ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು, ಉಡುಪಿ, ಮಂಗಳೂರಿನಲ್ಲಿ “Cars Collective”ಹೊಸ ಶೋರೂಂಗಳ ಪ್ರಾರಂಭ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಜುಬಿಲೆಂಟ್ ಮೋಟಾರ್‌ವರ್ಕ್ಸ್‌ ಗ್ರೂಪ್‍ನ ಬಳಸಿದ ಕಾರುಗಳ ರೀಟೇಲ್ ಶೋರೂಂ "ದಿ ಕಾರ್ಸ್ ಕಲೆಕ್ಟಿವ್" ಇಂದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 4 ಹೊಸ ಮಳಿಗೆಗಳನ್ನು ಪ್ರಾರಂಭಿಸಿದೆ. ಮುಂದಿನ ತಿಂಗಳುಗಳಲ್ಲಿ ಬಳಸಿದ ಕಾರುಗಳ ಬೇಡಿಕೆ ಶೇ.15ರಷ್ಟು ಹೆಚ್ಚು ನಿರೀಕ್ಷೆ ಹೊಂದಲಾಗಿದೆ.

ಹೊಸ ಶೋರೂಂಗಳನ್ನು ಬೆಂಗಳೂರಿನ ಐಟಿಪಿಎಲ್ ರಸ್ತೆ, ಯಲಹಂಕದ ಆರ್‍ಎಂಝಡ್ ಮಾಲ್, ಉಡುಪಿ ನಗರ ಮತ್ತು ಮುಂಬೈನ ಪೋವೈ ಪ್ಲಾಜಾóದಲ್ಲಿ ಪ್ರಾರಂಭಿಸಲಾಯಿತು. ಇದರಿಂದ ಕಂಪನಿಯು ಬೆಂಗಳೂರು ನಗರದಲ್ಲಿ ಒಟ್ಟು 8 ಶೋರೂಂ ಮುಂಬೈ ಸೆಂಟ್ರಲ್ ಸಬರ್ಬ್‍ನಲ್ಲಿ 2, ಮಂಗಳೂರು ಮತ್ತು ಉಡುಪಿಗಳಲ್ಲಿ ತಲಾ ಒಂದು ಶೋರೂಂ ಹೊಂದಿದಂತಾಗಿದೆ.

ಎಂಜಿ ಮೋಟಾರ್‌ನಿಂದ ಮಹದೇವಪುರದಲ್ಲಿ ಹೊಸ ಸರ್ವೀಸ್ ಸೌಲಭ್ಯ ಆರಂಭಎಂಜಿ ಮೋಟಾರ್‌ನಿಂದ ಮಹದೇವಪುರದಲ್ಲಿ ಹೊಸ ಸರ್ವೀಸ್ ಸೌಲಭ್ಯ ಆರಂಭ

ಈ ಶೋರೂಂಗಳ ವಿಸ್ತರಣೆ ಕುರಿತು ಜುಬಿಲೆಂಟ್ ಮೋಟಾರ್‌ವರ್ಕ್ಸ್‌ನ ಸಿಇಒ ಅಮಿತ್ ಜೈನ್, "ದಿ ಕಾರ್ಸ್ ಕಲೆಕ್ಟಿವ್ ಸೆಪ್ಟೆಂಬರ್ 2021ಕ್ಕೆ ಒಂದು ವರ್ಷ ಪೂರೈಸಿತು. ದಿ ಕಾರ್ಸ್ ಕಲೆಕ್ಟಿವ್' ಪ್ರಾರಂಭದಿಂದಲೂ ಬಳಸಿದ ಕಾರುಗಳ ರೀಟೇಲ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ನಾವು ಬಳಸಿದ ಕಾರುಗಳ ಕೊಳ್ಳುವ ಅನುಭವದಲ್ಲಿ 5 ದಿನಗಳ ಮನಿ ಬ್ಯಾಕ್ ಗ್ಯಾರೆಂಟೀ, ನಿಶ್ಚಿತ ಬೈಬ್ಯಾಕ್ ಇತ್ಯಾದಿ ಸೌಲಭ್ಯಗಳ ಮೂಲಕ ಹೊಸ ಮಾನದಂಡಗಳನ್ನು ಸೃಷ್ಟಿಸಿದ್ದೇವೆ. ಈ ಹೊಸ ಶೋರೂಂಗಳ ಮೂಲಕ ಮತ್ತಷ್ಟು ಹೆಚ್ಚಿನ ಗ್ರಾಹಕರನ್ನು ತಲುಪುವುದು ಸಾಧ್ಯವಾಗಿದೆ" ಎಂದರು.

The Cars Collective strengthen its market presence in India

"ಬಳಸಿದ ಕಾರುಗಳ ಮಾರಾಟವು ಹೊಸ ಕಾರುಗಳ ಮಾರಾಟಕ್ಕೆ ಹೋಲಿಸಿದರೆ ಆರೋಗ್ಯಕರ ಪ್ರಗತಿ ಕಾಣುತ್ತಿದೆ. ಏಕೆಂದರೆ ಜನರು ತಮ್ಮ ವೈಯಕ್ತಿಕ ಪ್ರಯಾಣದ ಅಗತ್ಯಕ್ಕೆ ಅನುಗುಣವಾಗಿ ಪ್ರಿ-ಓನ್ಡ್ ಕಾರುಗಳನ್ನು ಕೊಳ್ಳಲು ಬಯಸುತ್ತಾರೆ. ಈ ಕ್ಷೇತ್ರದಲ್ಲಿ ನಾವು 2024ರ ವೇಳೆಗೆ ಶೇ.10 ಮೀರಿ ಕಾರು ಮಾರಾಟ ವೃದ್ಧಿಸಲಿದೆ ಎಂದು ಅಂದಾಜಿಸಿದ್ದೇವೆ. ಕಾರ್ಸ್ ಕಲೆಕ್ಟಿವ್'ನಲ್ಲಿ ಹೊಸ ವಿಚಾರಣೆಗಳ ಪ್ರಮಾಣದಲ್ಲಿ ಶೇ.300 ಹೆಚ್ಚಳ ಕಂಡಿದ್ದೇವೆ. ಕಳೆದ 6 ತಿಂಗಳಲ್ಲಿ ನಮ್ಮ ಬಳಸಿದ ಕಾರುಗಳ ಮಾರಾಟ ಶೇ.200ರಷ್ಟು ವೃದ್ಧಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರವೃತ್ತಿ ಮತ್ತಷ್ಟು ವೃದ್ಧಿಸುತ್ತದೆ ಎಂದು ನಂಬಿದ್ದೇವೆ," ಎಂದು ಅಮಿತ್ ಜೈನ್ ಹೇಳಿದರು.

ತಮ್ಮ ಉದ್ಯಮ ಯೋಜನೆಗಳ ಕುರಿತು ಮಾತನಾಡಿದ ಜೈನ್, "ಗ್ರಾಹಕರಿಗೆ ಬಳಸಿದ ಕಾರುಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಸರಳಗೊಳಿಸುವ ಪೂರ್ಣ ಪ್ರಮಾಣದ ಮಾದರಿ ರೂಪಿಸುವ ಪ್ರಯತ್ನದಲ್ಲಿದ್ದೇವೆ. ಈ ಉಪಕ್ರಮವು ಗ್ರಾಹಕರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಅತ್ಯುತ್ತಮ ಮೌಲ್ಯ ಪಡೆದುಕೊಳ್ಳಲು ಅವಕಾಶ ನೀಡುತ್ತದೆ. ಬಳಸಿದ ಕಾರುಗಳನ್ನು ಕೊಳ್ಳಲು ಬಯಸುವ ಗ್ರಾಹಕರಿಗೆ ಅವರ ಮನೆಬಾಗಿಲಿಗೆ ಟೆಸ್ಟ್ ಡ್ರೈವ್, ಬುಕಿಂಗ್ ಮತ್ತು ಕಾರು ಡೆಲಿವರಿ ನೀಡುವುದಲ್ಲದೆ, ಮಾರಾಟ ಮಾಡಿದವರಿಗೆ ಸುಲಭವಾಗಿ ಆನ್‍ಲೈನ್‍ನಲ್ಲಿ ಪಾವತಿಸಲಿದ್ದೇವೆ. ಈ ಪೂರ್ಣ ಪ್ರಮಾಣದ ಮಾದರಿ ಮುಂದಿನ 30 ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ. ನಾವು ಮುಂದಿನ 2 ತಿಂಗಳಲ್ಲಿ ಕರ್ನಾಟಕದಲ್ಲಿ ಮತ್ತಷ್ಟು ಶೋರೂಂಗಳನ್ನು ತೆರೆಯಲಿದ್ದೇವೆ" ಎಂದರು.

English summary
The Cars Collective, a used car retail brand of Jubilant Motorworks group today announced that it has launches 4 more stores in the state of Karnataka and Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X