದೆ. ಒಂದು ವೇಳೆ ಅಮೆರಿಕ ಡಾಲರ್ ಮೌಲ್ಯ ಕುಸಿದರೆ ಚಿನ್ನದ ಬೆಲೆಯೂ ಕಡಿಮೆಯಾಗಲಿದೆ. ಒಂದು ವೇಳೆ ಚಿನ್ನದ ಮೇಲಿನ ಹೂಡಿಕೆ ತೆಗೆದು ಗ್ಲೋಬಲ್ ಈಲ್ಡ್ ಬಾಂಡ್ ಮೇಲೆ ಹೂಡಿಕೆ ಮಾಡುವ ಜತೆಗೆ ಅಮೆರಿಕ ಡಾಲರ್ ಮೌಲ್ಯವೂ ಕುಸಿದರೆ ಚಿನ್ನದ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಅಮೆರಿಕ ಡಾಲರ್ ಮೌಲ್ಯ ಹೆಚ್ಚಳವಾಗಿ, ಚಿನ್ನದ ಮೇಲಿನ ಹೂಡಿಕೆ ತೆಗೆದು ಗ್ಲೋಬಲ್ ಈಲ್ಡ್ ಬಾಂಡ್ ಮೇಲೆ ಹೂಡಿಕೆ ಮಾಡದಿದ್ದರೆ, ಹಳದಿ ಲೋಹ ಚಿನ್ನದ ಬೆಲೆ ಮತ್ತೆ ನಿರೀಕ್ಷೆಗೂ ಮೀರಿ ಏರಿಕೆಯಾಗಲಿದೆ.

 ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ: ಜಾಗತಿಕ ಎರಡು ಬದಲಾವಣೆಯಿಂದ ಈ ವಾರದ ಚಿನ್ನದ ಬೆಲೆಯಲ್ಲಿ ಏರು ಪೇರಾಗಲಿದೆ. ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಭಾರತೀಯ ರೂಪಾಯಿನಲ್ಲಿ 4032 ರೂ. ಇದೆ. ಈ ವಾರದಲ್ಲಿ ಅತಿ ಹೆಚ್ಚು ಅಂದರೆ 4106 ರೂ.ಗೆ ಏರಿಕೆಯಾಗಬಹುದು. ಇಲ್ಲವೇ 3969 ರೂ.ಗೆ ಇಳಿಕೆಯಾಗಲು ಬಹುದು. ಒಂದು ವೇಳೆ ಚಿನ್ನದ ಒಂದು ಗ್ರಾಂ ಬೆಲೆ 3969 ರೂ.ಗಿಂತಲೂ ಇಳಿಕೆಯಾದರೆ ಇನ್ನೂ ಕಡಿಮೆಯಾಗಲಿದೆ. ಅಥವಾ ಏರಿಕೆಯಾದಲ್ಲಿ 4106 ರೂ.ಗಿಂತಲೂ ಜಾಸ್ತಿ ಏರಿಕೆಯಾಗಲಿದೆ. ಹೀಗಾಗಿ ಈ ವಾರ ಚಿನ್ನದ ವಹಿವಾಟು ಮಾಡುವುದಕ್ಕಿಂತಲೂ ಜಾಗತಿಕ ಬೆಳವಣಿಗೆ ನೋಡಿಕೊಂಡು ಚಿನ್ನ ಖರೀದಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂಬುದು ಗೋಲ್ಡ್ ಗುರು ಸಲಹೆ.

ಬೆಂಗಳೂರಿನ ಚಿನಿವಾರ ಪೇಟೆ

ಬೆಂಗಳೂರಿನ ಚಿನಿವಾರ ಪೇಟೆ

ಸ್ಥಳೀಯ ತೆರಿಗೆ ಸೇರಿದರೆ ಬೆಂಗಳೂರಿನಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಪ್ರಸ್ತುತ 4613 ರೂ. ಇದೆ. ಕಡಿಮೆಯಾದಲ್ಲಿ 4551 ರೂ.ಗೆ ಇಳಿಕೆಯಾಗಲಿದೆ. ಏರಿಕೆ ಕಂಡಲ್ಲಿ 4688 ರೂ.ಗೆ ಹೆಚ್ಚಳವಾಗಲಿದೆ. ಈ ವಾರ ಚಿನ್ನದ ಬೆಲೆಯಲ್ಲಿ ಭಾರೀ ವ್ಯತ್ಯಯವಾಗಲಿದೆ. ಹೀಗಾಗಿ ಈ ವಾರ ಜಾಗತಿಕ ಎರಡು ಬೆಳವಣಿಗೆ ನೋಡಿಕೊಂಡು ಚಿನ್ನ ಖರೀದಿಸುವುದು ಸೂಕ್ತ ಎಂದು ಗೋಲ್ಡ್ ಗುರು ಚಿನ್ನದ ಬೆಲೆ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಹೀಗಾಗಿ ಜಾಗತಿಕ ಬದಲಾವಣೆ ನೋಡಿದರೆ ಈ ವಾರ ಚಿನ್ನವನ್ನು ಖರೀದಿ ಮಾಡುವುದಕ್ಕಿಂತಲೂ ಇಳಿಕೆ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವುದು ಒಳಿತು. ಗೋಲ್ಡ್ ಗುರು ಸೂಚಿಸಿದ ದರಕ್ಕಿಂತ ಕಡಿಮೆ ಆಗಿದ್ದಲ್ಲಿ ಇನ್ನೂ ಕಡಿಮೆಯಾಗುವ ಸಾಧ್ಯತೆಯಿದೆ.

English summary
Gold market expert Gold guru analysis has shown that it is more appropriate to view the decline in gold prices than buying gold from two major global developments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X