ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆದರ್ಲೆಂಡ್ಸ್‌ ಅಂಗಸಂಸ್ಥೆ ಮೂಲಕ ಭಾರತದಲ್ಲಿ ಹೂಡಿಕೆ ಮಾಡಲಿದೆ ಟೆಸ್ಲಾ

|
Google Oneindia Kannada News

ನವದೆಹಲಿ, ಜನವರಿ 18: ವಿಶ್ವದ ಅತ್ಯಂತ ಖ್ಯಾತ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಭಾರತದಲ್ಲಿ ಕಾರುಗಳ ಮಾರಾಟಕ್ಕೆ ಬೆಂಗಳೂರಿನಲ್ಲಿ ತನ್ನ ಘಟಕವನ್ನು ಆರಂಭಿಸಲು ಈಗಾಗಲೇ ಯೋಜಿಸಿದೆ. ಈ ಕುರಿತು ಈಗಾಗಲೇ ಸುದ್ದಿ ಹೊರಬಿದ್ದಿದ್ದು, ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಸಿಇಒ ಎಲೋನ್ ಮಸ್ಕ್‌ ಕೂಡ ದೃಢಪಡಿಸಿದ್ದಾರೆ. ಆದರೆ ಯಾವಾಗ ಶುರು ಆಗಲಿದೆ ಅನ್ನೋದಷ್ಟೇ ಅಧಿಕೃತವಾಗಿ ತಿಳಿಯಬೇಕಿದೆ.

ಇದರ ನಡುವೆ ಟೆಸ್ಲಾ ಕಂಪನಿಯು ನೇರವಾಗಿ ಭಾರತದಲ್ಲಿ ಹೂಡಿಕೆ ಮಾಡದೆ ನೆದರ್ಲೆಂಡ್ಸ್‌ ಮೂಲದ ತನ್ನ ಅಂಗಸಂಸ್ಥೆ ಮೂಲಕ ಭಾರತದಲ್ಲಿ ಹೂಡಿಕೆ ಮಾಡಿ ತನ್ನ ಕಾರ್ಯಾಚರಣೆ ಪ್ರಾರಂಭಿಸಲಿದೆ ಎಂಬುದು ತಿಳಿದುಬಂದಿದೆ.

 ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್‌ರ ಟೆಸ್ಲಾ ಕಂಪನಿ ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್‌ರ ಟೆಸ್ಲಾ ಕಂಪನಿ

ಅಮೆರಿಕಾ ಮೂಲಕ ಎಲೆಕ್ಟ್ರಿಕ್ ವಾಹನಗಳ ದಿಗ್ಗಜ ಕಂಪನಿ ಟೆಸ್ಲಾ ಭಾರತದ ಹೂಡಿಕೆಗೆ ನೆದರ್ಲೆಂಡ್ಸ್‌ನ ತೆರಿಗೆ ಸ್ನೇಹಿ ನ್ಯಾಯವ್ಯಾಪ್ತಿಯನ್ನು ಆಯ್ಕೆ ಮಾಡಿದೆ. ಟೆಸ್ಲಾ ಮೋಟಾರ್ಸ್ ಆಮ್ಸ್ಟರ್‌ಡ್ಯಾಮ್ ಭಾರತದಲ್ಲಿ ಹೂಡಿಕೆ ಮಾಡಲಿರುವ ಟೆಸ್ಲಾ ಮೋಟಾರ್ಸ್ ಮತ್ತು ಎನರ್ಜಿಯ ಮೂಲ ಕಂಪನಿಯಾಗಿದೆ ಎಂಬುದನ್ನು ತನ್ನ ದಾಖಲೆಗಳಲ್ಲಿ ತೋರಿಸಿದೆ.

Tesla Motors Will Route Its India Investment Through Netherlands Arm

ಭಾರತದಲ್ಲಿನ ತೆರಿಗೆ ಪ್ರಯೋಜನಗಳನ್ನು ಪಡೆಯುವ ಸಲುವಾಗಿ ಟೆಸ್ಲಾ ಕಂಪನಿಯು ನೆದರ್ಲೆಂರ್ಡ್ಸ್ ಮೂಲದ ತನ್ನ ಅಂಗಸಂಸ್ಥೆ ಮುಖಾಂತರ ಹಣ ಹೂಡಿಕೆ ಮಾಡಲಿದೆ.

ಭಾರತದಲ್ಲಿ ವಾಹನ ಕಂಪನಿಯು ಬೇರೆ ಮೂಲದಿಂದ ಹಣ ಹೂಡಿಕೆ ಮಾಡುತ್ತಿರುವುದು ಇದೇ ಮೊದಲೇನಲ್ಲ. 2017 ರಲ್ಲಿ ಭಾರತಕ್ಕೆ ಪ್ರವೇಶಿಸಿದ ಎಂಜಿ ಮೋಟಾರ್ಸ್ ಚೀನಾ ಮೂಲಕ ಹೂಡಿಕೆ ಮಾಡಿತು. ಇದು ತನ್ನ ಮೂಲ ಕಂಪನಿ ಎಸ್‌ಐಸಿ ಮೋಟಾರ್ಸ್‌ನ ಅಂಗಸಂಸ್ಥೆಯಾಗಿದೆ. ಅಂತೆಯೇ, ಕೆಐಎ ಮೋಟಾರ್ಸ್‌ನ ಭಾರತದ ಹೂಡಿಕೆಗಳು ದಕ್ಷಿಣ ಕೊರಿಯಾದಿಂದ ಬಂದಿತ್ತು.

ಈಗ ಇದೇ ರೀತಿಯಲ್ಲಿ ಟೆಸ್ಲಾ ಹೂಡಿಕೆಗೆ ಮುಂದಾಗಿದ್ಯಾ ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರಿಸಲಾಗಿಲ್ಲ. ಏಕೆಂದರೆ ಟೆಸ್ಲಾ ಕಂಪನಿಯು ಕ್ಯಾಲಿಫೋರ್ನಿಯಾದಲ್ಲಿ ನೋಂದಾಯಿಸಲಾಗಿದೆ ಮತ್ತು ನೆದರ್ಲೆಂಡ್ಸ್‌ನ ಟೆಸ್ಲಾ ಮೋಟಾರ್ಸ್ ಇದರ ಅಂಗಸಂಸ್ಥೆಯಾಗಿದೆ. ಹೀಗಾಗಿ ನೆದರ್ಲೆಂಡ್ಸ್‌ನ ತನ್ನ ಅಂಗಸಂಸ್ತೆಯು ಕಂಪನಿಯ ಉನ್ನತ ಆಯ್ಕೆಗಳಲ್ಲಿ ಒಂದಾಗಿದೆ, ಏಕೆಂದರೆ ಇದು ಅನುಕೂಲಕರ ತೆರಿಗೆ ದರವನ್ನು ನೀಡುತ್ತದೆ ಮತ್ತು ರಕ್ಷಣೆಯ ಚೌಕಟ್ಟನ್ನು ಹೊಂದಿದೆ ಎಂದು ತೆರಿಗೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

English summary
US automaker Tesla has chosen the tax-friendly jurisdiction of the Netherlands to route its India investment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X