ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡಲು ಟೆಸ್ಲಾ ತಯಾರಿ

|
Google Oneindia Kannada News

ನವದೆಹಲಿ, ಜನವರಿ 13: ವಿಶ್ವದ ಅತ್ಯಂತ ಖ್ಯಾತ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಭಾರತದಲ್ಲಿ ಕಾರುಗಳ ಮಾರಾಟಕ್ಕೆ ಬೆಂಗಳೂರಿನಲ್ಲಿ ತನ್ನ ಘಟಕವನ್ನು ಆರಂಭಿಸಲು ಈಗಾಗಲೇ ಯೋಜಿಸಿದೆ. ಇದರ ಜೊತೆಗೆ ಜಗತ್ತಿನ ಅತ್ಯಂತ ಮೌಲ್ಯಯುವ ವಾಹನ ತಯಾರಕರು ವಿಶ್ವದ ಕೆಲವು ಕಲುಷಿತ ನಗರಗಳಲ್ಲಿಯೂ ಕಾರುಗಳ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈ. ಕಳೆದ ವಾರ ಬೆಂಗಳೂರಿನ ಲಾವೆಲ್ಲೆ ರಸ್ತೆಯಲ್ಲಿ ತನ್ನ ಸಂಯೋಜಿತ ಘಟಕದ ಆರಂಭಕ್ಕೆ ಕಂಪನಿಗಳ ರಿಜಿಸ್ಟ್ರಾರ್‌ಗೆ ಸಲ್ಲಿಸಿದ ದಾಖಲಾತಿಗಳಲ್ಲಿ ತಿಳಿಸಿದೆ.

ಬೆಂಗಳೂರಿಗೆ ಬಂದ ಎಲೋನ್ ಮಸ್ಕ್ 'ಟೆಸ್ಲಾ': ಮಾಯವಾದ ಯಡಿಯೂರಪ್ಪ ಟ್ವೀಟ್!ಬೆಂಗಳೂರಿಗೆ ಬಂದ ಎಲೋನ್ ಮಸ್ಕ್ 'ಟೆಸ್ಲಾ': ಮಾಯವಾದ ಯಡಿಯೂರಪ್ಪ ಟ್ವೀಟ್!

ಮಾಡೆಲ್ 3 ಕಾರುಗಳ ಮಾರಾಟದ ಜೊತೆಗೆ, ಕಂಪನಿಯು ಎಲೆಕ್ಟ್ರಿಕ್ ವಾಹನಗಳು ಮತ್ತು ಸ್ಥಾಯಿ ಇಂಧನ ಶೇಖರಣಾ ವ್ಯವಸ್ಥೆಗಳು ಮತ್ತು ಉಪಕರಣಗಳನ್ನು ಆಮದು ಮಾಡಿಕೊಳ್ಳಲು, ವಿತರಿಸಲು, ಮಾರಾಟ ಮಾಡಲು, ಸೇವೆಯನ್ನು ನೀಡಲು ಎಲ್ಲಾ ರೀತಿಯ ಕಾರ್ಯ ನಿರ್ವಹಣೆಯ ಉದ್ದೇಶವನ್ನು ಹೊಂದಿದೆ.

 Tesla Local Unit To Start Selling Cars In India

ವಿಶ್ವದ ಅಗ್ರ ಎಲೆಕ್ಟ್ರಾನಿಕ್ ಕಾರು ತಯಾರಕ ಟೆಸ್ಲಾ, ಭಾರತದಲ್ಲಿ ಕೇವಲ ಕಾರುಗಳ ಮಾರಾಟ ಅಷ್ಟೇ ಅಲ್ಲದೆ ಸಂಶೋಧನೆ ಮತ್ತು ಅಭಿವೃದ್ಧಿಯ ಬಗ್ಗೆಯು ಯೋಚನೆ ಮಾಡಿಕೊಂಡಿದೆ.

ಹೀಗಾಗಿ ಎಲ್ಲಾ ಕಾರ್ಯಗಳು ವ್ಯವಸ್ಥಿತವಾಗಿ ರೂಪುಗೊಳ್ಳಲು ಮೂವರು ನಿರ್ದೇಶಕರನ್ನು ಹೆಸರಿಸಿದೆ. ಟೆಸ್ಲಾದ ಮುಖ್ಯ ಲೆಕ್ಕಪತ್ರ ಅಧಿಕಾರಿ ವೈಭವ್ ತನೇಜಾ, ಟೆಸ್ಲಾ ಜಾಗತಿಕ ನಿರ್ದೇಶಕ ಡೇವಿಡ್ ಜಾನ್ ಫೆಯಿನ್ಸ್ಟೈನ್, ವೆಂಕಟ್ರಂಗಂ ಶ್ರೀರಾಮ್ ಪ್ರಮುಖರಾಗಿದ್ದಾರೆ.

ಕೇಂದ್ರ ಸರ್ಕಾರವು ಈಗಾಗಲೇ ಎಲೆಕ್ಟ್ರಿಕ್ ಕಾರುಗಳಿಗೆ ಪ್ರೋತ್ಸಾಹ ಹೆಚ್ಚಿಸಿದೆ, ಇದರ ಜೊತೆಗೆ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕನಿಗೆ ಮಣೆ ಹಾಕಲು ನಾನಾ ರಾಜ್ಯಗಳು ಪ್ರಯತ್ನದ ನಡುವೆ ಕರ್ನಾಟಕವು ಉತ್ತಮ ವೇದಿಕೆಯಾಗಿ ಮಾರ್ಪಟ್ಟಿದೆ. ಮಾಲಿನ್ಯವನ್ನು ನಿಯಂತ್ರಿಸಲು, ಖರ್ಚು ತಗ್ಗಿಸಲು, ಇಂಧನ ಆಮದನ್ನು ಕಡಿಮೆ ಮಾಡಲು ಟೆಸ್ಲಾ ರೀತಿಯ ಕಂಪನಿಗಳ ಸ್ವಾಗತಕ್ಕೆ ಭಾರತವು ಎದುರು ನೋಡುತ್ತಿದೆ.

English summary
Tesla Inc. set up an India unit as the world's most-valued automaker starts preparing for selling its electric cars in the nation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X