ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಸ್ಲಾಗೆ ಸ್ವಾಗತ, ಆದರೆ ಚೀನಾದಿಂದ ಆಮದಿಗೆ 'ನೋ' ಎಂದ ನಿತಿನ್ ಗಡ್ಕರಿ

|
Google Oneindia Kannada News

ನವದೆಹಲಿ, ಏಪ್ರಿಲ್ 26: ಯುಎಸ್ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ಟೆಸ್ಲಾ ಇಂಕ್‌ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ವಾಗತ ಎಂದಿದ್ದಾರೆ. ಆದರೆ ಚೀನಾದಿಂದ ಮಾತ್ರ ಆಮದು ಮಾಡಿಕೊಳ್ಳಬಾರದು ಎಂಬ ಷರತ್ತು ವಿಧಿಸಿದ್ದಾರೆ.

ಟೆಸ್ಲಾ ಇಂಕ್ ಭಾರತದಲ್ಲಿ ಮಳಿಗೆ ಸ್ಥಾಪಿಸಲು ಸ್ವಾಗತಾರ್ಹ, ಕಾರುಗಳನ್ನು ಮಾರಾಟ ಮಾಡಲು ಮತ್ತು ರಫ್ತು ಮಾಡಲು ಇಲ್ಲಿ ಅವಕಾಶ ನೀಡಲಾಗುವುದು. ಆದರೆ ಚೀನಾದಿಂದ ಕಾರುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ.

ಎಲಾನ್ ಮಸ್ಕ್‌ ಮನವಿ ತಿರಸ್ಕರಿಸಿದ ಭಾರತ ಸರ್ಕಾರ, ಕಾರಣವೇನು?ಎಲಾನ್ ಮಸ್ಕ್‌ ಮನವಿ ತಿರಸ್ಕರಿಸಿದ ಭಾರತ ಸರ್ಕಾರ, ಕಾರಣವೇನು?

"ಚೀನಾದಲ್ಲಿ ತಯಾರಿಸುವುದು ಮತ್ತು ಇಲ್ಲಿ ಮಾರಾಟ ಮಾಡುವುದು ಉತ್ತಮ ಪ್ರತಿಪಾದನೆಯಲ್ಲ," ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸರ್ಕಾರಿ ಸಮ್ಮೇಳನದಲ್ಲಿ ಮಾತನಾಡುತ್ತಾ ಹೇಳಿದ್ದಾರೆ. ಟೆಸ್ಲಾ ಮುಖ್ಯಸ್ಥ, ವಿಶ್ವದ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಟ್ಟಿಟ್ಟರ್ ಅನ್ನು ಖರೀದಿ ಮಾಡಿರುವ ನಡುವೆ ಭಾರತದ ಕೇಂದ್ರ ಸಚಿವರು ಈ ಹೇಳಿಕೆಯನ್ನು ನೀಡಿರುವುದು ಮಹತ್ವವನ್ನು ಪಡೆದಿದೆ.

Tesla Welcome, But Shouldnt Import From China To Sell Here Says Nitin Gadkari

ಎಲಾನ್ ಮಸ್ಕ್ ಈ ಹಿಂದೆ ಹೇಳಿರುವುದು ಏನು?

ಟೆಸ್ಲಾ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ಆಮದು ಮಾಡಿಕೊಳ್ಳಲು ಮತ್ತು ಮಾರಾಟ ಮಾಡಲು ಹತಾಶವಾಗಿದೆ. ಸುಂಕವನ್ನು ಕಡಿತಗೊಳಿಸಲು ಸುಮಾರು ಒಂದು ವರ್ಷಗಳ ಕಾಲ ನವದೆಹಲಿಯಲ್ಲಿ ಅಧಿಕಾರಿಗಳನ್ನು ಲಾಬಿ ಮಾಡಿದೆ ಎಂದು ಕಂಪನಿಯ ಬಿಲಿಯನೇರ್ ಮುಖ್ಯ ಕಾರ್ಯನಿರ್ವಾಹಕ ಎಲಾನ್ ಮಸ್ಕ್ ಈ ಹಿಂದೆ ತಿಳಿಸಿದ್ದಾರೆ. ಅಮೆರಿಕದಲ್ಲಿ ಟೆಸ್ಲಾದ ಮಾಡೆಲ್ 3 ಕಾರಿನ ಬೆಲೆ 30 ಲಕ್ಷ ರೂಪಾಯಿ ಭಾರತದಲ್ಲಿನ ಈ ಕಾರಿನ ಬೆಲೆ ತೆರಿಗೆ ಕಾರಣದಿಂದ ಸರಿಸುಮಾರು 60 ಲಕ್ಷ ರೂಪಾಯಿ ಆಗಲಿದೆ. ಕಾರಣ ಆಮದು ಸುಂಕ ಹಾಗೂ ಇತರ ತೆರಿಗೆ ಶೇಕಡಾ 100. ಹೀಗಾಗಿ ಕೈಗೆಟುಕುವ ದರದ ಟೆಸ್ಲಾ ಕಾರು ಭಾರತದಲ್ಲಿ ದುಬಾರಿಯಾಗಲಿದೆ. ಹೀಗಾಗಿ ತೆರಿಗೆ ಕಡಿತಗೊಳಿಸಬೇಕು ಎಂದು ಮನವಿ ಮಾಡಲಾಗಿತ್ತು.

 ಪಂಜಾಬ್‌ ಚುನಾವಣೆ: ಟೆಸ್ಲಾದ ಎಲಾನ್‌ ಮಸ್ಕ್‌ಗೆ ಸಿಧು ಆಹ್ವಾನ! ಪಂಜಾಬ್‌ ಚುನಾವಣೆ: ಟೆಸ್ಲಾದ ಎಲಾನ್‌ ಮಸ್ಕ್‌ಗೆ ಸಿಧು ಆಹ್ವಾನ!

ಎಲಾನ್ ಮಸ್ಕ್ ಮನವಿ ತಿರಸ್ಕರಿಸಿದ್ದ ಭಾರತ

ಎಲಾನ್ ಮಸ್ಕ್‌ ಮಾಡಿದ್ದ ಮನವಿಯನ್ನು ಭಾರತ ಸರ್ಕಾರ ತಿರಸ್ಕರಿಸಿದೆ. ಟೆಸ್ಲಾ ಹಾಗೂ ಕೇಂದ್ರ ಸರ್ಕಾರದ ನಡುವೆ ಕಳೆದ ಕೆಲ ವರ್ಷಗಳಿಂದಲೇ ತೆರಿಗೆ ನೀತಿ ಕುರಿತು ಗೊಂದಲವಿದೆ. ಆಮದು ಸುಂಕ ಹಾಗೂ ಇತರ ತೆರಿಗೆ ಹೆಚ್ಚಿರುವ ಕಾರಣ ಟೆಸ್ಲಾ ಕಾರು ಭಾರತದಲ್ಲಿ ಅತ್ಯಂತ ದುಬಾರಿ ಕಾರಾಗಿ ಮಾರ್ಪಡಲಿದೆ. ಟೆಸ್ಲಾ ಕಾರುಗಳ ಆಮದು, ಬಿಡಿ ಭಾಗಗಳ ಆಮದಿಗೆ ಸುಂಕ ಕಡಿತಗೊಳಿಸಲು ಟೆಸ್ಲಾ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕಾರಣ ಈಗಾಗಲೇ ಹಲವು ವಿದೇಶಿ ಕಂಪನಿಗಳು ಭಾರತದ ತೆರಿಗೆ ನೀತಿ ಮೂಲಕ ವ್ಯವಹಾರ ನಡೆಸುತ್ತಿದೆ. ಬಿಡಿ ಭಾಗಗಳ ಆಮದು ಮಾಡಿಕೊಳ್ಳಲು ಸದ್ಯ ಚಾಲ್ತಿಯಲ್ಲಿರುವ ನೀತಿಯನ್ನು ಒಪ್ಪಿಕೊಂಡಿದೆ. ಹೀಗಾಗಿ ಇತರ ಕಂಪನಿಗಳಿಗೆ ನೀಡದ ವಿನಾಯಿತಿ, ಕೇವಲ ಟೆಸ್ಲಾಗೆ ನೀಡಲು ಸಾಧ್ಯವಿಲ್ಲ ಎಂದು ವಿವೇಕ್ ಜೋಹ್ರಿ ಹೇಳಿದ್ದಾರೆ.

English summary
Tesla Welcome, But Shouldn't Import From China To Sell Here Says Nitin Gadkari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X