ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಕ್ಲಿಯರ್ ಆಯ್ತು ಟ್ರಾಫಿಕ್..! 500 ಹಡಗುಗಳಿಗೆ ಬಿಡುಗಡೆ ಭಾಗ್ಯ..!

|
Google Oneindia Kannada News

ಸೂಯೆಜ್ ಕಾಲುವೆಯಲ್ಲಿ ತಗಲಾಕ್ಕೊಂಡಿದ್ದ 'ಎವರ್ ಗಿವನ್‌' ಹಡಗು ಹೇಗೋ ತೇಲಿಕೊಂಡು ಹೊರಗೆ ಬಂದಿದೆ. ಆದರೆ ಕಾಲುವೆಯಲ್ಲಿ ಉಂಟಾಗಿದ್ದ ಭೀಕರ ಟ್ರಾಫಿಕ್ ಜಾಮ್ ಕ್ಲಿಯರ್ ಆಗಲು ಬರೋಬ್ಬರಿ 1 ವಾರವೇ ಬೇಕಾಯಿತು.

ಹೌದು, 'ಎವರ್ ಗಿವನ್‌' ಸೂಯೆಜ್ ಕಾಲುವೆಯಲ್ಲಿ ಸಿಲುಕಿದ ನಂತರ ಅಲ್ಲಿಯೇ ಠಿಕಾಣಿ ಹೂಡಿದ್ದ ಸುಮಾರು 500 ಹಡಗುಗಳನ್ನ ಸುರಕ್ಷಿತವಾಗಿ ಕಾಲುವೆ ದಾಟಿಸಲಾಗಿದೆ ಎಂದು ಸೂಯೆಜ್ ಕಾಲುವೆ ಪ್ರಾಧಿಕಾರ ತಿಳಿಸಿದೆ.

ಈಗಾಗಲೇ ಎವರ್ ಗಿವನ್‌ ಮಾಡಿದ ತಪ್ಪಿಗೆ 7 ಸಾವಿರ ಕೋಟಿ ರೂ. ದಂಡ ವಿಧಿಸಿದೆ ಸೂಯೆಜ್ ಕಾಲುವೆ ಪ್ರಾಧಿಕಾರ. ಈ ನಡುವೆ ಟ್ರಾಫಿಕ್ ಕೂಡ ಕ್ಲಿಯರ್ ಆಗಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಒಂದು ಕಡೆ ಇದು ಈಜಿಪ್ಟ್ ಸರ್ಕಾರದ ಆದಾಯದ ಬಹುದೊಡ್ಡ ಮೂಲ ಮತ್ತು ಏಷ್ಯಾ ದೇಶಗಳ ಪಾಲಿಗೆ ಸರಕು ಸಾಗಾಣಿಕೆಗೆ ಇರುವ ಸುಲಭದ ಮಾರ್ಗ ಈ ಸೂಯೆಜ್ ಕಾಲುವೆ. ಅಕಸ್ಮಾತ್ ಈ ಕಾಲುವೆ ಇಲ್ಲವಾದರೆ ಇಡೀ ಆಫ್ರಿಕಾ ಖಂಡ ಸುತ್ತಿ ಸುಮಾರು 10 ಸಾವಿರ ಕಿಲೋ ಮೀಟರ್ ದೂರ ಕ್ರಮಿಸಬೇಕಾಗುತ್ತದೆ.

ಮರಳಿನ ಬಿರುಗಾಳಿ ಎಫೆಕ್ಟ್..!

ಮರಳಿನ ಬಿರುಗಾಳಿ ಎಫೆಕ್ಟ್..!

ಈಜಿಪ್ಟ್ ಮರುಭೂಮಿ ಪ್ರದೇಶ, ಹೀಗಾಗಿಯೇ ಮರಳಿನ ಚಂಡಮಾರುತ ಇಲ್ಲಿ ಸಾಮಾನ್ಯ. ಆದರೆ ಈ ಬಾರಿ ಗಾಳಿ ಭೀಕರವಾಗಿತ್ತು. ಹೀಗಾಗಿ ನಾವಿಕ ಹಡಗನ್ನ ಸೀದಾ ಕಾಲುವೆಯ ಬದಿಗೆ ಹೊರಳಿಸಿದ್ದ. ಹಡಗು ಮರಳಿನ ಮೇಲೆಯೇ ನಿಂತುಬಿಟ್ಟಿತ್ತು. ಹೀಗಾಗಿ ಸುಮಾರು 1 ವಾರಗಳ ಕಾಲ 500ಕ್ಕೂ ಹೆಚ್ಚು ಹಡಗುಗಳು ಸೂಯೆಜ್ ಕಾಲುವೆಯ ಒಳಗೆ ಹಾಗೂ ಹೊರಗೆ ಕಾಯುತ್ತಾ ನಿಂತಿದ್ದವು. ಇದರಿಂದಾಗಿ ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಗಿತ್ತು, ಇದೇ ಕಾರಣಕ್ಕೆ 'ಎವರ್ ಗಿವನ್‌'ಗೆ 7 ಸಾವಿರ ಕೋಟಿ ದಂಡ ವಿಧಿಸಲಾಗಿದೆ.

‘ಸೂಯೆಜ್ ಕಾಲುವೆ’ ನೆಪೋಲಿಯನ್ ಕನಸು

‘ಸೂಯೆಜ್ ಕಾಲುವೆ’ ನೆಪೋಲಿಯನ್ ಕನಸು

ನಿಮಗೆಲ್ಲಾ ತಿಳಿದಿರುವಂತೆ ದೇಶ ದೇಶಗಳ ನಡುವೆ ಹೆಚ್ಚಿನ ವ್ಯಾಪಾರ ಮತ್ತು ವಹಿವಾಟು ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ. ಇದು ಪುರಾತನ ವಿಧಾನ ಕೂಡ ಆಗಿದೆ. ಹೀಗೆ ಯುರೋಪ್ ಹಾಗೂ ಏಷ್ಯಾದ ನಡುವೆ ವ್ಯಾಪಾರ ಮತ್ತು ವಹಿವಾಟು ನಡೆಯಲು ಸೂಯೆಜ್ ಕಾಲುವೆ ಅತ್ಯಗತ್ಯವಾಗಿತ್ತು. ಮೊದಲಿಗೆ ಇದರ ಕನಸು ಕಂಡವನು ಯುರೋಪಿಯನ್ನರ ಪಾಲಿಗೆ ಅನಭಿಶಕ್ತ ದೊರೆಯಾದ ನೆಪೋಲಿಯನ್ ಬೋನಾಪಾರ್ಟೆ. ಮೆಡಿಟೆರಿಯನ್ ಮತ್ತು ಕೆಂಪು ಸಮುದ್ರ ಬೆಸೆಯುವ ಕಾಲುವೆ ಎರಡು ಖಂಡಗಳನ್ನು ಒಗ್ಗೂಡಿಸುತ್ತದೆ. ಅಲ್ಲಿನ ವ್ಯಾಪಾರ ಮತ್ತು ವಹಿವಾಟಿನ ಅಗತ್ಯತೆಗಾಗಿ ಕಾಲುವೆ ನಿರ್ಮಿಸಲಾಗಿತ್ತು. ಇದೀಗ ಈಜಿಪ್ಟ್ ಸರ್ಕಾರಕ್ಕೆ ಒಟ್ಟು ವಾರ್ಷಿಕ ಆದಾಯದ ಶೇಕಡಾ 25ರಷ್ಟು ಭಾಗವನ್ನು ಇದೇ ಕಾಲುವೆ ತಂದುಕೊಡುತ್ತದೆ.

1869ರಲ್ಲಿ ಕಾಲುವೆ ನಿರ್ಮಾಣ..!

1869ರಲ್ಲಿ ಕಾಲುವೆ ನಿರ್ಮಾಣ..!

ಇಡೀ ಜಗತ್ತು ನೆಪೋಲಿಯನ್‌ನ ನೆನಪಿನಲ್ಲಿ ಇಡುವುದು ಕೇವಲ ಆತನ ಯುದ್ಧಗಳಿಂದ ಅಲ್ಲ. ಬದಲಾಗಿ ಆತ ತಂದ ಕ್ರಾಂತಿಕಾರಿ ಬದಲಾವಣೆಗಳಿಂದ. ಯುರೋಪ್ ಹಾಗೂ ಆಫ್ರಿಕಾ ಅಭಿವೃದ್ಧಿಗೆ ನೆಪೋಲಿಯನ್ ನೀಡಿದ ಕೊಡುಗೆ ಮಹತ್ವದ್ದಾಗಿದೆ. 1799ರಲ್ಲಿ ಈಜಿಪ್ಟ್ ವಶಪಡಿಸಿಕೊಂಡ ನೆಪೋಲಿಯನ್ ಸೂಯೆಜ್ ಕಾಲುವೆಯ ಅಧ್ಯಯನಕ್ಕೆ ಆದೇಶ ನೀಡಿದ್ದ. ಆದರೆ ಅತಿಯಾದ ವೆಚ್ಚದ ಹಿನ್ನೆಲೆ ಯೋಜನೆ ಕೈಬಿಡಲಾಯಿತು. 1840ರಲ್ಲಿ 2ನೇ ಬಾರಿ ಸಮೀಕ್ಷೆ ನಡೆಸಲಾಯಿತು. ಮೊದಲಿಗೆ ಕೈಗೊಂಡಿದ್ದ ಸಮೀಕ್ಷೆ ತಪ್ಪಾಗಿರುವುದನ್ನ ಅರಿತುಕೊಂಡು, ಮೆಡಿಟೆರಿಯನ್-ಕೆಂಪು ಸಮುದ್ರದ ಮಧ್ಯೆ ಸಂಪರ್ಕ ಕಲ್ಪಿಸಲು ಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಯಿತು. ಸೆಪ್ಟೆಂಬರ್ 25, 1859ರಲ್ಲಿ ಕಾಲುವೆ ನಿರ್ಮಾಣ ಆರಂಭವಾಗಿ-ನವೆಂಬರ್ 17, 1869ರಲ್ಲಿ ಕಾಲುವೆ ಕೆಲಸ ಪೂರ್ಣವಾಯಿತು. ಅಂದಿನಿಂದಲೂ ಈ ಕಾಲುವೆ ಅಸ್ತಿತ್ವದಲ್ಲಿ ಇದೆ.

‘ಸೂಯೆಜ್ ಕಾಲುವೆ’ಗಾಗಿ ಫೈಟಿಂಗ್..!

‘ಸೂಯೆಜ್ ಕಾಲುವೆ’ಗಾಗಿ ಫೈಟಿಂಗ್..!

ಜಗತ್ತಿನಲ್ಲಿ ಜಾಗದ ಮೇಲಿನ ಹಿಡಿತಕ್ಕಾಗಿ ಎಷ್ಟೋ ಯುದ್ಧಗಳು ನಡೆದಿವೆ. ಆದರೆ ಒಂದು ಕಾಲುವೆ ವಿಚಾರಕ್ಕೆ ನಡೆದ ಹೊಡೆದಾಟವನ್ನು 'ಸೂಯೆಜ್ ಕಾಲುವೆ' ಮೊದಲ ಸ್ಥಾನದಲ್ಲಿ ಪ್ರತಿನಿಧಿಸುತ್ತದೆ. 20 ಮೇ 1882ರಲ್ಲಿ ಈಜಿಪ್ಟ್ ಮೇಲೆ ಬ್ರಿಟನ್ ದಾಳಿ ನಡೆಸಿದ್ದು ಸೇರಿದಂತೆ ಅನೇಕ ಯುದ್ಧಗಳನ್ನ ಈ ಕಾಲುವೆ ಕಂಡಿದೆ. ಹಲವು ಸಂದರ್ಭದಲ್ಲಿ ಈ ಕಾಲುವೆಯನ್ನ ಬಂದ್ ಮಾಡಲಾಗಿದೆ. ಆದರೆ ಇದೀಗ ಹಡಗು ಅಡ್ಡನಿಂತ ಪರಿಣಾಮ ಈ ಕಾಲುವೆ ಬಂದ್ ಆಗಿದೆ. ಸಾವಿರಾರು ಕೋಟಿ ವ್ಯಾಪಾರ, ವಹಿವಾಟಿಗೆ ದೊಡ್ಡ ಕಂಟಕ ಇದೀಗ ಎದುರಾಗಿದೆ.

English summary
Suez Canal Authority confirmed traffic jam has been cleared at Suez Canal after 1 week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X