ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿಯಿಂದ ಈ ಕಾರುಗಳ ಬೆಲೆ ಹೆಚ್ಚಳವಾಗಲಿದೆ: ಎಷ್ಟು ರೂಪಾಯಿ ಬೆಲೆ ಏರಿಕೆ?

|
Google Oneindia Kannada News

ನವದೆಹಲಿ, ಡಿಸೆಂಬರ್ 23: ಹೊಸ ವರ್ಷದಲ್ಲಿ ಕಾರು ಖರೀದಿ ಮಾಡಬೇಕು ಎಂದುಕೊಂಡಿದ್ದವರಿಗೆ ವಾಹನ ತಯಾರಕ ಕಂಪನಿಗಳು ಶಾಕ್ ನೀಡಲಿವೆ. ಕಚ್ಚಾ ವಸ್ತುಗಳ ವೆಚ್ಚ ಏರಿಕೆಯಾಗಿರುವುದರಿಂದ ಮುಂದಿನ ತಿಂಗಳಿನಿಂದ ವಿವಿಧ ವಾಹನ ಕಂಪನಿಗಳು ಬೆಲೆ ಹೆಚ್ಚಿಸಲು ನಿರ್ಧರಿಸಿದೆ.

ದೇಶೀಯ ಆಟೋ ದೈತ್ಯ ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ, ಮಾರುತಿ ಸುಜುಕಿ , ಇಸುಜು ಮೋಟಾರ್ಸ್ ಮತ್ತು ಬಿಎಂಡಬ್ಲ್ಯು ಮೋಟಾರ್ಸ್ ವಾಹನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿವೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಟಾಟಾ ಮೋಟಾರ್ಸ್ ಮತ್ತು ಇಸುಜು ಮೋಟಾರ್ಸ್ ಇಂಡಿಯಾ ಜನವರಿ 1 ರಿಂದ ಬೆಲೆಗಳನ್ನು ಹೆಚ್ಚಿಸುವುದಾಗಿ ಹೇಳಿದರೆ, ಜನವರಿ 4 ರಿಂದ ಬೆಲೆಗಳನ್ನು ಹೆಚ್ಚಿಸುವುದಾಗಿ ಬಿಎಂಡಬ್ಲ್ಯು ಹೇಳಿದೆ. ಟಾಟಾ ಮೋಟಾರ್ಸ್ ಜನವರಿ 1 ರಿಂದ ವಾಣಿಜ್ಯ ವಾಹನ ಮಾದರಿಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

2020ರಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರುಗಳ ಮಾಹಿತಿ ಇಲ್ಲಿದೆ2020ರಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರುಗಳ ಮಾಹಿತಿ ಇಲ್ಲಿದೆ

ಮಾರುತಿ ಸುಜುಕಿ

ಮಾರುತಿ ಸುಜುಕಿ

ದೇಶದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ ಘೋಷಿಸಿದ ಮೊದಲ ಕಂಪನಿಯಾಗಿದೆ. ಆದರೆ ಎಷ್ಟು ರೂಪಾಯಿ ಬೆಲೆ ಏರಿಕೆ ಮತ್ತು ಯಾವ ಕಾರುಗಳ ಮೇಲೆ ಎಷ್ಟು ಬೆಲೆ ಹೆಚ್ಚಳವಾಗಲಿದೆ ಎಂಬುದು ಮುಂದಿನ ತಿಂಗಳು ತಿಳಿದುಬರಲಿದೆ.

ಮಾರುತಿ ಸುಜುಕಿ ಕಾರುಗಳ ನಿರ್ದಿಷ್ಟವಾದ ಬೆಲೆ ಏರಿಕೆ ಆಗಿರದೆ ವಿಭಿನ್ನ ಮಾಡೆಲ್‌ಗಳ ಮೇಲೆ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ.

ಬಿಎಂಡಬ್ಲ್ಯೂ

ಬಿಎಂಡಬ್ಲ್ಯೂ

ಜರ್ಮನಿ ಮೂಲದ ಐಶರಾಮಿ ಕಾರುಗಳ ಉತ್ಪಾದಕ ಬಿಎಂಡಬ್ಲ್ಯೂ ಕೂಡ ಭಾರತದಲ್ಲಿ ತನ್ನೆಲ್ಲಾ ಕಾರುಗಳ ಬೆಲೆಯಲ್ಲಿ ಶೇಕಡಾ 2ರಷ್ಟು ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದೆ. ಬಿಎಂಡಬ್ಲ್ಯೂ ಕಾರುಗಳ ಬೆಲೆ ಏರಿಕೆಯು ಜನವರಿ 4, 2021ರಿಂದ ಅನ್ವಯವಾಗಲಿದೆ.

ಆಡಿ

ಆಡಿ

ಐಶಾರಾಮಿ ಕಾರು ತಯಾರಕರಲ್ಲಿ ಒಂದಾದ ಆಡಿ ಕೂಡ ಜನವರಿಯಿಂದ ತನ್ನ ಕಂಪನಿಯ ಕಾರುಗಳ ಬೆಲೆಯನ್ನು ಶೇಕಡಾ 2ರಷ್ಟು ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ. ವಿವಿಧ ಮಾದರಿಯ ಕಾರುಗಳ ಬೆಲೆ ಏರಿಕೆಯು ಜನವರಿ 1,2021ರಿಂದ ಅನ್ವಯವಾಗಲಿದೆ.

ಎಂಜಿ ಮೋಟಾರ್ಸ್‌

ಎಂಜಿ ಮೋಟಾರ್ಸ್‌

ಜನವರಿಯಿಂದ ಎಂಜಿ ಮೋಟಾರ್ಸ್‌ ತನ್ನ ವಿಭಿನ್ನ ಮಾಡೆಲ್ ಕಾರುಗಳ ಬೆಲೆಯಲ್ಲಿ ಶೇಕಡಾ 3ರಷ್ಟು ಏರಿಕೆ ಮಾಡಲಿದೆ. ಕಚ್ಚಾವಸ್ತುಗಳ ಆಮದು ವೆಚ್ಚ ಹೆಚ್ಚಿರುವ ಪರಿಣಾಮ ಮುಂದಿನ ತಿಂಗಳು ಕಾರುಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದೆ.

ಎಂಜಿ ಮೋಟಾರ್ಸ್‌ನ ಹೊಸ ಏಳು ಸೀಟ್‌ಗಳನ್ನು ಹೊಂದಿರುವ ಹೆಕ್ಟರ್ ಪ್ಲಸ್ ಮಾಡೆಲ್ ಕಾರುಗಳನ್ನು ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ರೆನಾಲ್ಟ್‌

ರೆನಾಲ್ಟ್‌

ರೆನಾಲ್ಟ್ ಕೂಡ ತನ್ನ ವಿವಿಧ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದ್ದು 28,000 ರೂಪಾಯಿವರೆಗೆ ಬೆಲೆ ಏರಿಕೆ ಘೋಷಿಸಿದೆ. ಕಂಪನಿಯು ಜನಪ್ರಿಯ ಡಸ್ಟರ್, ಕ್ವಿಡ್, ಟ್ರೈಬರ್‌ನಂತಹ ಕಾರುಗಳನ್ನು ಮಾರಾಟ ಮಾಡುತ್ತಿದ್ದು ಇವುಗಳ ಬೆಲೆ ಏರಿಕೆ ಸಾಧ್ಯತೆ ಇದೆ.

ಹೋಂಡಾ

ಹೋಂಡಾ

ಜಪಾನ್ ಮೂಲದ ಪ್ರಮುಖ ವಾಹನ ತಯಾರಕ ಹೋಂಡಾ ಕೂಡ ಮುಂದಿನ ತಿಂಗಳಿನಿಂದ ಬಾರತದಲ್ಲಿ ವಾಹನಗಳ ಬೆಲೆ ಹೆಚ್ಚಿಸಲು ಯೋಜಿಸಿದೆ. ಈಗಾಗಲೇ ಕಂಪನಿಯ ವಿತರಕರಿಗೆ ಈ ನಿರ್ಧಾರದ ಬಗ್ಗೆ ತಿಳಿಸಲಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.


ಕಂಪನಿಯ ಇನ್ಪುಟ್ ವೆಚ್ಚದಲ್ಲಿ ಮತ್ತು ಕರೆನ್ಸಿಯ ಮೇಲಿನ ಒತ್ತಡ ಪರಿಣಾಮಗಳಿಂದಾಗಿ ಜನವರಿಯಿಂದ ಬೆಲೆ ಹೆಚ್ಚಿಸುತ್ತಿದೆ.

ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್

ಭಾರತದ ವಾಹನಗಳ ದೈತ್ಯ ಉತ್ಪಾದಕಾ ಟಾಟಾ ಮೋಟಾರ್ಸ್ ಕೂಡ ಜನವರಿಯಿಂದ ಬೆಲೆ ಏರಿಕೆಗೆ ಸಜ್ಜಾಗಿದೆ. ತನ್ನ ವಾಣಿಜ್ಯ ವಾಹನಗಳ ಬೆಲೆಯನ್ನು ಮುಂದಿನ ಜನವರಿಯಿಂದ ಪರಿಷ್ಕರಿಸಲಾಗುವುದು ಎಂದು ಹೇಳಿದೆ.

ಕಚ್ಚಾ ವಸ್ತುಗಳ ಬೆಲೆಯಲ್ಲಿ ಸ್ಥಿರ ಏರಿಕೆ , ಬಿಎಸ್‌-VI ಎಂಜಿನ್ ರೂಪಾಂತರ ಹಾಗೂ ವಿದೇಶಿ ವಿನಿಮಯಗಳ ಪರಿಣಾಮ ವಾಹನಗಳ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಾಗಿದೆ. ಪರಿಣಾಮ ಬೆಲೆ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದಿದೆ.

ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಮಧ್ಯಂತರ ಮತ್ತು ಲಘು ವಾಣಿಜ್ಯ ವಾಹನಗಳು, ಸಣ್ಣ ವಾಣಿಜ್ಯ ವಾಹನಗಳು ಮತ್ತು ಬಸ್ಸುಗಳ ಬೆಲೆ ಏರಿಕೆ ನಿರೀಕ್ಷಿಸಲಾಗಿದೆ.

English summary
These motor manufacturer will hike vehicle price from january 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X