• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2015ರ 10 ಅತಿಕೆಟ್ಟ ಕೆಲಸಗಳು; ನಿಮ್ಮ ವೃತ್ತಿ ಯಾವುದು?

|

ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವವರು ಈ ವರದಿಯನ್ನು ಗಂಭೀರವಾಗಿ ಓದಲೇಬೇಕು. ಯಾರನ್ನೇ ಕೇಳಿದರೂ ಅವರು ಮಾಡುತ್ತಿರುವ ಕೆಲಸದಲ್ಲಿ ಒಂದೆಲ್ಲಾ ಒಂದು ಲೋಪ ಎತ್ತಿ ಹೇಳುತ್ತಾರೆ, ನಮ್ಮದೆ ಕಷ್ಟದ ಕೆಲಸ ಎಂದು ಸಮರ್ಥನೆಯನ್ನು ನೀಡುತ್ತಾರೆ. ಅದಕ್ಕೆ ಕಾರಣಗಳನ್ನು ಮುಂದಿಡುತ್ತಾರೆ. ಆದರೆ ಅಂತಿಮವಾಗಿ ನಮ್ಮದೇ ಶ್ರೇಷ್ಠ ಕೆಲಸ ಎಂದು ಹೇಳಲು ಮರೆಯಲ್ಲ.

2015ಕ್ಕೆ ಶುಭ ವಿದಾಯ ಹೇಳುವ ಕಾಲ ಹತ್ತಿರ ಬಂದಿದೆ. ನಿಮ್ಮ ಮನಸ್ಸು ಕಳೆದ ಒಂದು ವರ್ಷವನ್ನು ಹಿಂದಕ್ಕೆ ತಿರುಗಿ ಒಮ್ಮೆಯಾದರೂ ಲೆಕ್ಕ ಹಾಕಿಕೊಳ್ಳುತ್ತದೆ. ನೀವಿರುವ ವೃತ್ತಿಗೂ ಹೊಸ ವರ್ಷದ ಆಗಮನದ ನಿರೀಕ್ಷೆ. ಆದರೆ ನೀವು ಮಾಡುತ್ತಿರುವ ಕೆಲಸ ಯಾವ ಪಟ್ಟಿಯಲ್ಲಿದೆ?[ದೇಶಾದ್ಯಂತ ಸುದ್ದಿ ಮಾಡಿದ 2015ರ ಕರ್ನಾಟಕದ ವಿದ್ಯಮಾನಗಳು]

ಆದಾಯ, ಹಣ, ಪರಿಸರ, ಒತ್ತಡ ಮತ್ತು ದೈಹಿಕ ಶ್ರಮತೆ ಎಲ್ಲವನ್ನು ಆಧಾರವಾಗಿಟ್ಟುಕೊಂಡು 10ಅತಿ ಕೆಟ್ಟ ಕೆಲಸಗಳನ್ನು ಪಟ್ಟಿ ಮಾಡಲಾಗಿದೆ. ನಿಮ್ಮದು ಯಾವ ಲಿಸ್ಟ್ ನಲ್ಲಿದೆ ನೀವೇ ನೋಡಿಕೊಳ್ಳಿ. CareerCast ಮಾಡಿರುವ ಸಮೀಕ್ಷೆಯ ವರದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ನೀವು ಯಾವ ಕೆಲಸ ಮಾಡುತ್ತಿದ್ದೀರಿ, ನಿಮ್ಮ ಕೆಲಸ ಎಷ್ಟನೇ ಸ್ಥಾನದಲ್ಲಿದೆ ನೋಡಿಕೊಳ್ಳಿ....

1. ದಿನಪತ್ರಿಕೆ ವರದಿಗಾರ

1. ದಿನಪತ್ರಿಕೆ ವರದಿಗಾರ

2015 ರ ಅತಿ ಕೆಟ್ಟ ಕೆಲಸಗಳ ಪಟ್ಟಿಯಲ್ಲಿ ಮೊದಲು ಸಲ್ಲುವುದು ದಿನಪತ್ರಿಕೆ ಅಥವಾ ಸುದ್ದಿ ಮಾಧ್ಯಮದ ವರದಿಗಾರನ ಕೆಲಸಕ್ಕೆ. ಅತಿಯಾದ ಒತ್ತಡ ಮತ್ತು ಸಮಯದ ಒತ್ತಡದಿಂದ ಬಳಲುತ್ತಿರುವ ಏಕೈಕ ವ್ಯಕ್ತಿ ಎಂಬ ಶ್ರೇಯ ಈತನಿಗೆ ಸಲ್ಲುತ್ತದೆ.

2. ಮರ ಕಡಿಯುವವನು

2. ಮರ ಕಡಿಯುವವನು

ಮರ ಕಡಿಯುವವನು ಅತಿ ಕೆಟ್ಟ ಕೆಲಸದ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಳ್ಳುತ್ತಾನೆ. ಮರ ಕೆತ್ತುವುದು, ಕಡಿಯುವುದು ಯಾವುದೇ ಇರಬಹುದು.

3. ಸೇನಾ ಸಿಬ್ಬಂದಿ

3. ಸೇನಾ ಸಿಬ್ಬಂದಿ

ಇದು ಕಟುವಾದರೂ ಒಪ್ಪಿಕೊಳ್ಳಬೇಕಾದ ಸತ್ಯ. ದೇಶದ ಗಡಿ ಕಾಯುವವನಿಗೆ ಅತಿ ಕೆಟ್ಟ ಕೆಲಸದ ಸ್ಥಾನದಲ್ಲಿ ಮೂರನೇ ಸ್ಥಾನ. ಮಳೆ ಚಳಿ ಎನ್ನದೇ ಸದಾ ದೇಶದ ರಕ್ಷಣೆಗೆ ಗಡಿಯಲ್ಲಿ ನಿಂತು ಹೋರಾಡುವವರ ಸ್ಥಾನ ಅತಿ ಕೆಟ್ಟ ಕೆಲಸದ ಟಾಪ್ 10 ಪಟ್ಟಿಯಲ್ಲಿದೆ.

4. ಅಡುಗೆ ಮಾಡುವವ

4. ಅಡುಗೆ ಮಾಡುವವ

ನಮ್ಮೆಲ್ಲರ ಹೊಟ್ಟೆ ತುಂಬಿಸುವ ಅಡುಗೆಯವ ನಾಲ್ಕನೇ ಸ್ಥಾನ ಪಡೆದುಕೊಳ್ಳುತ್ತಾನೆ. ಬಿಸಿ ಬಿಸಿಯಾದ್ದನ್ನು ತಿನ್ನುವುದಷ್ಟೇ ನಮ್ಮ ಕೆಲಸ, ಅಡುಗೆಯವನ ಸ್ಥಾನ ಮಾತ್ರ ಮೇಲ್ದರ್ಜೆಗೆ ಏರಿಲ್ಲ.

5. ಬ್ರಾಡ್ ಕಾಸ್ಟರ್

5. ಬ್ರಾಡ್ ಕಾಸ್ಟರ್

ಈತ ಸಹ ಸುದ್ದಿ ಮಾಧ್ಯಮಕ್ಕೆ ಸಂಬಂಧಪಡುತ್ತಾನೆ. ಜನರಿಗೆ ರಸವತ್ತಾದ ಸುದ್ದಿ ನೀಡುವ ಮಾಧ್ಯಮ ತಂತ್ರಜ್ಞನ ಜೀವನದಲ್ಲಿ ಮಾತ್ರ ರಸವಿಲ್ಲದಂತಾಗಿದೆ.

6. ಫೋಟೋ ಜರ್ನಲಿಸ್ಟ್

6. ಫೋಟೋ ಜರ್ನಲಿಸ್ಟ್

ಕೆಲವೊಮ್ಮೆ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಎಕ್ಸ್ ಕ್ಲ್ಯೂಸಿವ್ ಎನ್ನುವಂಥ ಫೋಟೋ ತೆಗೆಯುವ ಛಾಯಾಚಿತ್ರ ಪತ್ರಕರ್ತನ ಪರಿಸ್ಥಿತಿಯೂ ಭಿನ್ನವಾಗಿಲ್ಲ.

7. ತಿದ್ದುಪಡಿ ಅಧಿಕಾರಿ

7. ತಿದ್ದುಪಡಿ ಅಧಿಕಾರಿ

ಪ್ರತಿಯೊಂದು ಇಲಾಖೆಯಲ್ಲೂ, ಸುದ್ದಿ ಮಾಧ್ಯಮದಲ್ಲೂ ತಿದ್ದುಪಡಿಗೆ ಅಂಥ ಒಂದಷ್ಟು ವ್ಯಕ್ತಿಗಳನ್ನು ನೇಮಿಸಿಕೊಳ್ಳಲಾಗುತ್ತದೆ.ಅವರು ತಿದ್ದುಪಡಿ ಮಾಡುತ್ತಿದ್ದಾರೆಯೇ ವಿನಃ ಅವರ ಜೀವನದಲ್ಲಿ ತಿದ್ದುಪಡಿಯಾಗಿಲ್ಲ.

8. ಟ್ಯಾಕ್ಸಿ ಚಾಲಕ

8. ಟ್ಯಾಕ್ಸಿ ಚಾಲಕ

ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಹೇಳಿದ ಸಮಯಕ್ಕೆ ಸರಿಯಾಗಿ ತಲುಪಿಸುವವ ಟ್ಯಾಕ್ಸಿ ಚಾಲಕನಿಗೆ ಕೆಟ್ಟ ಕೆಲಸದ ಪಟ್ಟಿಯಲ್ಲಿ ಎಂಟನೇ ಸ್ಥಾನ.

9. ಅಗ್ನಿ ಶಾಮಕ ದಳದ ಸಿಬ್ಬಂದಿ

9. ಅಗ್ನಿ ಶಾಮಕ ದಳದ ಸಿಬ್ಬಂದಿ

ಜೀವ ಒತ್ತೆ ಇಟ್ಟು ಜನರನ್ನು ಆಸ್ತಿಯನ್ನು ರಕ್ಷಣೆ ಮಾಡುವ ಅಗ್ನಿ ಶಾಮಕ ದಳದ ಸಿಬ್ಬಂದಿ ಕೆಲಸದ ಸಹ ಕೆಟ್ಟ ಕೆಲಸಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

10. ಅಂಚೆ ಅಣ್ಣ

10. ಅಂಚೆ ಅಣ್ಣ

ಸಂದೇಶವನ್ನು, ಅಮೂಲ್ಯ ಕಾಗದ ಪತ್ರಗಳನ್ನು ಸುರಕ್ಷಿತವಾಗಿ ತಲುಪಿಸುವ ಅಂಚೆ ಅಣ್ಣ ಅಥವಾ ಕೋರಿಯರ್ ನವರೂ ಕೆಟ್ಟ ಕೆಲಸದ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿದ್ದಾರೆ.

English summary
Which is the worst job in 2015? According to CareerCast, these are the worst jobs to have this year based on "income, outlook, environmental factors, stress and physical demands". Here is the list of 10 worst jobs of 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X