ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟ್‌ಕಾಯಿನ್‌ಗೆ ಮುಗಿದ ಬಿದ್ದ ಕಂಪನಿಗಳ ಷೇರು ಮೌಲ್ಯ ಮುಗುಚಿ ಬಿತ್ತು!

|
Google Oneindia Kannada News

ಬೆಂಗಳೂರು, ಮಾರ್ಚ್ 08: ಜಾಗತಿಕ ಮಟ್ಟದಲ್ಲಿ ಬಿಟ್‌ಕಾಯಿನ್ ತನ್ನ ಪ್ರಭಾವ ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದೆ. ಬೃಹತ್ ಕಂಪನಿಗಳು ಕೂಡ ತಮ್ಮ ಸಂಪತ್ತನ್ನು ಬಿಟ್‌ಕಾಯಿನ್ ರೂಪದಲ್ಲಿ ಸಂಗ್ರಹಿಸಲು ಮುಂದಾಗಿವೆ. ವಿಪರ್ಯಾಸವೆಂದರೆ ಬಿಟ್‌ಕಾಯಿನ್ ಸಂಗ್ರಹ ಮಾಡಿದ ಕಂಪನಿಗಳ ಷೇರು ಮೌಲ್ಯ ಪಾತಾಳಕ್ಕೆ ಕುಸಿದು ಬಿದ್ದಿದೆ. ಬಿಟ್ ಕಾಯಿನ್ ಖರೀದಿ ಮಾಡುತ್ತಿರುವ ಕಂಪನಿ ಷೇರುದಾರರು ಕಂಪನಿಗಳ ನಡೆ ಟೀಕಿಸಿದ್ದು, ಜಾಗತಿಕ ಮಟ್ಟದಲ್ಲಿ ಚರ್ಚೆಗೆ ನಾಂದಿಯಾಡಿದೆ.

ಸ್ಪೇಸ್ ಎಕ್ಸ್ ಮತ್ತು ಟೆಸ್ಲಾ ಕಂಪನಿ ದಿಗ್ಗಜ ಇಲಾನ್ ಮಸ್ಕ್ ಬಿಟ್‌ಕಾಯಿನ್ ಬಗ್ಗೆ ಒಂದೇ ಒಂದು ಹೇಳಿಕೆ ನೀಡಿದ್ದು ಅಷ್ಟೇ. ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆ ಟೆಸ್ಲಾ ಕಂಪನಿಯ ಷೇರು ಮೌಲ್ಯ ಶೇ. 30 ರಷ್ಟು ಕುಸಿದಿದೆ. ಕಂಪನಿ ಖಾತೆಯಲ್ಲಿ 1.5 ಬಿಲಿಯನ್ ಬಿಟ್‌ಕಾಯಿನ್ ಇರುವುದಾಗಿ ಕಂಪನಿ ದಿಗ್ಗಜ ಇಲಾನ್ ಮಸ್ಕ್ ಫೆಬ್ರವರಿ ಮೊದಲ ವಾರದಲ್ಲಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಟೆಸ್ಲಾ ಕಂಪನಿಯ ಷೇರು ಮೌಲ್ಯ ಪಾತಾಳಕ್ಕೆ ಕುಸಿದು ಬಿತ್ತು. ಟೆಸ್ಲಾ ಕಂಪನಿ ತನ್ನ ಖಾತೆಯಲ್ಲಿ ಹೊಂದಿರುವ ಬಿಟ್‌ಕಾಯಿನ್ ಮಾರಾಟ ಮಾಡಲಿಕ್ಕೆ ಹೂಡಿಕೆದಾರರ ಸಂಪೂರ್ಣ ಬೆಂಬಲವಿದೆ ಎಂಬ ಸಂಗತಿ ಹೊರ ಬಿದ್ದಿದೆ.

ಮತ್ತೆ 50 ಸಾವಿರ ಡಾಲರ್ ಮೌಲ್ಯಕ್ಕೇರಿದ ಬಿಟ್ ಕಾಯಿನ್ಮತ್ತೆ 50 ಸಾವಿರ ಡಾಲರ್ ಮೌಲ್ಯಕ್ಕೇರಿದ ಬಿಟ್ ಕಾಯಿನ್

ವಿಪರ್ಯಾಸವೆಂದರೆ ಟೆಸ್ಲಾ ಹಾದಿ ತುಳಿದ ಮೈಕ್ರೋಸ್ಟ್ರಾಟಜಿ ಕಂಪನಿ ಹಲವು ಬಿಟ್‌ಕಾಯಿನ್ ಟ್ರೆಜರಿ ಖರೀದಿಸಿದ ಘೋಷಣೆ ಬಳಿಕ ಕಳೆದ 30 ದಿನಗಳಿಂದ ಆ ಕಂಪನಿಯ ಷೇರು ಮೌಲ್ಯ ಕೂಡ ಗಣನೀಯವಾಗಿ ಕುಸಿದಿದೆ.

Tesla Stock Price Tanks 30% Since Buying Bitcoin

ಟೆಸ್ಲಾ ಕಂಪನಿ 1.5 ಬಿಲಿಯನ್ ಬಿಟ್‌ಕಾಯಿನ್ ತನ್ನ ಬ್ಯಾಲೆನ್ಸ್ ಶೀಟ್ ನಲ್ಲಿದೆ ಎಂದು ಹೇಳಿತ್ತು. ಇದಾದ ದಿನವೇ ಟೆಸ್ಲಾ ಷೇರು ಮೌಲ್ಯ ಕುಸಿದು ಬಿತ್ತು. ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಕಂಪನಿಯ ನಿರ್ಧಾರದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ವಕೀಲರು ಕೂಡ ಟೆಸ್ಲಾ ನಿರ್ಧಾರ ತಪ್ಪು ಎಂದು ವಿಶ್ಲೇಷಣೆ ಮಾಡಿದ್ದಾರೆ. ಬಿಟ್‌ಕಾಯಿನ್ ಮೌಲ್ಯ ಹೆಚ್ಚಾದರೂ ಕಂಪನಿ ಅದರ ಲಾಭ ಪಡೆಯಲಾಗಿಲ್ಲ ಎಂದು ಕೆಲವರು ಟೀಕೆ ಮಾಡಿದ್ದಾರೆ.

ಇನ್ನು ಬಿಟ್‌ಕಾಯಿನ್ ಬಗ್ಗೆ ಟೆಸ್ಲಾ ಕಂಪನಿ ಪ್ರಕಟಿಸಿದ ನಿರ್ಧಾರ ಜಾಗತಿಕವಾಗಿ ವೈರಲ್ ಆಗಿತ್ತು. 900 ಯುಎಸ್ ಡಾಲರ್ ಗಡಿ ತಲುಪಿದ್ದ ಟೆಸ್ಲಾ ಷೇರು ಮೌಲ್ಯ ಇಂದು 597 ಯುಎಸ್ ಡಾಲರ್ ಆಗಿದೆ. ಶೇ. 30.80 ರಷ್ಟು ಮೌಲ್ಯ ಕುಸಿದಿದೆ. ಈ ಬೆಳವಣಿಗೆ ನಂತರ ತೇಲ್ಸಾ ಕಂಪನಿ ಹೂಡಕೆದಾರರು ಬಿಟ್‌ಕಾಯಿನ್ ಮಾರಾಟ ಮಾಡುವಂತೆ ಇಲಾನ್ ಮಸ್ಕ್ ಗೆ ಮನವಿ ಮಾಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಟೆಸ್ಲಾ ತನ್ನಲ್ಲಿರುವ ಬಿಟ್‌ಕಾಯಿನ್ ಮಾರಾಟ ಮಾಡಲು ಮುಂದಾದರೆ, ಷೇರುದಾರರು ಪೂರ್ಣ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tesla Stock Price Tanks 30% Since Buying Bitcoin

ಟೆಸ್ಲಾ ಹಾದಿಯನ್ನೇ ತುಳಿದ ಮೈಕ್ರೋ ಸ್ಟ್ರಾಟಜಿ ಕಂಪನಿ ಬಿಟ್‌ಕಾಯಿನ್ ಖರೀದಿಯ ಪ್ರಕ್ರಿಯೆ ಮುಂದುವರೆದಿದೆ. ಮಾರ್ಚ್‌ , 05 ರಂದು 10 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಬಿಟ್‌ಕಾಯಿನ್ ಖರೀದಿ ಮಾಡಿದ್ದಾಗಿ ಹೇಳಿದೆ. ತನ್ನ ಬಳಿ 91064 ಬಿಟ್‌ಕಾಯಿನ್ ಕಂಪನಿ ಬ್ಯಾಲೆನ್ಸ್ ಶೀಟ್ ನಲ್ಲಿ ಇರುವುದಾಗಿ ಹೇಳಿಕೊಂಡಿದೆ. ಇದರ ಬೆನ್ನಲ್ಲೇ ಈ ಕಂಪನಿಯ ಷೇರು ಮೌಲ್ಯ ಶೇ. 51 ರಷ್ಟು ಇಳಿಕೆ ಕಂಡಿದೆ. ಅರ್ಧ ಸಂಪತ್ತು ಕರಗಿದೆ. 1272 ಯುಎಸ್ ಡಾಲರ್ ಮೌಲ್ಯವಿದ್ದ ಒಂದು ಷೇರಿನ ಬೆಲೆ ಇದೀಗ 620.24 ಕ್ಕೆ ಇಳಿದಿದೆ. ಬಿಟ್‌ಕಾಯಿನ್ ಸುತ್ತ ಈ ವಿಚಾರ ಭಾರಿ ಸಂಚಲನ ಉಂಟು ಮಾಡಿದೆ.

English summary
Tesla’s bitcoin-buy caused the price to soar, with bitcoin climbing to almost $60,000 by mid-February. Tesla stock falling even further—losing 30% since it revealed it had bought bitcoin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X