ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೆಲ್ಬೋರ್ನ್ ನ ಜನಪ್ರಿಯ ಜಿನ್

|
Google Oneindia Kannada News

ಬೆಂಗಳೂರು, ಸೆ. 26: ಬೆಂಗಳೂರಿನ ಪಾನ ಪ್ರಿಯರು ಇನ್ನು ಮುಂದೆ ನಗರದಲ್ಲೇ ಕುಳಿತು ಆಸ್ಟ್ರೇಲಿಯಾದ ಮೆಲ್ಬೋರ್ನ್ ನ ಜಿನ್ ರುಚಿಯನ್ನು ಸವಿಯಬಹುದು. ಆಸ್ಟ್ರೇಲಿಯಾದ ವಿಕ್ಟೋರಿಯಾ ಸರ್ಕಾರದ ಬೆಂಬಲದೊಂದಿಗೆ ಮೆಲ್ಬೋರ್ನ್ ಜಿನ್ ಕಂಪನಿ ತನ್ನ ಸಿಗ್ನೇಚರ್ ಶ್ರೇಣಿಯ ಜಿನ್ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಈ ಸಂಬಂಧ ಸವನ್ನ್ಹಾ ಹೊಟೇಲ್ಸ್ ರೆಸಾರ್ಟ್ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಬೆಂಗಳೂರು ಮೂಲದ ಈ ಹೊಟೇಲ್ ಗ್ರೂಪ್ ಇನ್ನು ಮುಂದೆ ಮೆಲ್ಬೋರ್ನ್ ಜಿನ್ ಕಂಪನಿಯ ಉತ್ಪನ್ನಗಳನ್ನು ಭಾರತಾದ್ಯಂತ ವಿತರಣೆ ಮಾಡಲಿದೆ. ಚಾನ್ಸೆರಿ ಪೆವಿಲಿಯನ್ ನ ಜನಪ್ರಿಯ ಬಾರ್ ಆಗಿರುವ ಆಲ್ಚೆಮಿಯಲ್ಲಿ ಈ ಪೇಯಗಳನ್ನು ಬಿಡುಗಡೆ ಮಾಡಲಾಯಿತು.

ಭಾರತದ ಮಾರುಕಟ್ಟೆ ಪ್ರವೇಶಿಸಿದ ಮೆಲ್ಬೋರ್ನ್‍ನ ಗೋಟ್‌ ಮಿಲ್ಕ್‌ ಸೋಪ್ಭಾರತದ ಮಾರುಕಟ್ಟೆ ಪ್ರವೇಶಿಸಿದ ಮೆಲ್ಬೋರ್ನ್‍ನ ಗೋಟ್‌ ಮಿಲ್ಕ್‌ ಸೋಪ್

ಈ ಸಂದರ್ಭದಲ್ಲಿ ಮಾತನಾಡಿದ ವಿಕ್ಟೋರಿಯ ಸರ್ಕಾರದ ಸಣ್ಣ ವ್ಯವಹಾರಗಳ ಸಚಿವ ಅಡೆಂ ಸೊಮ್ಯುರೆಕ್ ಅವರು, "ಜಿನ್ ಮತ್ತು ಟಾನಿಕ್ ನ ಜನ್ಮಸ್ಥಳವಾದ ಮೆಲ್ಬೋರ್ನ್ ನಿಂದ ಜಿನ್ ಅನ್ನು ರಫ್ತು ಮಾಡಲು ಮೆಲ್ಬೋರ್ನ್ ಜಿನ್ ಕಂಪನಿಗೆ ವಿಕ್ಟೋರಿಯಾ ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲು ಸಂತಸವೆನಿಸುತ್ತಿದೆ" ಎಂದು ತಿಳಿಸಿದರು.

The Melbourne Gin Company launches a signature range of Gins in India

ಈ ಒಪ್ಪಂದದ ಬಗ್ಗೆ ಮಾತನಾಡಿದ ಮೆಲ್ಬೋರ್ನ್ ಜಿನ್ ಕಂಪನಿಯ ಸಂಸ್ಥಾಪಕ ಆ್ಯಂಡ್ರೂ ಮಾರ್ಕ್ಸ್ ಅವರು, "ಭಾರತದಲ್ಲಿ ಮೆಲ್ಬೋರ್ನ್ ಜಿನ್ ಕಂಪನಿಯ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಭಾರತೀಯ ಮಾರುಕಟ್ಟೆ ನಮಗೆ ಅತ್ಯಂತ ಪ್ರಮುಖವಾಗಿದೆ. ಕಳೆದ ಮೇ ತಿಂಗಳಲ್ಲಿ ನಡೆದ ಗ್ಲೋಬಲ್ ವಿಕ್ಟೋರಿಯಾ ಕ್ರಾಫ್ಟ್ ಬಿಯರ್ ಮತ್ತು ಕ್ರಾಫ್ಟ್ ಸ್ಪಿರಿಟ್ಸ್ ಕಾರ್ಯಕ್ರಮದಲ್ಲಿ ಪ್ರದೀಪ್ ಅವರನ್ನು ಭೇಟಿ ಮಾಡಿದ್ದರಿಂದ ಈ ಒಪ್ಪಂದ ಸಾಧ್ಯವಾಯಿತು" ಎಂದು ತಿಳಿಸಿದರು.

ಮೆಲ್ಬೋರ್ನ್ ಜಿನ್ ಕಂಪನಿಯ ಉತ್ಪನ್ನಗಳಾದ ಮೆಲ್ಬೋರ್ನ್ ಡ್ರೈ ಜಿನ್ ಮತ್ತು ಸಿಂಗಲ್ ಶಾಟ್ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಗಳಾಗಿವೆ. ಈ ಕಂಪನಿ ಆಸ್ಟ್ರೇಲಿಯಾದ ಆರ್ಟಿಸನಲ್ ಜಿನ್ ಉತ್ಪಾದನಾ ಸಂಸ್ಥೆಯಾಗಿದೆ.

ಸವನ್ನ್ಹಾ ಹೊಟೇಲ್ಸ್ ಅಂಡ್ ರೆಸಾರ್ಟ್ಸ್ ನಿರ್ದೇಶಕ ಪ್ರದೀಪ್ ಕುಪ್ಪರಾಜು ಅವರು ಮಾತನಾಡಿ, "ಹಲವಾರು ಸಹಯೋಗಗಳಿಗೆ ವಿಕ್ಟೋರಿಯಾ ಸರ್ಕಾರದ ವಾಣಿಜ್ಯ ಸಮಾವೇಶಗಳು ಅತ್ಯುತ್ತಮ ವೇದಿಕೆ ಮತ್ತು ಅವಕಾಶಗಳನ್ನು ಕಲ್ಪಿಸಿಕೊಡುತ್ತವೆ. ಈ ನಿಟ್ಟಿನಲ್ಲಿ ಆ್ಯಂಡ್ರ್ಯೂ ಅವರು ತಮ್ಮ ಜಿನ್ ಉತ್ಪನ್ನಗಳನ್ನು ಭಾರತಕ್ಕೆ ಪರಿಚಯಿಸಲು ನಮ್ಮನ್ನು ಆಯ್ಕೆ ಮಾಡಿಕೊಂಡಿರುವುದು ನಮಗೆ ಸಂತಸವೆನಿಸಿದೆ"ಎಂದರು.

English summary
Bengaluru bar hoppers and discerning drinkers will now be able to enjoy a taste of Melbourne thanks to the Australian State Government of Victoria’s support of local artisanal food, beer and spirit producers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X