ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ಹೆಜ್ಜೆ ಇಡಲು ಯೋಜಿಸಿದೆ ಖ್ಯಾತ ಕಾರು ತಯಾರಕ ಟೆಸ್ಲಾ ಕಂಪನಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21: ಜಗತ್ತಿನ ಖ್ಯಾತ ಕಾರು ತಯಾರಕ ಕಂಪನಿ ಟೆಸ್ಲಾ, ಸಿಲಿಕಾನ್ ಸಿಟಿಗೆ ಬೆಂಗಳೂರಿಗೆ ಕಾಲಿಡಲು ಯೋಜಿಸಿದೆ. ಒಂದೊಮ್ಮೆ ಮಾತುಕತೆ ಯಶಸ್ವಿ ಆಗಿದ್ದೇ ಆದಲ್ಲಿ ಅಮೆರಿಕಾದ ಹೊರಗೆ ಅಂದರೆ ಭಾರತದಲ್ಲಿ ಟೆಸ್ಲಾದ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌&ಡಿ) ಕೇಂದ್ರ ಹೊಂದಿದ ಎರಡನೇ ದೇಶ ಎಂಬ ಕೀರ್ತಿ ಭಾರತಕ್ಕೆ ಸಿಗಲಿದೆ.

ಐಟಿ ಸಿಟಿಯಲ್ಲಿ ಆರ್‌&ಡಿ ಕೇಂದ್ರವನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಮುಂದಿನ ದಿನಗಳಲ್ಲಿ ಹೆಚ್ಚು ಕಂಡು ಬರುವುದರಿಂದ ಟೆಸ್ಲಾ ಭಾರತದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ತನ್ನ ಹೊಸ ನೆಲೆಯನ್ನು ಕಂಡುಕೊಳ್ಳುವ ಸಾಧ್ಯತೆ ಇದೆ.

ಕಿಯಾ ಸೊನೆಟ್ ಕಾಂಪ್ಯಾಕ್ಟ್‌ SUV ಬಿಡುಗಡೆ: ಬೆಲೆ 6.71 ಲಕ್ಷ ರೂ. ಪ್ರಾರಂಭಕಿಯಾ ಸೊನೆಟ್ ಕಾಂಪ್ಯಾಕ್ಟ್‌ SUV ಬಿಡುಗಡೆ: ಬೆಲೆ 6.71 ಲಕ್ಷ ರೂ. ಪ್ರಾರಂಭ

ಅನಾಮಧೇಯ ಅಧಿಕಾರಿಯನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಆರ್ & ಡಿ ಸೌಲಭ್ಯಕ್ಕಾಗಿ ಟೆಸ್ಲಾ ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. "ಮೊದಲ ಪ್ರಸ್ತಾಪವು ಆರ್ & ಡಿ ಕೇಂದ್ರಕ್ಕಾಗಿ ಮತ್ತು ನಾವು ಈಗಾಗಲೇ ಕನಿಷ್ಠ ಎರಡು ಸುತ್ತಿನ ಚರ್ಚೆಗಳನ್ನು ನಡೆಸಿದ್ದೇವೆ" ಎಂದು ಅಧಿಕಾರಿ ಹೇಳಿದ್ದಾರೆ.

Tesla Planning to Establish R&D Center In Bengaluru: Report

ಅಧಿಕೃತ ದೃಢೀಕರಣವು ರಾಜ್ಯ ಸರ್ಕಾರದಿಂದ ಅಥವಾ ಟೆಸ್ಲಾದಿಂದ ಬರಬೇಕಾಗಿದ್ದು, ಒಂದು ವೇಳೆ ಇದು ಸಾಧ್ಯವಾದಲ್ಲಿ ಭಾರತೀಯ ವಾಹನ ಉದ್ಯಮದಲ್ಲಿ ಸಂಪೂರ್ಣ ಸಂಚಲನವನ್ನು ಸೃಷ್ಟಿಸಲಿದೆ.

ಬೆಂಗಳೂರಿನಲ್ಲಿ ಈಗಾಗಲೇ ಜಗತ್ತಿನ ಖ್ಯಾತ ಕಾರು ಕಂಪನಿಗಳು ನೆಲೆಯೂರಿವೆ. ಡೈಮ್ಲರ್, ಬಾಷ್, ಮಹೀಂದ್ರಾ ಎಲೆಕ್ಟ್ರಿಕ್ ಇವೆ. ಓಲಾ, ಊಬರ್, ಸನ್ ಮೊಬಿಲಿಟಿ ಅಥರ್ ಎನರ್ಜಿಯಂತ ಸ್ಟಾರ್ಟ್‌ಅಪ್‌ಗಳು ಇವೆ.

Recommended Video

White Houseಗೆ ವಿಷದ ಅಂಚೆ ರವಾನೆ | Oneindia Kannada

ಭಾರತದಲ್ಲಿ ವಾಯು ಮಾಲಿನ್ಯ ಪ್ರಮಾಣ ತಗ್ಗಿಸಲು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದ್ದು, ಟೆಸ್ಲಾ ಆರ್ & ಡಿ ಕೇಂದ್ರದಿಂದ ದೊಡ್ಡ ಪ್ರಭಾವವನ್ನು ಪಡೆಯಬಹುದು.

English summary
Electric car maker Tesla Inc is in early stage discussions with the industries department of Karnataka government to set up a research and development centre in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X