ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರಿಂದ ಮೆಸೇಜಿಂಗ್ ಅಪ್ಲಿಕೇಶನ್ 'ಟೆಲಿಗ್ರಾಮ್' ಬಳಕೆಗೆ ಶುಲ್ಕ ಅನ್ವಯ!

|
Google Oneindia Kannada News

ಮಾಸ್ಕೊ, ಡಿಸೆಂಬರ್ 23: ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ಸೇವೆ ಪಡೆಯಲು ಮುಂದಿನ ವರ್ಷದಿಂದ ನೀವು ಹಣ ಪಾವತಿಸಬೇಕಾಗುತ್ತದೆ. ಹೌದು 2021 ರಲ್ಲಿ ಟೆಲಿಗ್ರಾಮ್ ಪೇ-ಫಾರ್ ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಅದರ ರಷ್ಯಾ ಮೂಲದ ಸಂಸ್ಥಾಪಕ ಪಾವೆಲ್ ಡುರೊವ್ ಬುಧವಾರ ಹೇಳಿದ್ದಾರೆ.

ವಾಟ್ಸಾಪ್‌ನ ಭಾರೀ ಸ್ಪರ್ಧೆಯ ನಡುವೆ ಬೆಳೆಯುತ್ತಿರುವ ಟೆಲಿಗ್ರಾಮ್ ಮೆಸೆಜಿಂಗ್ ಅಪ್ಲಿಕೇಶನ್ ಬಳಕೆಗೆ ಪ್ರಸ್ತುತ ಉಚಿತ ಅವಕಾಶವಿದೆ. ಆದರೆ ಮುಂದಿನ ವರ್ಷದಿಂದ ಕಂಪನಿಯ ಆದಾಯ ದೃಷ್ಟಿಯಿಂದ ಶುಲ್ಕ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

'' ಬೆಳೆಯುತ್ತಿರುವ ಕಂಪನಿಗೆ ವರ್ಷಕ್ಕೆ ಕನಿಷ್ಠ ಕೆಲವು ನೂರು ಮಿಲಿಯನ್ ಡಾಲರ್ ಅಗತ್ಯವಿದೆ. ಹೀಗಾಗಿ ಮುಂದಿನ ವರ್ಷದಿಂದ ಟೆಲಿಗ್ರಾಮ್ ಆದಾಯವನ್ನು ಗಳಿಸಲು ಪ್ರಾರಂಭಿಸುತ್ತದೆ'' ಎಂದು ಸಂಸ್ಥಾಪಕ ಪಾವೆಲ್ ಡುರೊವ್ ಅವರ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Telegram Will Launch Pay For Services In 2021

''ಕಂಪನಿಗೆ ಒಮ್ಮೆ ಆದಾಯ ಬರಲು ಪ್ರಾರಂಭವಾದರೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪ್ರಾರಂಭಿಸಲು ಮತ್ತು ಕೋಟ್ಯಾಂತರ ಹೊಸ ಬಳಕೆದಾರರನ್ನು ಪಡೆಯಲು ಸಾಧ್ಯವಾಗುತ್ತದೆ'' ಎಂದು ಪ್ರಕಟಿಸಲಾಗಿದೆ.

English summary
Messaging app Telegram will launch pay-for services in 2021, its Russian-born founder Pavel Durov said Wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X