ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಿಗಳಿಗೆ ಸ್ಥಳಾಂತರಕ್ಕಾಗಿ 15 ಲಕ್ಷ ರೂ. ಬೋನಸ್ ನೀಡಲು ಯೋಜಿಸಿರುವ ಐಟಿ ಕಂಪನಿ: ಆದರೆ ವೇತನವೂ ಕಡಿತ?

|
Google Oneindia Kannada News

ವಾಷಿಂಗ್ಟನ್‌, ಸೆಪ್ಟೆಂಬರ್ 16: ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಜನರ ಜೀವನಶೈಲಿ ಜೊತೆಗೆ ಕೆಲಸದ ವೈಖರಿಯನ್ನು ಬದಲಿಸಿಬಿಟ್ಟಿದೆ. ಜಗತ್ತಿನ ಬಹುತೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿವೆ.

ಸದ್ಯಕ್ಕಂತು ಕೊರೊನಾವೈರಸ್ ಲಸಿಕೆ ಸಿಗುವುದು ದೂರದ ಮಾತಾಗಿದೆ. ಹೀಗಾಗಿ ಲಸಿಕೆ ಬಂದು, ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಲಭ್ಯವಾಗುವವರೆಗೂ ಅನೇಕ ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವುದನ್ನ ಖಾಯಂ ಮಾಡಿಬಿಡಬಹುದು.

ಕೊವಿಡ್ 19 ಸಂಕಷ್ಟದಲ್ಲೂ ಸಿಬ್ಬಂದಿಗೆ 235.54 ಕೋಟಿ ಬೋನಸ್!ಕೊವಿಡ್ 19 ಸಂಕಷ್ಟದಲ್ಲೂ ಸಿಬ್ಬಂದಿಗೆ 235.54 ಕೋಟಿ ಬೋನಸ್!

ಹೀಗೆ ಅಮೆರಿಕಾದಲ್ಲಿ ಮನೆಯಿಂದಲೇ ಕೆಲಸ ಮಾಡುವ ಪ್ರವೃತ್ತಿಯು ಮುಂದುವರಿದಿದ್ದು, ಸ್ಯಾನ್ ಫ್ರಾನ್ಸಿಸ್ಕೋ, ನ್ಯೂಯಾರ್ಕ್ ಅಥವಾ ಸಿಯಾಟಲ್‌ನಿಂದ ಹೊರಹೋಗಲು ಆಯ್ಕೆ ಮಾಡಿಕೊಳ್ಳುವ ನೌಕರರಿಗೆ ಸ್ಟ್ರೈಪ್ ಇಂಕ್ ಕಂಪನಿಯು ಒಂದು ಬಾರಿ 20,000 ಅಮೆರಿಕನ್ ಡಾಲರ್ ಪಾವತಿಸಲು ಯೋಜಿಸಿದೆ. ಅಂದರೆ ಭಾರತದ ರೂಪಾಯಿಗಳಲ್ಲಿ ಸುಮಾರು 14.75 ಲಕ್ಷ ರೂಪಾಯಿ.

This It Company To Give Employees $20000 Bonus For Relocation

ಉದ್ಯೋಗಿಗಳು ಸ್ಥಳಾಂತರಗೊಳ್ಳುವ ಆಯ್ಕೆಯನ್ನು ತೆಗೆದುಕೊಂಡರೆ ಅವರಿಗೆ ಈ ಒಂದು ಬಾರಿಯ ಬೋನಸ್ ಜೊತೆಗೆ ಅವರ ಮೂಲ ವೇತನದಲ್ಲಿ ಶೇಕಡಾ 10ರಷ್ಟು ಕಡಿತಗೊಳಿಸುವ ಬಗ್ಗೆಯು ಕಂಪನಿ ಯೋಜಿಸಿದೆ ಎಂದು ಮಿಂಟ್ ವರದಿ ಮಾಡಿದೆ.

ಈ ಕಂಪನಿಯು ಈಗಷ್ಟೇ ಘೋಷಿಸಿದೆ: ಮುಂದಿನ ಕೆಲವು ವಾರಗಳಲ್ಲಿ 30,000 ಹೊಸ ಉದ್ಯೋಗ ಸೃಷ್ಟಿಈ ಕಂಪನಿಯು ಈಗಷ್ಟೇ ಘೋಷಿಸಿದೆ: ಮುಂದಿನ ಕೆಲವು ವಾರಗಳಲ್ಲಿ 30,000 ಹೊಸ ಉದ್ಯೋಗ ಸೃಷ್ಟಿ

Recommended Video

Casino ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಶಾಸಕರ ವಿಚಿತ್ರ ಸಲಹೆ! | Oneindia Kannada

ಈ ವರ್ಷಾಂತ್ಯದ ಮೊದಲು ಸ್ಥಳಾಂತರಗೊಳ್ಳಲು ಆಯ್ಕೆ ಮಾಡುವ ಕಾರ್ಮಿಕರಿಗೆ ಈ ಪ್ರಸ್ತಾಪವು ಲಭ್ಯವಾಗುವಂತೆ ಮಾಡುತ್ತದೆ ಎನ್ನಲಾಗಿದೆ. ಈ ಕುರಿತು ತಿಳಿಸಿರುವ ವ್ಯಕ್ತಿಗಳು ಹೆಸರನ್ನು ತಿಳಿಸದೇ ಅನಾಮಧೇಯರಾಗಿರಲು ಕೇಳಿದರು. ಹೀಗಾಗಿ ತಮ್ಮ ಊರುಗಳಿಗೆ ಸ್ಥಳಾಂತರಗೊಳ್ಳಲು ಬಯಸುವ ನೌಕರರು ಬೋನಸ್ ಜೊತೆಗೆ ತಮ್ಮ ಮೂಲ ವೇತನವನ್ನು ತ್ಯಜಿಸಬೇಕಾಗಬಹುದು.

English summary
Stripe Inc. plans to make a one-time payment of $20,000 to employees who opt to move out of San Francisco, New York or Seattle, but also cut their base salary by as much as 10%
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X