ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್‌, ಡೀಸೆಲ್‌ ಮಾತ್ರವಲ್ಲ ಯಾವುದೆಲ್ಲಾ ದುಬಾರಿಯಾಗಿದೆ?

|
Google Oneindia Kannada News

ನವದೆಹಲಿ, ಮಾರ್ಚ್ 24: ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಈ ವರ್ಷದಲ್ಲಿ ಮೊದಲ ಬಾರಿಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ದರವು ಏರಿಕೆ ಕಂಡಿದೆ. ಉಕ್ರೇನ್‌ ಹಾಗೂ ರಷ್ಯಾದ ಯುದ್ಧದ ನಡುವೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರವು ಹೆಚ್ಚಳವಾಗುತ್ತಿದ್ದಂತೆ ದೇಶದಲ್ಲಿ ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಮಾಡಲಾಗಿದೆ.

ಮಂಗಳವಾರ ಹಾಗೂ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 80 ಪೈಸೆ ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್ ದರವು ಈ ಹಿಂದೆ 95.41 ರೂ. ಆಗಿತ್ತು. ಆದರೆ ಈಗ 96.21 ರೂಪಾಯಿಗೆ ಏರಿಕೆ ಕಂಡಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 0.84 ರೂಪಾಯಿ ಏರಿಕೆಯಾಗಿದ್ದು, ಲೀಟರ್‌ಗೆ 110.82 ರೂಪಾಯಿಗಳಿಗೆ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 0.86 ರಿಂದ 95 ರೂಪಾಯಿಗಳಿಗೆ ಏರಿಕೆಯಾಗಿದೆ.

LPG Price Hike:ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಹೆಚ್ಚಳLPG Price Hike:ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಹೆಚ್ಚಳ

2021-22ರ ಆರ್ಥಿಕ ವರ್ಷದ ಕೊನೆಯ ತಿಂಗಳಾದ ಮಾರ್ಚ್‌ನಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯು ಹೆಚ್ಚಳವಾಗಿದೆ. ಆದರೆ ಇಂಧನದ ಹೊರತಾಗಿ ಇತರ ಹಲವು ವಸ್ತುಗಳ ಬೆಲೆಯೂ ಕೂಡಾ ಈ ತಿಂಗಳಿನಲ್ಲಿ ಏರಿಕೆ ಆಗಿದೆ. ಹಾಗಾದರೆ ಪೆಟ್ರೋಲ್‌, ಡೀಸೆಲ್‌ ಹೊರತುಪಡಿಸಿ ದೇಶದಲ್ಲಿ ಯಾವೆಲ್ಲಾ ವಸ್ತುಗಳು ಈ ತಿಂಗಳಿನಲ್ಲಿ ದುಬಾರಿ ಆಗಿದೆ, ಯಾವುದರ ಬೆಲೆ ಎಷ್ಟು ಏರಿಕೆ ಆಗಿದೆ ಎಂಬ ಬಗ್ಗೆ ತಿಳಿಯಲು ಮುಂದೆ ಓದಿ....

ವಾಹನ ಸವಾರರೇ ಗಮನಿಸಿ: ಮಾ.24ರಂದು ನಿಮ್ಮ ನಗರದಲ್ಲಿ ಎಷ್ಟಿದೆ ಪೆಟ್ರೋಲ್-ಡೀಸೆಲ್ ದರ? ವಾಹನ ಸವಾರರೇ ಗಮನಿಸಿ: ಮಾ.24ರಂದು ನಿಮ್ಮ ನಗರದಲ್ಲಿ ಎಷ್ಟಿದೆ ಪೆಟ್ರೋಲ್-ಡೀಸೆಲ್ ದರ?

 ಪ್ಯಾಕೇಜ್‌ ಹಾಲಿನ ಬೆಲೆ ಏರಿಕೆ

ಪ್ಯಾಕೇಜ್‌ ಹಾಲಿನ ಬೆಲೆ ಏರಿಕೆ

ದೇಶದಲ್ಲಿ ಹಲವಾರು ಹಾಲು ಒಕ್ಕೂಟಗಳು ತಮ್ಮ ಪ್ಯಾಕೇಜ್‌ ಹಾಲಿನ ದರವನ್ನು ಹೆಚ್ಚಳ ಮಾಡಿದೆ. ಪ್ರಮುಖವಾಗಿ ಮದರ್ ಡೈರ್, ಪರಾಗ್ ಮತ್ತು ಅಮೂಲ್ ಸೇರಿದಂತೆ ಸಹಕಾರಿ ಹಾಲು ಒಕ್ಕೂಟಗಳು ತಮ್ಮ ಉತ್ಪನ್ನಗಳ ದರವನ್ನು ಏರಿಕೆ ಮಾಡಿದೆ. ಈ ಹಾಲು ಒಕ್ಕೂಟಗಳು ತಮ್ಮ ಉತ್ಪನ್ನಗಳ ದರವನ್ನು ಲೀಟರ್‌ಗೆ 2 ರೂಪಾಯಿಯಷ್ಟು ಏರಿಕೆ ಮಾಡಿದೆ. ಇನ್ನು ಮಧ್ಯಪ್ರದೇಶದ ಸಾಂಚಿ ಹಾಲಿನ ಸಹಕಾರಿ ಕೂಡಾ ಇದೇ ರೀತಿಯ ಕ್ರಮವನ್ನು ಕೈಗೊಂಡಿದೆ. ಮಧ್ಯಪ್ರದೇಶದ ಸಾಂಚಿ ಹಾಲಿನ ಸಹಕಾರಿ ತಮ್ಮ ಉತ್ಪನ್ನದ ಬೆಲೆಯನ್ನು ಲೀಟರ್‌ಗೆ 5 ರೂ ಹೆಚ್ಚಿಸಿದೆ. ಇನ್ನು ನಂದಿನ ಹಾಲಿನ ದರವು ಕೂಡಾ ಏರಿಕೆ ಆಗಲಿದೆ ಎಂದು ಸುದ್ದಿಯಾಗುತ್ತಿದೆ. ಶೀಘ್ರವೇ ಕೆಎಂಎಫ್‌ ಸಭೆ ನಡೆಸಲಿದ್ದು, ಈ ಸಭೆಯ ಬಗ್ಗೆ ನಂದಿನ ಹಾಲಿನ ಬೆಲೆ ಏರಿಕೆ ಬಗ್ಗೆ ನಿರ್ಧಾರವಾಗಲಿದೆ ಎಂದು ವರದಿ ಉಲ್ಲೇಖ ಮಾಡಿದೆ.

 ಎಲ್‌ಪಿಜಿ ಬೆಲೆ ಹೆಚ್ಚಳ

ಎಲ್‌ಪಿಜಿ ಬೆಲೆ ಹೆಚ್ಚಳ

ಈಗಾಗಲೇ ಎಲ್‌ಪಿಜಿ ಬೆಲೆಯು ಗಗನಕ್ಕೆ ಏರಿದೆ. ಈ ನಡುವೆ ಇತ್ತೀಚೆಗೆ ಎಲ್‌ಪಿಜಿ ಬೆಲೆಯು ಏರಿಕೆ ಆಗಿದೆ. ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯು ಅಂತ್ಯವಾಗುತ್ತಿದ್ದಂತೆ ಎಲ್‌ಪಿಜಿ ಬೆಲೆಯು ಕೂಡಾ ಹೆಚ್ಚಳವಾಗಿದೆ. ಕಳೆದ ಬಾರಿ ಅಕ್ಟೋಬರ್ 6 ರಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯು ಹೆಚ್ಚಳವಾಗಿತ್ತು. ಮಂಗಳವಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆಯ ಜೊತೆಗೆ ಅಡುಗೆ ಅನಿಲ ದರವು ಕೂಡಾ ಹೆಚ್ಚಳವಾಗಿದೆ. 14.2 ಕೆಜಿ ಸಿಲಿಂಡರ್‌ಗೆ 50 ರೂಪಾಯಿ ಹೆಚ್ಚಿಸಲಾಗಿದ್ದು, ಪ್ರಸ್ತುತ ಪ್ರತಿ ಸಿಲಿಂಡರ್‌ ಬೆಲೆಯು 949.50 ರೂಪಾಯಿ ಆಗಿದೆ. ಈ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಡುಗೆ ಅನಿಲ ದರವು 899.50 ರೂ ಆಗಿತ್ತು. ತೈಲ ಕಂಪನಿಗಳು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದ್ದಲ್ಲದೆ, 5 ಕೆಜಿ ಮತ್ತು 10 ಕೆಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. ಈಗ 5 ಕೆಜಿ ಎಲ್‌ಪಿಜಿ ಸಿಲಿಂಡರ್ 349 ರೂ.ಗೆ ಮತ್ತು 10 ಕೆಜಿ 669 ರೂ.ಗೆ ಲಭ್ಯವಾಗಲಿದೆ. ಅಷ್ಟೇ ಅಲ್ಲ, 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯೂ 2,003.50 ರೂ.ಗೆ ತಲುಪಿದೆ.

 ಸಿಎನ್‌ಜಿ, ಪಿಎನ್‌ಜಿ ಬೆಲೆ ಏರಿಕೆ

ಸಿಎನ್‌ಜಿ, ಪಿಎನ್‌ಜಿ ಬೆಲೆ ಏರಿಕೆ

ದೆಹಲಿಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ(ಸಿಎನ್‌ಜಿ) ಹಾಗೂ ಪೈಪ್ ಲೈನ್ ಮೂಲಕ ಒದಗಿಸುವ ನೈಸರ್ಗಿಕ ಅನಿಲ(ಪಿಎನ್‌ಜಿ)ದ ಬೆಲೆ ಏರಿಕೆ ಆಗಿದೆ. ದೆಹಲಿಯ ಎನ್ ಸಿಟಿಯಲ್ಲಿ ಕೆಜಿಗೆ 59.01 ರೂಪಾಯಿ ಆಗಿದೆ. ನೋಯ್ಡಾ, ಗ್ರೇಟರ್ ನೋಯ್ಡಾ, ಘಾಜಿಯಾಬಾದ್‌ನಲ್ಲಿ ಕೆಜಿಗೆ 61.58 ರೂಪಾಯಿ ಆಗಿದೆ. ಕಾನ್ಪುರ್, ಹಮೀರ್ ಪುರ್, ಫತೇಪುರ್‌ನಲ್ಲಿ ಕೆಜಿಗೆ 70.82 ರೂಪಾಯಿ ಆಗಿದೆ. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪಿಎನ್‌ಜಿ ದರವು ಕೂಡಾ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪ್ರತಿ ಯೂನಿಟ್‌ಗೆ 36.61 ರೂಪಾಯಿಗೆ ಏರಿದೆ. ನೋಯ್ಡಾ, ಗ್ರೇಟರ್ ನೋಯ್ಡಾ, ಘಾಜಿಯಾಬಾದ್‌ನಲ್ಲಿ ಪ್ರತಿ ಯೂನಿಟ್‌ಗೆ 35.85 ರೂಪಾಯಿ ಆಗಿದೆ.

 ಇತರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ

ಇತರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ

ಪಿಟಿಐ ವರದಿಯ ಪ್ರಕಾರ, ಪ್ರಮುಖ ವಸ್ತುಗಳ ಬೆಲೆಯು ಕೂಡಾ ಏರಿಕೆ ಆಗಿದೆ. ಎಚ್‌ಯುಎಲ್ ಮತ್ತು ನೆಸ್ಲೆ ಈಗಾಗಲೇ ಚಹಾ, ಕಾಫಿ ಮತ್ತು ನೂಡಲ್ಸ್‌ನಂತಹ ಆಹಾರ ಪದಾರ್ಥಗಳ ಬೆಲೆಗಳನ್ನು ಹೆಚ್ಚಿಸಿವೆ. ಕಂಪನಿಯು ಹಣದುಬ್ಬರದ ಒತ್ತಡವನ್ನು ಎದುರಿಸುತ್ತಿರುವ ಕಾರಣ ಹೆಚ್‌ಯುಎಲ್‌ ಬ್ರೂ ಕಾಫಿ, ಬ್ರೂಕ್ ಬಾಂಡ್ ಟೀ ಇತ್ಯಾದಿಗಳ ಬೆಲೆಗಳನ್ನು ಹೆಚ್ಚಿಸಿದೆ ಎಂದು ವರದಿಗಳು ಹೇಳಿವೆ. ನೆಸ್ಲೆ ಇಂಡಿಯಾ ತನ್ನ ಜನಪ್ರಿಯ ಮ್ಯಾಗಿ ನೂಡಲ್ಸ್‌ನ ಬೆಲೆಯನ್ನು ಶೇಕಡಾ 9 ರಿಂದ 16 ರಷ್ಟು ಹೆಚ್ಚಿಸಿದ್ದರೆ, ಹಾಲು ಮತ್ತು ಕಾಫಿ ಪುಡಿಯ ಬೆಲೆಯನ್ನು ಸಹ ಹೆಚ್ಚಿಸಿದೆ ಎಂದು ವರದಿಗಳು ತಿಳಿಸಿವೆ. (ಒನ್‌ಇಂಡಿಯಾ ಸುದ್ದಿ)

Recommended Video

Siddaramaiah ನವರು ಸಿದ್ದರಾಮೇಶ್ವರ ಜಾತ್ರೆಯಲ್ಲಿ ಕುಣಿದು ಕುಪ್ಪಳಿಸಿದರು | Oneindia Kannada

English summary
Apart from Petrol and Diesel Price, prices of many other commodities have also gone up in March 2022. Here is the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X