ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ 18 ಷೇರುಗಳಲ್ಲಿ ಹೂಡಿಕೆದಾರರ ಸಂಪತ್ತು ಡಬಲ್ ಆಗಿದೆ

|
Google Oneindia Kannada News

ಕೊರೊನಾವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮಾರ್ಚ್‌ 24ರಂದು 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿತ್ತು. ಅಂದು ಷೇರು ಮಾರುಕಟ್ಟೆ ಪಾತಾಳ ತಲುಪಿತ್ತು. ಹೂಡಿಕೆದಾರರ ಸಂಪತ್ತು ನೋಡ ನೋಡುತ್ತಿದ್ದಂತೆ ಕರಗಿ ಹೋಗಿತ್ತು.

Recommended Video

ಲಾಕ್‌ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಮಾರಾಟವಾದ ಬಿಸ್ಕತ್| Parle G biscuit register Highest sale in Lockdown

ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಇಂಟ್ರಾಡೇ ಕನಿಷ್ಠ 25,638 ಕ್ಕೆ ತಲುಪಿದ್ದರೆ, ಮಾರ್ಚ್ 24 ರಂದು ನಿಫ್ಟಿ 50ಯು 7,511 ಪಾಯಿಂಟ್‌ಗೆ ಇಳಿಕೆಯಾಗಿತ್ತು. ಅಂದಿನಿಂದ ಹಲವು ವಹಿವಾಟುಗಳಲ್ಲಿ ಮಾರುಕಟ್ಟೆಯು ಭಾರೀ ಕುಸಿತವನ್ನು ಎದುರಿಸಿತು.

 RIL ಹಕ್ಕುಗಳ ಹಂಚಿಕೆ: ಮಾನ್ಸೂನ್‌ಗೂ ಮುಂಚೆಯೇ ಹಣದ ಮಳೆ, ದಾಖಲೆ ಬರೆದ ರಿಲಯನ್ಸ್ ಇಂಡಸ್ಟ್ರೀಸ್ RIL ಹಕ್ಕುಗಳ ಹಂಚಿಕೆ: ಮಾನ್ಸೂನ್‌ಗೂ ಮುಂಚೆಯೇ ಹಣದ ಮಳೆ, ದಾಖಲೆ ಬರೆದ ರಿಲಯನ್ಸ್ ಇಂಡಸ್ಟ್ರೀಸ್

ಹೀಗೆ ಮಾರ್ಚ್‌ 24ಕ್ಕೆ ಹೂಡಿಕೆದಾರರಿಗೆ ಶಾಕ್ ನೀಡಿದ್ದ ಈ ದಿಢೀರ್ ಕುಸಿತವು ಒಂದು ಕಡೆಯಾದರೆ, ಈ 18 ಷೇರುಗಳು ಹೂಡಿಕೆದಾರರ ಸಂಪತ್ತನ್ನು ನಂತರ ದ್ವಿಗುಣಗೊಳಿಸಿತು. ಬಿಎಸ್‌ಇ ಮತ್ತು ಎನ್‌ಎಸ್‌ಇ ಸೂಚ್ಯಂಕದಲ್ಲಿ ಈ ಷೇರುಗಳ ಬೆಲೆ ದುಪ್ಪಟ್ಟಾಯಿತು.

These 18 Stocks More Than Doubled Investor Wealth Since March 24

ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸಿದ ಷೇರುಗಳಲ್ಲಿ ಇಐಡಿ ಪ್ಯಾರಿ, ಅದಾನಿ ಗ್ರೀನ್ ಎನರ್ಜಿ, ಐಎಫ್‌ಸಿಐ, ಕೆಆರ್‌ಬಿಎಲ್, ಅರಬಿಂದೋ ಫಾರ್ಮಾ, ಎಚ್‌ಇಜಿ, ರಿಲಯನ್ಸ್ ಪವರ್ ಮತ್ತು ವೊಡಾಫೋನ್ ಐಡಿಯಾ ಸೇರಿವೆ. ಇದರ ಜೊತೆಗೆ ಉಳಿದ ಷೇರುಗಳ ಹೆಸರು ಮತ್ತು ಗಳಿಕೆಯನ್ನು ಪರ್ಸೆಂಟ್‌ನಲ್ಲಿ ಈ ಕೆಳಗೆ ನೀಡಲಾಗಿದೆ.

ಕಂಪನಿಯ ಹೆಸರು ಮಾರ್ಚ್‌ 24ರಿಂದ ಆದಾಯ (ಪರ್ಸೆಂಟ್)

ವೊಡಾಫೋನ್ ಐಡಿಯಾ 213.10

ಜೈನ್ ಇರಿಗೇಷನ್ ಸಿಸ್ಟಮ್ 166.57

ಜುಬಿಲೆಂಟ್ ಲೈಫ್ ಸೈನ್ಸ್‌ 134.34

ಎಚ್‌ಇಜಿ 128.46

ಅರಬಿಂದೋ ಫಾರ್ಮಾ 128.27

ಟ್ರಿಡೆಂಟ್ 124.01

ರಿಲಯನ್ಸ್ ಪವರ್ 122.94

ರಿಲಯನ್ಸ್ ಇನ್ಫಾಸ್ಟ್ರಕ್ಚರ್ 121.58

ರಿಲಯನ್ಸ್ ಕ್ಯಾಪಿಟಲ್ 118.25

ಹ್ಯಾಥ್‌ವೇ ಕೇಬಲ್ & ಡಾಟಕಾಮ್ 118.14

ಗ್ಲೆನ್‌ಮಾರ್ಕ್ ಫಾರ್ಮಾಸ್ಯೂಟಿಕಲ್ಸ್ 110.90

ಇನ್ಫಿಬೀಮ್ ಅವೆನ್ಯೂಸ್ 108.97

ಐಡಿಬಿಐ ಬ್ಯಾಂಕ್ 108.13

ಕೆಆರ್‌ಬಿಎಲ್ 107.36

ಐಎಫ್‌ಸಿಐ 107.23

ಜಿಎಂಎಂ ಫಾಡುಲರ್ 103.09

ಅದಾನಿ ಗ್ರೀನ್ ಎನರ್ಜಿ 101.20

ಇಐಡಿ ಪ್ಯಾರಿ 100.33

ಮಾಹಿತಿ: AceEquity/BSE 500 Index

English summary
These are the 18 Stocks More Than Doubled Investor Wealth Since March 24 after nationwide lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X