ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ವರ್ಷದ ಹಿಂದೆ 43 ರೂಪಾಯಿ ಮೌಲ್ಯದ ಷೇರು, ಇಂದು 573 ರೂಪಾಯಿ: ಯಾವ ಕಂಪನಿ ಷೇರು ಗೊತ್ತೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 03:ಷೇರು ಮಾರುಕಟ್ಟೆ ಆಳವನ್ನ ನಿರ್ದಿಷ್ಟವಾಗಿ ಬಲ್ಲವರು ತುಂಬಾ ವಿರಳ. ಷೇರು ಮಾರುಕಟ್ಟೆಯ ಸಮುದ್ರದಲ್ಲಿ ಈಜಿ ಯಶಸ್ವಿಯಾಗುವವರು ಕೆಲವೇ ಕೆಲವರು. ಇಂದು ಇರುವ ಷೇರು ಮಾರುಕಟ್ಟೆ ವಹಿವಾಟು ಕೆಲವೇ ನಿಮಿಷದಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸಬಹುದು.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಒಂದೇ ದಿನದಲ್ಲಿ ಕೋಟ್ಯಾಧಿಪತಿಗಳಾದ ಉದಾಹರಣೆಯು ಇದೆ. ಹಾಗೆಯೇ ನೆಲಕಚ್ಚಿ ಪಾಪರ್ ಆದ ಸಂಗತಿಗಳನ್ನು ನೀವು ಓದಿದ್ದೀರಿ. ಇಂದು ಈ ಲೇಖನದಲ್ಲಿ ಹೂಡಿಕೆದಾರರ ಸಂಪತ್ತನ್ನ ಹತ್ತು ಪಟ್ಟು ಹೆಚ್ಚಿಸಿರುವ ಷೇರಿನ ಕುರಿತು ನಿಮಗೆ ತಿಳಿಸುತ್ತಿದ್ದೇವೆ.

ಮುಂಬೈ ವಿಮಾನ ನಿಲ್ದಾಣದ ಶೇ 74ರಷ್ಟು ಶೇರು ಅದಾನಿ ಸಮೂಹದ ಪಾಲಿಗೆಮುಂಬೈ ವಿಮಾನ ನಿಲ್ದಾಣದ ಶೇ 74ರಷ್ಟು ಶೇರು ಅದಾನಿ ಸಮೂಹದ ಪಾಲಿಗೆ

ಅದಾನಿ ಗ್ರೂಪ್ ಒಡೆತನದ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ ಕೇವಲ ಒಂದು ಉದಾಹರಣೆಯಷ್ಟೇ ಆಗಿದೆ. ಇಂದು(ಸೆ. 3) ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ 03/09/2019 ರಲ್ಲಿ ಅದಾನಿ ಗ್ರೀನ್ ಎನರ್ಜಿ ಷೇರು ಕನಿಷ್ಟ ಬೆಲೆ 43.50 ರೂಪಾಯಿಗೆ ಕುಸಿದಿತ್ತು. ಆದರೆ ಅದೇ ಒಂದು ವರ್ಷದ ನಂತರ ಕಂಪನಿಯ ಷೇರು ಹತ್ತು ಪಟ್ಟು ಹೆಚ್ಚು ಮೌಲ್ಯ ಹೊಂದಿದೆ.

The Value Of This Share Has Increased 10 Times In One Year: Know more

ಬಿಎಸ್‌ಎಸ್ ಸೂಚ್ಯಂಕ ಸೆನ್ಸೆಕ್ಸ್‌ನಲ್ಲಿ ಅದಾನಿ ಗ್ರೀನ್ ಎನರ್ಜಿ ಷೇರಿನ ಮೌಲ್ಯ ಇಂದು (03/09/2020) ಬರೋಬ್ಬರಿ 573.30 ರೂಪಾಯಿನಷ್ಟಿದೆ. ಅಂದರೆ ಸ್ವಲ್ಪ ಊಹಿಸಿ ಇದರ ಮೇಲಿನ ಹೂಡಿಕೆದಾರರ ಸಂಪತ್ತು ಅದೆಷ್ಟು ಹೆಚ್ಚಾಗಿದೆ ಎಂದು.

ಇತ್ತೀಚೆಗಷ್ಟೇ ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಎಂಐಎಎಲ್) ಶೇ 74ರಷ್ಟು ಶೇರುಗಳನ್ನು ಪಡೆದುಕೊಂಡಿದೆ. ವ್ಯವಹಾರದ ಅಡಿಯಲ್ಲಿ ಅದಾನಿ ಸಮೂಹವು ಜಿವಿಕೆ ಸಮೂಹದ ಶೇ 50.5ರಷ್ಟು ಶೇರುಗಳನ್ನು ಪಡೆದುಕೊಳ್ಳಲಿದೆ. ಈ ಒಪ್ಪಂದದ ಬಳಿಕ ಅದಾನಿ ಗ್ರೀನ್ ಎನರ್ಜಿ ಷೇರಿನ ಮೌಲ್ಯವು ಮತ್ತಷ್ಟು ಹೆಚ್ಚಾಗಿದೆ.

English summary
Adani Green Energy ltd share value Has Increased 10 Times In One Year: Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X