ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಆರ್ಥಿಕ ವರ್ಷಾರಂಭ, ಯಾವ್ದು ಏರಿಕೆ? ಯಾವ್ದು ಇಳಿಕೆ?

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 01: ಹೊಸ ಆರ್ಥಿಕ ವರ್ಷಾರಂಭ ಸ್ವಾಗತಿಸಲು ಬೆಲೆ ಏರಿಕೆ ಸಿದ್ಧವಾಗಿದೆ. ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವ ಎನ್ ಡಿಎ ಸರ್ಕಾರ ಹೊರ ತಂದಿರುವ ಆರ್ಥಿಕ ನೀತಿ, ಸರಕು ಸೇವಾ ತೆರಿಗೆ(ಜಿಎಸ್ ಟಿ) ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ. ಕೆಲ ಪಾದರ್ಥಗಳ ಮೇಲಿನ ಸುಂಕ ಇಳಿಕೆ ಕೂಡಾ ಆಗಿದೆ. ಕೇಂದ್ರ ಬಜೆಟ್ 2018ರ ಘೋಷಣೆಗಳು ಇಂದಿನಿಂದ (ಏಪ್ರಿಲ್ 01) ಅನುಷ್ಠಾನಗೊಳ್ಳಲಿದೆ.

ಮೊಬೈಲ್ ಫೋನ್, ಸ್ಮಾಟ್ ಫೋನ್, ಕಾರು ಸೆಟ್ ಟಾಪ್ ಬಾಕ್ಸ್, ಸಿಗರೇಟು, ತಂಬಾಕು ಪದಾರ್ಥ, ಮಾರ್ಬಲ್ ಸೇರಿದಂತೆ ಹಲವು ವಸ್ತುಗಳ ಮೇಲಿನ ತೆರಿಗೆ ಏರಿಸಲಾಗಿದೆ. ಸೌರಫಲಕ, ಇಟ್ಟಿಗೆ, ಕಿವುಡು ಮೂಗರಿಗೆ ಬಳಸುವ ಸಾಧನಗಳು.ಇತ್ಯಾದಿಗಳ ಮೇಲಿನ ಬೆಲೆ ಇಳಿಕೆಯಾಗಿದೆ.

ತೆರಿಗೆ ಲೆಕ್ಕಾಚಾರ ಮಾಡುವುದು ಹೇಗೆ?ತೆರಿಗೆ ಲೆಕ್ಕಾಚಾರ ಮಾಡುವುದು ಹೇಗೆ?

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ನಲ್ಲಿ ಸೇವಾ ತೆರಿಗೆಯನ್ನು ಶೇ.12.36ರಿಂದ ಶೇ.14ಕ್ಕೆ ಏರಿಕೆ ಮಾಡಿದ್ದರು. ಆದರೆ ಸರಕು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೊಂಡ ಬಳಿಕ ಏಕರೂಪದ ತೆರಿಗೆ ದೇಶದೆಲ್ಲೆಡೆ ಜಾರಿಗೊಂಡಿದೆ.ಈ ಮೂಲಕ ಗ್ರಾಹಕರ ಮೇಲೆ ಬೀಳುತ್ತಿದ್ದ ಹೆಚ್ಚುವರಿ ತೆರಿಗೆಗಳ ಮೇಲೆ ನಿಯಂತ್ರಣ ಹೊಂದಲಾಗಿದೆ. ಜಿಎಸ್ ಟಿಯಲ್ಲಿ ವಿವಿಧ ಸ್ಲಾಬ್ ಗಳಲ್ಲಿದ್ದು, ಇದರ ಜತೆಗೆ ರಾಜ್ಯಗಳಲ್ಲಿನ ಜಿಎಸ್ ಟಿ ಕೂಡಾ ಸೇರಲಿದೆ.

ಏಪ್ರಿಲ್ 01ರಿಂದ ಪ್ರಮುಖ ಬದಲಾವಣೆಗಳು

ಏಪ್ರಿಲ್ 01ರಿಂದ ಪ್ರಮುಖ ಬದಲಾವಣೆಗಳು

* ಸ್ಟ್ಯಾಂಡರ್ಡ್ ಡಿಡಕ್ಷನ್ 40 ಸಾವಿರ ರುಗಳಿಗೆ ನಿಗದಿ, ವೇತನದಾರರಿಗೆ ಸುಮಾರು 5,800 ರು ಉಳಿತಾಯ.

* ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ ಶೇ 8ಕ್ಕೆ ಹೆಚ್ಚಳ, ಇವೇ ಬಿಲ್ ಜಾರಿಗೆ.
* ರಾಜ್ಯ ಸರ್ಕಾರದಿಂದ ಅಬಕಾರಿ ಸುಂಕ ಶೇ 8ರಷ್ಟು ಹೆಚ್ಚಳ, ಮದ್ಯದ ಬೆಲೆ ಏರಿಕೆ
* 250 ಕೋಟಿ ರು ವಹಿವಾಟು ಹೊಂದಿರುವ ಕಂಪನಿಗಳ ಮೇಲಿನ ಕಾರ್ಪೋರೇಟ್ ತೆರಿಗೆ ಶೇ 25ಕ್ಕೆ ಸೀಮಿತ.
* ಕೃಷಿ ಉತ್ಪನ್ನ ಸಂಸ್ಥೆ, ಸಹಕಾರಿ ಸಂಘಗಳಿಗೆ ಶೇ 100ರಷ್ಟು ತೆರಿಗೆ ವಿನಾಯಿತಿ
* ವೈದ್ಯಕೀಯ ವೆಚ್ಚ, ಸಾರಿಗೆ ಭತ್ಯೆ ಮೇಲಿನ ತೆರಿಗೆ ವಿನಾಯಿತಿ 40 ಸಾವಿರ ರುಗಳಿಗೆ ಹೆಚ್ಚಳ.

ಇಳಿಕೆಯಾಗಲಿರುವ ಸಾಮಾಗ್ರಿಗಳು

ಇಳಿಕೆಯಾಗಲಿರುವ ಸಾಮಾಗ್ರಿಗಳು

ಹಲವು ವಸ್ತುಗಳ ಬೆಲೆ ಬಜೆಟ್ ನಂತರ ಇಳಿಕೆಯಾಗಲಿದೆ. ಅವುಗಳಲ್ಲಿ ಕಚ್ಛಾ ಗೋಡಂಬಿ, ಸೋಲಾರ್ ಪ್ಯಾನಲ್ ಗೆ ಬಳಸುವ ಗಾಜುಗಳು, ಶ್ರವಣ ಸಾಧನಗಳು ಮತ್ತು ಇನ್ನೂ ಕೆಲವು ಸರಕುಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.

ಸಿಗರೇಟು ಸೇರಿದಂತೆ ಯಾವುದು ಏರಿಕೆ?

ಸಿಗರೇಟು ಸೇರಿದಂತೆ ಯಾವುದು ಏರಿಕೆ?

ಸಿಗರೇಟು, ಲೈಟರ್, ಕ್ಯಾಂಡಲ್, ಆಲಿವ್ ಆಯಿಲ್, ಕಡ್ಲೇಕಾಯಿ ತ್ರಿಚಕ್ರವಾಹಾನ, ಸ್ಕೂಟರ್, ಪೆಡಲ್ ಕಾರ್, ಬೊಂಬೆ ಇನ್ನಿತರ ಆಟದ ಸಾಮಾಗ್ರಿಗಳು, ರೇಷ್ಮೆ ಸಿದ್ಧ ಉಡುಪು, ಟ್ರಕ್ ಹಾಗೂ ಬಸ್ ಟೈಯರ್, ಸುಗಂಧ ದ್ರವ್ಯ ಹಾಗೂ ಟಾಯ್ಲೆಟ್ ಸ್ಪ್ರೇ, ಡಿಯೋಡ್ರಂಟ್, ಶೇವಿಂಗ್ ಕ್ರೀಮ್ ಹಾಗೂ ಸಂಬಂಧಿಸಿದಂತ ಉತ್ಪನ್ನಗಳು

ಆಮದು ವಸ್ತುಗಳ ಬೆಲೆ ಏರಿಕೆ

ಆಮದು ವಸ್ತುಗಳ ಬೆಲೆ ಏರಿಕೆ

ಕಾರು, ಮೋಟಾರ್ ಸೈಕಲ್, ಮೊಬೈಲ್ ಫೋನ್, ಚಿನ್ನ, ಬೆಳ್ಳಿ, ವಜ್ರ, ಫ್ಯಾನ್ಸಿ ಆಭರಣಗಳು, ತರಕಾರಿ, ಹಣ್ಣಿನ ಜ್ಯೂಸ್, ಸನ್ ಗ್ಲಾಸ್, ಸುಗಂಧ ಧ್ರವ್ಯಗಳು, ಅಡುಗೆ ತಯಾರಿಸಲು ಬಳಸುವ ವಸ್ತುಗಳು, ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ವಸ್ತುಗಳು, ಹಲ್ಲಿನ ಸ್ವಚ್ಛತೆ ಮತ್ತು ಶೇವ್ ಗೆ ಸಂಬಂಧಿಸಿದ ವಸ್ತುಗಳು, ಬಸ್ ಮತ್ತು ಟ್ರಕ್ ಗಳ ಟೈರುಗಳು, ರೇಷ್ಮೆ ಬಟ್ಟೆ, ಚಪ್ಪಲಿ, ಮುತ್ತು ರತ್ನಗಳು, ಸ್ಮಾರ್ಟ್ ವಾಚ್ ಸೇರಿದಂತೆ ವಿಭಿನ್ನ ಗಡಿಯಾರಗಳು, ಎಲ್ಇಡಿ, ಎಲ್ ಸಿಡಿ ಟಿವಿ, ಗೃಹ ಉಪಯೋಗಿ ವಸ್ತುಗಳು, ಬಲ್ಬ್ ಗಳು, ಆಟಿಕೆ ವಸ್ತುಗಳು, ವಿಡಿಯೋ ಗೇಮ್ ಸಾಧನಗಳು, ಕ್ರೀಡೆಗೆ ಬಳಸುವ ವಸ್ತುಗಳು, ಸಿಗರೇಟ್, ಕ್ಯಾಂಡಲ್, ಗಾಳಿಪಟ, ಆಲಿವ್ ಮತ್ತು ಕಡಲೆ ಎಣ್ಣೆಯಂಥ ಅಡುಗೆ ಎಣ್ಣೆಗಳ ಬೆಲೆ ಏರಿಕೆಯಾಗಲಿದೆ.

ವಿದೇಶಿ ಸ್ಮಾರ್ಟ್ ಫೋನ್

ವಿದೇಶಿ ಸ್ಮಾರ್ಟ್ ಫೋನ್

ಮೊಬೈಲ್ ಫೋನ್ ಮತ್ತು ಸ್ಮಾರ್ಟ್ ಫೋನ್ ಉಪಕರಣಗಳ ಆಮದಿನ ಮೇಲಿದ್ದ ಅಬಕಾರಿ ಸುಂಕವನ್ನು ಬಜೆಟ್ ನಲ್ಲಿ ಶೇಕಡಾ 15 ರಿಂದ 20ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಇವುಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಲಿದೆ. ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು ಎಂಬ ಕಾರಣಕ್ಕೆ ಮೊಬೈಲ್ ಫೋನ್ ಆಮದಿನ ಮೇಲಿನ ಸುಂಕ ಏರಿಕೆ ಮಾಡಲಾಗಿದೆ. ಇದರಿಂದ ಮುಖ್ಯವಾಗಿ ಚೀನಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆಗಳಾದ ವಿವೋ, ಒಪ್ಪೋ, ಶಿಯೋಮಿ, ಹುವಾಯ್ ಕಂಪನಿಗಳಿಗೆ ಹೊಡೆತ ಬೀಳಲಿದ್ದರೆ, ಗ್ರಾಹಕರ ಜೇಬಿಗೆ ಮೊಬೈಲ್ ಫೋನ್ ಗಳು ಭಾರವಾಗಲಿವೆ.

ಸೆಸ್ ದರದಲ್ಲಿ ಬದಲಾವಣೆ

ಸೆಸ್ ದರದಲ್ಲಿ ಬದಲಾವಣೆ

ಬಜೆಟ್ ನಲ್ಲಿ ಆದಾಯ ತೆರಿಗೆ ಮೇಲಿನ ಶೈಕ್ಷಣಿಕ ಸೆಸ್ ನ್ನು ಹಾಲಿ ಶೇಕಡಾ 3 ರಿಂದ 4ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ವೈಯಕ್ತಿಕ ತೆರಿಗೆ ಪಾವತಿಯಲ್ಲಿ ಹೆಚ್ಚಳವಾಗಲಿದೆ. ಇದು ಮಧ್ಯಮ ವರ್ಗದವರಿಗೆ ಹೊರೆಯಾಗಲಿದೆ. ಆದಾಯ ತೆರಿಗೆ ಪಾವತಿಯಲ್ಲಾಗುವ ಹೆಚ್ಚಳದ ಪ್ರಮಾಣವನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ

ಆದಾಯ ತೆರಿಗೆಯಲ್ಲಿ ಏರಿಕೆ

ಆದಾಯ ತೆರಿಗೆಯಲ್ಲಿ ಏರಿಕೆ

* ಆದಾಯ ತೆರಿಗೆ ಮೇಲಿನ ಮೇಲ್ತೆರಿಗೆ ಶೇ 3ರಿಂದ ಶೇ4ಕ್ಕೇರಿಕೆ.

* 5 ಲಕ್ಷ ರುಗಳಿಗೂ ಹೆಚ್ಚಿನ ಆದಾಯ ಹೊಂದಿರುವವರಿಗೆ ಶೇ 4ರಷ್ಟು ಹೆಚ್ಚುವರಿಯಲ್ಲಿ ಶಿಕ್ಷಣ ಸೆಸ್ ಹೊರೆ.

* ಹಿರಿಯ ನಾಗರಿಕರಿಗೆ ಠೇವಣಿ ಮೇಲಿನ ಬಡ್ಡಿ ತೆರಿಗೆ ಮಿತಿ 10 ಸಾವಿರ ರು ನಿಂದ 50 ಸಾವಿರ ರೂಗಳಿಗೆ ಏರಿಕೆ.

* ಹಿರಿಯ ನಾಗರಿಕರಿಗೆ ಮಾರಣಾಂತಿಕ ಕಾಯಿಲೆಗಳ ಮೇಲಿನ ಚಿಕಿತ್ಸಾ ವೆಚ್ಚದ ಮೇಲಿನ ತೆರಿಗೆ ಮಿತಿ 1 ಲಕ್ಷ ರು ಗಳಿಗೆ ಏರಿಕೆ

English summary
A fresh Financial Year has begun with lots of changes which will dent your pocket. The changes made in Union Budget 2018-19, will come into effect from today(April 01, 2018). Following are the ways in, which the Budget recommendations will hit you from today(April 1).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X