ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಜನರ ಮಾಸಿಕ ಸರಾಸರಿ ವೇತನ 32,800 ರೂಪಾಯಿ: ಸಮೀಕ್ಷೆ

|
Google Oneindia Kannada News

ನವ ದೆಹಲಿ, ಆಗಸ್ಟ್‌ 29: ಭಾರತದ ಜನರ ಸರಾಸರಿ ಮಾಸಿಕ ವೇತನ ಎಷ್ಟಿರಬಹುದು ಎಂಬುದನ್ನ ಸಮೀಕ್ಷೆಯೊಂದು ಅಂದಾಜಿಸಿದೆ. ಜಾಗತಿಕ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಜನರ ಸರಾಸರಿ ಮಾಸಿಕ ವೇತನ 32,800 ರೂಪಾಯಿಗಳು ($ 437).

ಈ ಸಮೀಕ್ಷೆಯನ್ನು ವಿಶ್ವದ 106 ದೇಶಗಳಲ್ಲಿ ಮಾಡಲಾಗಿದೆ. ಇದರಲ್ಲಿ ಭಾರತ 72 ನೇ ಸ್ಥಾನದಲ್ಲಿದೆ. ಸಮೀಕ್ಷೆಯಲ್ಲಿ ಸ್ವಿಟ್ಜರ್ಲೆಂಡ್ ಅಗ್ರಸ್ಥಾನದಲ್ಲಿದೆ. ಸ್ವಿಟ್ಜರ್ಲೆಂಡ್‌ನ ಜನರ ಸರಾಸರಿ ಮಾಸಿಕ ವೇತನ ಸುಮಾರು 4.49 ಲಕ್ಷ ರೂಪಾಯಿಗಳು ($ 5989). ಅದೇ ಸಮಯದಲ್ಲಿ, ಕ್ಯೂಬಾ, ಉಗಾಂಡಾ ಮತ್ತು ನೈಜೀರಿಯಾದಂತಹ ದೇಶಗಳು ಈ ಪಟ್ಟಿಯಲ್ಲಿ ತಳಭಾಗದಲ್ಲಿವೆ. ಈ ರಾಷ್ಟ್ರಗಳ ಸರಾಸರಿ ಮಾಸಿಕ ವೇತನ 2,700 ಮತ್ತು 13,800 ರೂ.

ಈಕೆಯ ವಯಸ್ಸು 22, ವಾರ್ಷಿಕ ಸಂಬಳ 42.5 ಲಕ್ಷ ರೂಪಾಯಿ: ಚಿಕ್ಕ ವಯಸ್ಸಿನಲ್ಲೇ ಸಿಕ್ಕಿದೆ ಯಶಸ್ಸುಈಕೆಯ ವಯಸ್ಸು 22, ವಾರ್ಷಿಕ ಸಂಬಳ 42.5 ಲಕ್ಷ ರೂಪಾಯಿ: ಚಿಕ್ಕ ವಯಸ್ಸಿನಲ್ಲೇ ಸಿಕ್ಕಿದೆ ಯಶಸ್ಸು

ಮೊದಲ ಮೂರು ಸ್ಥಾನದಲ್ಲಿ ಈ ರಾಷ್ಟ್ರಗಳು

ಮೊದಲ ಮೂರು ಸ್ಥಾನದಲ್ಲಿ ಈ ರಾಷ್ಟ್ರಗಳು

ರಿಯಾಯಿತಿ ಕೂಪನ್‌ಗಳನ್ನು ನಿರ್ವಹಿಸುವ ಜಾಗತಿಕ ಕಂಪನಿಯಾದ ಪಿಕೋಡಿ ಡಾಟ್ ಕಾಮ್ ನಡೆಸಿದ ಸಮೀಕ್ಷೆಯ ಪ್ರಕಾರ ಸ್ವಿಟ್ಜರ್ಲೆಂಡ್ ಸರಾಸರಿ ಮಾಸಿಕ, 5,989 ಡಾಲರ್ (4,49,000 ರೂ.) ಹೊಂದಿರುವ 106 ದೇಶಗಳಲ್ಲಿ ಅಗ್ರಸ್ಥಾನದಲ್ಲಿದೆ. ಕ್ಯೂಬಾ ಸರಾಸರಿ ಮಾಸಿಕ salary 36 (2,700 ರೂ.) ವೇತನದೊಂದಿಗೆ ಪಟ್ಟಿಯಲ್ಲಿ ಕೆಳಭಾಗದಲ್ಲಿದೆ. ಈ ಪಟ್ಟಿಯಲ್ಲಿ ಎರಡನೆಯದು ಲಕ್ಸೆಂಬರ್ಗ್, ಅಲ್ಲಿ ಜನರ ಮಾಸಿಕ ಆದಾಯ 3,00,900 ರೂ. ($ 4,014). ಇದರ ನಂತರ, ಮೂರನೇ ಸ್ಥಾನ ಅಮೆರಿಕ, ಅಲ್ಲಿ ಜನರ ಮಾಸಿಕ ಆದಾಯ 2,64,900 ರೂ. ($ 3,534).

ಟಾಪ್‌ 10 ರಾಷ್ಟ್ರಗಳು

ಟಾಪ್‌ 10 ರಾಷ್ಟ್ರಗಳು

ಮೊದಲ ಮೂರು ಸ್ಥಾನದಲ್ಲಿ ಸ್ವಿಟ್ಜರ್ಲೆಂಡ್, ಲಕ್ಸೆಂಬರ್ಗ್, ಅಮೆರಿಕಾವಿದ್ದರೆ ನಂತರದಲ್ಲಿ ಡೆನ್ಮಾರ್ಕ್ ($ 3515), ಸಿಂಗಾಪೂರ್ ($ 3414) ಆಸ್ಟ್ರೇಲಿಯಾ ($ 3333), ಕತಾರ್ ($ 3232), ನಾರ್ವೆ ($ 3174), ಹಾಂಕಾಂಗ್ ($ 3,024) ಮತ್ತು ಐಸ್‌ಲ್ಯಾಂಡ್ ($ 2844) ಜನರ ಮಾಸಿಕ ಆದಾಯ ಹೆಚ್ಚಿದೆ.

ಸಂಬಳ ಹೆಚ್ಚಿಸದ ಬಾಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ದರೋಡೆ ಡ್ರಾಮಾಸಂಬಳ ಹೆಚ್ಚಿಸದ ಬಾಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ದರೋಡೆ ಡ್ರಾಮಾ

ಏಷ್ಯಾದಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ

ಏಷ್ಯಾದಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ

ಪಿಕೋಡಿ.ಕಾಂನ ಸಮೀಕ್ಷೆಯಲ್ಲಿ ಏಷ್ಯಾದ ದೇಶಗಳನ್ನು ಸಹ ಸೇರಿಸಲಾಗಿದೆ. ಈ ಸಮೀಕ್ಷೆಯಲ್ಲಿ ಸೇರಿಸಲಾದ 16 ದೇಶಗಳಲ್ಲಿ ಭಾರತ 10 ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ದಕ್ಷಿಣ ಕೊರಿಯಾ (ರೂ. 1,72,900), ಚೀನಾ (ರೂ. 72,100), ಮಲೇಷ್ಯಾ (62,700 ರೂ.) ಮತ್ತು ಥೈಲ್ಯಾಂಡ್ (46,400 ರೂ.) ದೇಶಗಳು ಭಾರತಕ್ಕಿಂತ ಮುಂದಿವೆ. ವಿಯೆಟ್ನಾಂ (30,200 ರೂ.), ಫಿಲಿಪೈನ್ಸ್ (23,100 ರೂ.), ಇಂಡೋನೇಷ್ಯಾ (22,900 ರೂ.), ಮತ್ತು ಪಾಕಿಸ್ತಾನ (15,700 ರೂ.) ದೇಶಗಳಿಗಿಂತ ಭಾರತ ಮುಂದಿದೆ.

ಪಾಕಿಸ್ತಾನದಲ್ಲಿ ಭಾರತಕ್ಕಿಂತ ಅರ್ಧದಷ್ಟು ಸರಾಸರಿ ವೇತನ

ಪಾಕಿಸ್ತಾನದಲ್ಲಿ ಭಾರತಕ್ಕಿಂತ ಅರ್ಧದಷ್ಟು ಸರಾಸರಿ ವೇತನ

ಭಾರತದ ಸರಾಸರಿ ಮಾಸಿಕ 32,800 ರೂ. ಕಜಕಿಸ್ತಾನ್ (32,700 ರೂ.), ಬ್ರೆಜಿಲ್ (26,000 ರೂ) ಮತ್ತು ಈಜಿಪ್ಟ್ (16,400 ರೂ) ಪಟ್ಟಯಲ್ಲಿ ಕಾಣಸಿಗುತ್ತವೆ. ಕ್ಯೂಬಾ, ಉಗಾಂಡಾ ಮತ್ತು ನೈಜೀರಿಯಾದಂತಹ ದೇಶಗಳನ್ನು 2,700 ಮತ್ತು 13,800 ರೂ. ಸರಾಸರಿ ಮಾಸಿಕ ವೇತನದ ಪಟ್ಟಿಯನ್ನು ಕೆಳ ಭಾಗದಲ್ಲಿವೆ. ಇದರಲ್ಲಿ ಪಾಕಿಸ್ತಾನವು(15,700 ರೂ.) ಭಾರತಕ್ಕಿಂತ ಅರ್ಧ ಮಾಸಿಕ ಆದಾಯ ಹೊಂದಿರುವ ರಾಷ್ಟ್ರವಾಗಿದೆ.

English summary
According to a survey by international e-commerce company Picodi.com The average salary of Rs 32,800, or $ 437 per month, India ranks 72nd among 106 countries worldwide in this case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X