ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರನೇ ವೇತನ ಆಯೋಗದ ಅವಧಿ ಅಂತ್ಯ: ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಯಾವಾಗ?

|
Google Oneindia Kannada News

ಬೆಂಗಳೂರು, ಆಗಸ್ಟ್ 12: ರಾಜ್ಯ ಸರ್ಕಾರಿ ನೌಕರರ ಆರನೇ ವೇತನ ಆಯೋಗದ ಅವಧಿ ಜುಲೈ 31ಕ್ಕೆ ಕೊನೆಗೊಂಡಿದೆ. ಏಳನೇ ವೇತನ ಆಯೋಗದ ರಚನೆಯ ಮುಖ್ಯಸ್ಥರು, ಸರ್ಕಾರಿ ನೌಕರರು ತಮ್ಮ ವೇತನದಲ್ಲಿ 20 ರಿಂದ 30 ರಷ್ಟು ಹೆಚ್ಚಳಕ್ಕೆ ಒತ್ತಾಯ ಮಾಡಲಾಗುತ್ತಿದೆ. 2023ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಇದು ದೊಡ್ಡ ಸವಾಲಾಗಿದೆ. ಸರ್ಕಾರಿ ನೌಕರರ ಬೇಡಿಕೆಗೆ ಒಪ್ಪಿಕೊಂಡರೆ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ 12,000 ಕೋಟಿ ರುಪಾಯಿ ಹೊರೆಯಾಗಲಿದೆ.

ಚುನಾವಣೆ ಸಮೀಪವಿರುವಾಗ ನೌಕರರ ಬೇಡಿಕೆಯನ್ನು ನಿರ್ಲಕ್ಷಿಸಲು ಸರ್ಕಾರಕ್ಕೆ ಅಸಾಧ್ಯವಾಗಿದೆ. ಆದರೆ ಇಷ್ಟೊಂದು ಹೊರೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ನಿಭಾಯಿಸುವುದು ಸರ್ಕಾರಕ್ಕೆ ಕಷ್ಟವಾಗಿದೆ. ನೌಕರರ ಅನುಗುಣವಾಗಿ ವೇತನವನ್ನು ಪರಿಷ್ಕರಣೆ ಮಾಡಿದರೆ, ರಾಜ್ಯ ಸರ್ಕಾರಿ ನೌಕರರಿಗೆ ಕೇಡರ್‌ಗೆ ಅನುಗುಣವಾಗಿ 10,000 ರುಪಾಯಿಗಳಿಂದ 50,000 ರುಪಾಯಿ ವರೆಗೆ ಹೆಚ್ಚಳವಾಗಲಿದೆ.

7th Pay Commission: ಸರ್ಕಾರಿ ನೌಕರರ ಕಾಯುವಿಕೆ ಶೀಘ್ರದಲ್ಲೇ ಅಂತ್ಯ!7th Pay Commission: ಸರ್ಕಾರಿ ನೌಕರರ ಕಾಯುವಿಕೆ ಶೀಘ್ರದಲ್ಲೇ ಅಂತ್ಯ!

2017 ರಲ್ಲಿ, ಆಗಿನ ರಾಜ್ಯ ಸರ್ಕಾರವು ಮಾಜಿ ಐಎಎಸ್ ಅಧಿಕಾರಿ ಎಂ.ಆರ್ ಶ್ರೀನಿವಾಸ ಮೂರ್ತಿ ಅವರನ್ನು ಆರನೇ ವೇತನ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಮೊದಲ ವೇತನ ಆಯೋಗವನ್ನು 1966 ರಲ್ಲಿ ರಚಿಸಲಾಯಿತು.

 ಇತರೆ ರಾಜ್ಯಗಳ ನೌಕರರಿಗಿಂತ ಕಡಿಮೆ ವೇತನ

ಇತರೆ ರಾಜ್ಯಗಳ ನೌಕರರಿಗಿಂತ ಕಡಿಮೆ ವೇತನ

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಮಾತನಾಡಿ, "2017 ರಲ್ಲಿ, ಆರನೇ ವೇತನ ಆಯೋಗವು ಮೂಲ ವೇತನದಲ್ಲಿ 29 ಪರ್ಸೆಂಟ್ ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು. ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಬೇಕು" ಎಂದರು.

ಕೇಂದ್ರ ಸರ್ಕಾರ ಮತ್ತು ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಇತರ ರಾಜ್ಯ ಸರ್ಕಾರಿ ನೌಕರರಿಗೆ ಹೋಲಿಸಿದರೆ ರಾಜ್ಯ ಸರ್ಕಾರಿ ನೌಕರರ ವೇತನ ಪ್ರಮಾಣ ತುಂಬಾ ಕಡಿಮೆಯಾಗಿದೆ ಎಂದು ಷಡಕ್ಷರಿ ಹೇಳಿದರು.

 ಡಿಎ ಹೆಚ್ಚಳ ನಿರೀಕ್ಷೆ ಸುಳ್ಳಲ್ಲ, ಹೊಸ ವೇತನ ಆಯೋಗ ಸದ್ಯಕ್ಕಿಲ್ಲ ಡಿಎ ಹೆಚ್ಚಳ ನಿರೀಕ್ಷೆ ಸುಳ್ಳಲ್ಲ, ಹೊಸ ವೇತನ ಆಯೋಗ ಸದ್ಯಕ್ಕಿಲ್ಲ

 ಸರ್ಕಾರಿ ನೌಕರರ ಮೇಲೆ ಕೆಲಸದ ಹೊರೆ

ಸರ್ಕಾರಿ ನೌಕರರ ಮೇಲೆ ಕೆಲಸದ ಹೊರೆ

"ನಾವು ಮೂಲ ವೇತನ ಮತ್ತು ತುಟ್ಟಿಭತ್ಯೆಯಲ್ಲಿ ಶೇಕಡಾ 50 ರಷ್ಟು ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದೇವೆ. ಸುಮಾರು 2.6 ಲಕ್ಷ ಹುದ್ದೆಗಳು ಖಾಲಿಯಿದ್ದರೂ, ಅಭಿವೃದ್ಧಿಯ ವಿಷಯದಲ್ಲಿ ನಾವು ಅಗ್ರ ಐದು ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದೇವೆ." ಎಂದರು.

"ಚುನಾವಣಾ ವರ್ಷದಲ್ಲಿ ಮತದಾರರ ಗುರುತಿನ ಚೀಟಿ ವಿತರಣೆ, ಮತಗಟ್ಟೆಗಳಲ್ಲಿ ವ್ಯವಸ್ಥೆ ಕಲ್ಪಿಸುವುದು ಮತ್ತು ನೌಕರರಿಂದ ಸರ್ಕಾರ ಘೋಷಿತ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಮುಂತಾದ ಕೆಲಸಗಳು ನಡೆಯುತ್ತವೆ. ಸಿಬ್ಬಂದಿ ಕೊರತೆಯಿಂದ ನಮ್ಮ ಮೇಲೆ ಕೆಲಸದ ಹೊರೆ ಹೆಚ್ಚಾಗುತ್ತಿದೆ." ಎಂದರು.

 ವೇತನ ಪರಿಷ್ಕರಣೆಗೆ ಸರ್ಕಾರದ ಮೇಲೆ ಒತ್ತಡ

ವೇತನ ಪರಿಷ್ಕರಣೆಗೆ ಸರ್ಕಾರದ ಮೇಲೆ ಒತ್ತಡ

ವೇತನ ಪರಿಷ್ಕರಣೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡವಿದೆ ಎಂದು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ತಿಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಹೆಚ್ಚುವರಿ ಹಣ ಮೀಸಲಿಟ್ಟಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಮೂಲಗಳು ತಿಳಿಸಿವೆ. ಮತ್ತೊಂದೆಡೆ, ವಾಣಿಜ್ಯ ತೆರಿಗೆ ಮತ್ತು ಅಬಕಾರಿ ಇಲಾಖೆಗಳ ಅಡಿಯಲ್ಲಿ ಹಣ ಸಂಗ್ರಹಣೆಯಲ್ಲಿ ಹೆಚ್ಚಳವಾಗಿದೆ.

ಹೊಸ ಆಯೋಗದ ರಚನೆ ಮತ್ತು ಪ್ರಾಥಮಿಕ ವರದಿಯ ಸಲ್ಲಿಕೆಗೆ ಮೂರರಿಂದ ನಾಲ್ಕು ತಿಂಗಳು ಸಮಯ ಬೇಕಾಗುತ್ತದೆ. ಒಂದು ಬಾರಿ ಘೋಷಣೆಯಾದ ನಂತರ, ಸರ್ಕಾರವು ಬಜೆಟ್‌ನಲ್ಲಿ ಹಣವನ್ನು ಮೀಸಲಿಡುತ್ತದೆ ಮತ್ತು ಬಾಕಿ ಪಾವತಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ

 ರಾಜ್ಯ ಸರ್ಕಾರದ 72 ಇಲಾಖೆಗಳು

ರಾಜ್ಯ ಸರ್ಕಾರದ 72 ಇಲಾಖೆಗಳು

ರಾಜ್ಯ ಸರ್ಕಾರದಲ್ಲಿ ಕೃಷಿ, ಗೃಹ, ನಗರಾಭಿವೃದ್ಧಿ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ವಿದ್ಯುತ್, ಜಲಸಂಪನ್ಮೂಲ, ಅಬಕಾರಿ, ವೈದ್ಯಕೀಯ ಶಿಕ್ಷಣ ಮತ್ತು ಇತರ ಇಲಾಖೆಗಳನ್ನು ಒಳಗೊಂಡ 72 ಇಲಾಖೆಗಳಿವೆ.

ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ರಾಜ್ಯದ ಡಿ ಗ್ರೂಪ್ ಸರ್ಕಾರಿ ನೌಕರರು 8,000 ದಿಂದ 10,000 ಸಾವಿರ ರುಪಾಯಿ ಕಡಿಮೆ ವೇತನ ಪಡೆಯುತ್ತಿದ್ದಾರೆ. ಅದೇ ರೀತಿ ಸಿ ಗ್ರೂಪ್ ನೌಕರರು 15,000 ದಿಂದ 22,000 ಸಾವಿರ ರುಪಾಯಿ, ಬಿ ಗ್ರೂಪ್ ನೌಕರರು 25,000 ದಿಂದ 35,000 ಸಾವಿರ ರುಪಾಯಿ, ಎ ಗ್ರೂಪ್ ನೌಕರರು 35,000 ದಿಂದ 50, 000 ಸಾವಿರ ರುಪಾಯಿ ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

English summary
The Sixth Pay Commission’s term ended on July 31. government employees are demanding 20 to 30 per cent hike in their salaries. President of the State Government Employees Association, C S Shadakshari said that, We are demanding a 50 per cent hike in the basic salary and DA. Despite having close to 2.6 lakh posts vacant, we are among top five states in terms of development he Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X