ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ರೇಸಿಂಗ್ ದಂತಕತೆ ಪ್ಯಾಡಿ BMW MINIಕಾರು!

|
Google Oneindia Kannada News

ನವದೆಹಲಿ, ಜನವರಿ 8: ರೇಸಿಂಗ್ ದಂತಕತೆ ಪ್ಯಾಟ್ರಿಕ್ ''ಪ್ಯಾಡಿ'' ಹಾಪ್‍ಕಿರ್ಕ್ ಮತ್ತು ಮೊಂಟೆ ಕಾರ್ಲೊ Rallyಯಲ್ಲಿ 1964 ರಲ್ಲಿ ಕ್ಲಾಸಿಕ್ No. 37 Mini ಕೂಪರ್ S ಮೂಲಕ ಗಳಿಸಿದ ಅದ್ಭುತ ಗೆಲುವಿನ ಗೌರವಾರ್ಥವಾಗಿ ಸೀಮಿತ 15 ಯೂನಿಟ್ಸ್, MINIಆನ್‍ಲೈನ್ ಶಾಪ್‍ನಲ್ಲಿ ಲಭ್ಯವಾಗಿದೆ.

1964 ರಲ್ಲಿ ಎಲ್ಲ ಅಡೆತಡೆಗಳನ್ನೂ ಮೀರಿ ಕ್ಲಾಸಿಕ್ MINI ಕೂಪರ್ S ಮೊದಲ ಮೂರು ಗೆಲುವುಗಳನ್ನು ಪ್ರಖ್ಯಾತ ಮೊಂಟೆ ಕಾರ್ಲೊ Rallyಯಲ್ಲಿ ಪಡೆಯಿತು. ಅಂದು ಚಾಲನೆ ಮಾಡುತ್ತಿದ್ದವರು 30-ವರ್ಷ ವಯಸ್ಸಿನ ನಾದ್ರನ್ ಐರಿಶ್ ಡ್ರೈವರ್ ಪ್ಯಾಟ್ರಿಕ್ ''ಪ್ಯಾಡಿ'' ಹಾಪ್‍ಕಿರ್ಕ್ .

BMW ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ವಿಕ್ರಮ್ ಪಾವಾಹ್, "MINI ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್ ಚಾಲೆಂಜರ್ ಸ್ಫೂರ್ತಿ ಮತ್ತು ರೇಸಿಂಗ್ ಜೀನ್ಸ್ ಪ್ರತಿಫಲನವಾಗಿದೆ. ಇದು ಅತ್ಯುತ್ತಮ MINI ಚಾಲೆಂಜರ್ ಕ್ಷಣ- ಕ್ಲಾಸಿಕ್ MINI ಕೂಪರ್ S ನಲ್ಲಿ ಪ್ಯಾಡಿ ಹಾಪ್‍ಕಿರ್ಕ್‍ನ ಮೊದಲ ಮೊಂಟೆ ಕಾರ್ಲೊ ವಿಜಯದ ಸಂಭ್ರಮಾಚರಣೆಯಾಗಿದೆ. ಮೊಂಟೆ ಕಾರ್ಲೊ ರ್ಯಾಲಿಯ ವಿಜಯದ ರೇಖೆಯು ವಿಶ್ವದಾದ್ಯಂತ ಈ ದಿನದವರೆಗೂ MINi ಅಭಿಮಾನಿಗಳಿಗೆ ಸ್ಫೂರ್ತಿ ತುಂಬುವುದನ್ನು ಮುಂದುವರಿಸಿದೆ'' ಎಂದರು. MINI ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್ ಎಕ್ಸ್-ಶೋರೂಂ ಬೆಲೆ INR 41,70,000*.ಗಳಿಗೆ ಲಭ್ಯ.

MINI ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್

MINI ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್

ಈ ಲಿಮಿಟೆಡ್ ಎಡಿಷನ್ ಚಿಲ್ಲಿ ರೆಡ್ ಹೊರಾಂಗಣ ಬಣ್ಣ ಹೊಂದಿದ್ದು ಆಸ್ಪನ್ ವೈಟ್ ರೂಫ್, ಬ್ಲಾಕ್ ಮಿರರ್ ಕ್ಯಾಪ್ಸ್, 16'' ಲೈಟ್ ಅಲಾಯ್ ವ್ಹೀಲ್ಸ್ ವಿಕ್ಟರಿ ಸ್ಪೋಕ್ ಇನ್ ಬ್ಲಾಕ್ ಮತ್ತು ಪಿಯಾನೊ ಬ್ಲಾಕ್‍ನಲ್ಲಿ ಎಕ್ಸ್‍ಟೀರಿಯರ್ ಎಲಿಮೆಂಟ್ಸ್ (ಬಾನೆಟ್ ಸ್ಕೂಪ್, ಡೋರ್ ಹ್ಯಾಂಡಲ್ಸ್, ಫ್ಯೂಯೆಲ್ ಫಿಲ್ಲರ್ ಕ್ಯಾಪ್, ವೇಸ್ಟ್ ಲೈನ್ ಫಿನಿಷರ್, ಮಿನಿ ಎಂಬ್ಲಮ್ ಫ್ರಂಟ್ ಅಂಡ್ ರಿಯರ್, ಕಿಡ್ನಿ ಗ್ರಿಲ್ ಸ್ಟ್ರಟ್).

ಬಿಳಿಬಣ್ಣದಲ್ಲಿ ಎರಡೂ ಬದಿಯಲ್ಲಿ ಐಕಾನಿಕ್ 37 ಸ್ಟಿಕ್ಕರ್ ಮತ್ತು ಸೈಡ್ ಸ್ಕಟಲ್ಸ್ ಅಲ್ಲದೆ ಕೀಕ್ಯಾಪ್‍ನಲ್ಲಿ 37 ಬ್ಯಾಡ್ಜ್. ಇಲ್ಯುಮಿನೇಟೆಡ್ ಡೋರ್ ಸಿಲ್ಸ್, ಸಿ-ಪಿಲ್ಲರ್ಸ್ ಮತ್ತು ಕಾಕ್‍ಪಿಟ್ ಫೇಷಿಯಾದೊಂದಿಗೆ ಮ್ಯಾಟ್ ಬ್ಲಾಕ್‍ನ ಹಿಂಬದಿಯ ಸ್ಟಿಕರ್ ಮೇಲೆ ಪ್ಯಾಡಿ ಹಾಪ್‍ಕಿರ್ಕ್ ಸಹಿ ಗೋಚರಿಸುತ್ತದೆ.

ಪನೋರಮ ಗ್ಲಾಸ್ ರೂಫ್

ಪನೋರಮ ಗ್ಲಾಸ್ ರೂಫ್

ಪ್ಯಾಡಿ ಹಾಪ್‍ಕಿರ್ಕ್‍ನ ಸಹಿ ಬಾನೆಟ್ ಸ್ಟ್ರೈಪ್ ಮೇಲೆ ಮತ್ತು ನಂಬರ್ ಪ್ಲೇಟ್ ನ 33EJBಬ್ಯಾಡ್ಜಿಂಗ್ ಈ ಸ್ಪೆಷಲ್ ಎಡಿಷನ್‍ನ ವಿಶೇಷತೆಯನ್ನು ಹೆಚ್ಚಿಸುತ್ತದೆ. ಪನೋರಮ ಗ್ಲಾಸ್ ರೂಫ್, ಕಂಫರ್ಟ್ ಅಕ್ಸೆಸ್ ಸಿಸ್ಟಂ, ರಿಯರ್ ವ್ಯೂ ಕ್ಯಾಮರಾ ಮತ್ತು ಜಾನ್ ಕೂಪರ್ ವಕ್ರ್ಸ್ ಸ್ಪೋರ್ಟ್ ಲೆದರ್ ಸ್ಟೀರಿಂಗ್ ವ್ಹೀಲ್ ಕೂಡಾ ಒಳಗೊಂಡಿದೆ.

ಟಾಪ್ ಸ್ಪೀಡ್ 235 KM/hr ಮಿತಗೊಂಡಿದೆ

ಟಾಪ್ ಸ್ಪೀಡ್ 235 KM/hr ಮಿತಗೊಂಡಿದೆ

ಮಿನಿ ಕೂಪರ್ S 2 ಲೀಟರ್-4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಟ್ವಿನ್ ಟರ್ಬೊ ಟೆಕ್ನಾಲಜಿಯೊಂದಿಗೆ ಹೊಂದಿದೆ. ಇದು 192 hp/ 141 kWಗರಿಷ್ಠ ಔಟ್‍ಪುಟ್ ಮತ್ತು ಗರಿಷ್ಠ ಟಾರ್ಕ್ 280 Nm ನೀಡುತ್ತದೆ. ಕಾರು 6.7 ಸೆಕೆಂಡುಗಳಲ್ಲಿ 100 KM/hಡಿ ಜಿಗಿಯುತ್ತದೆ ಮತ್ತು ಟಾಪ್ ಸ್ಪೀಡ್ 235 KM/hr ಮಿತಗೊಂಡಿದೆ.

7-ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಟ್ರಾನ್ಸ್ ಮಿಷನ್ ಡಬಲ್ ಕ್ಲಚ್ ಮತ್ತು ಸ್ಟೀರಿಂಗ್ ವ್ಹೀಲ್‍ಪ್ಯಾಡಲ್ಸ್‍ನೊಂದಿಗೆ ಮೃದುವಾದ ಗೇರ್ ಶಿಫ್ಟ್‍ಗಳು, ಗರಿಷ್ಠಗೊಳಿಸಿದ ಅಕೌಸ್ಟಿಕ್ ಮತ್ತು ವೈಬ್ರೇಷನ್ ರೆಸ್ಪಾನ್ಸ್ ನೀಡುತ್ತದೆ ಮತ್ತು ಡ್ರೈವ್ ಸಿಸ್ಟಂನ ಅತ್ಯಾಧುನಿಕತೆಗೆ ಕೊಡುಗೆ ನೀಡುತ್ತದೆ.

ಇಂಧನ ಕ್ಷಮತೆಯ ಚಾಲನೆ ನೀಡುತ್ತದೆ

ಇಂಧನ ಕ್ಷಮತೆಯ ಚಾಲನೆ ನೀಡುತ್ತದೆ

ಡ್ರೈವಿಂಗ್ ಮೋಡ್ಸ್ ಆದ್ಯತೆಗೆ ಅನುಗುಣವಾಗಿ ರೈಡ್ ಕಂಫರ್ಟ್, ಸ್ಪೋರ್ಟಿನೆಸ್ ಅಥವಾ ದಕ್ಷತೆಗೆ ಗಮನ ನೀಡಿ ವೈಯಕ್ತಿಕಗೊಳಿಸಿದ ವಾಹನ್ ಸೆಟಪ್ ಸಾಧ್ಯವಾಗಿಸುತ್ತದೆ. ಸ್ಟಾಂಡರ್ಡ್ mid ಮೋಡ್‍ನೊಂದಿಗೆ, sport ಮೋಡ್ ಸಕ್ರಿಯ ಚಾಲನೆಯ ಸಂತೋಷಕ್ಕೆ ಸನ್ನದ್ಧವಾಗಿದ್ದರೆ ಗ್ರೀನ್ ಮೋಡ್ ಇಂಧನ ಕ್ಷಮತೆಯ ಚಾಲನೆ ನೀಡುತ್ತದೆ.

.ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು.ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ವಿಸ್ತಾರವಾದ ಇನ್‍ಟ್ಯೂಟಿವ್ ಸೇಫ್ಟಿ ಟೆಕ್ನಾಲಜೀಸ್ ಹೊಂದಿದೆ. ಸ್ಟಾಂಡರ್ಡ್ ಸೇಫ್ಟಿ ಸಾಧನಗಳಲ್ಲಿ ಫ್ರಂಟ್ ಪ್ಯಾಸೆಂಜರ್ ಏರ್‍ಬ್ಯಾಗ್ಸ್, ಬ್ರೇಕ್ ಅಸಿಸ್ಟ್, 3-ಪಾಯಿಂಟ್ ಸೀಟ್‍ಬೆಲ್ಟ್ಸ್, ಡೈನಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಕ್ರಾಶ್ ಸೆನ್ಸರ್, ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ ಮತ್ತು ರನ್-ಫ್ಲಾಟ್ ಇಂಡಿಕೇಟರ್ ಒಳಗೊಂಡಿದೆ.

English summary
A timeless tribute to the racing legend Patrick “Paddy” Hopkirk and his spectacular victory in the classic No. 37 Mini Cooper S at the Monte Carlo Rally in 1964.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X