ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್‌ನಲ್ಲಿ 82 ಲಕ್ಷ ಮೊಬೈಲ್ ಚಂದಾದಾರರನ್ನು ಕಳೆದುಕೊಂಡ ಟೆಲಿಕಾಂ ಕಂಪನಿಗಳು

|
Google Oneindia Kannada News

ನವದೆಹಲಿ, ಜುಲೈ 25: ಭಾರತದಲ್ಲಿ ಮೊದಲ ಪೂರ್ಣ ತಿಂಗಳ ಕೊರೊನಾವೈರಸ್ ಲಾಕ್‌ಡೌನ್‌ದಿಂದಾಗಿ 8.2 ಮಿಲಿಯನ್ ಮೊಬೈಲ್ ಬಳಕೆದಾರರ ನಿರ್ಗಮನವನ್ನು ಟೆಲಿಕಾಂ ಕಂಪನಿಗಳು ಕಂಡಿವೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ದತ್ತಾಂಶವು ತೋರಿಸಿದೆ.

ಏಪ್ರಿಲ್‌ನಲ್ಲಿ ನಗರ ಮೊಬೈಲ್ ಬಳಕೆದಾರರ ಸಂಖ್ಯೆ 9 ಮಿಲಿಯನ್ ಕುಸಿದಿದ್ದರೆ, ಭಾರತದ ನಗರಗಗಳಿಂದ ವಲಸೆ ಕಾರ್ಮಿಕರನ್ನು ಹಳ್ಳಿಗಳಿಗೆ ಸ್ಥಳಾಂತರಿಸುವುದನ್ನು ಕಂಡಾಗ, ಗ್ರಾಮೀಣ ಚಂದಾದಾರರ ಪ್ರಮಾಣವು ಸ್ವಲ್ಪಮಟ್ಟಿಗೆ ಏರಿತು ಎಂದು ಟ್ರಾಯ್ ಹಂಚಿಕೊಂಡ ಮಾಹಿತಿ ತಿಳಿಸಿದೆ.

ವೊಡಾಫೋನ್ ಐಡಿಯಾ ರೆಡ್‌ಎಕ್ಸ್ ಪ್ಲಾನ್: ಟ್ರಾಯ್‌ ಆದೇಶಕ್ಕೆ ತಡೆವೊಡಾಫೋನ್ ಐಡಿಯಾ ರೆಡ್‌ಎಕ್ಸ್ ಪ್ಲಾನ್: ಟ್ರಾಯ್‌ ಆದೇಶಕ್ಕೆ ತಡೆ

ಉತ್ತರ ಪ್ರದೇಶವು ಏಕೈಕ ಸೇವಾ ಕ್ಷೇತ್ರವಾಗಿದ್ದು, ಬಳಕೆದಾರರು ಶೇ. 1.29 ರಷ್ಟು ಏರಿಕೆಯಾಗಿದ್ದಾರೆ. ಇತರ ಎಲ್ಲ ಸೇವಾ ಪ್ರದೇಶಗಳು ಮೊಬೈಲ್ ಚಂದಾದಾರಿಕೆಯಲ್ಲಿ ಕುಸಿತವನ್ನು ವರದಿ ಮಾಡಿವೆ.

Telcos Lost 8.2 Million Mobile Subscribers In April: Trai

ವೊಡಾಫೋನ್ ಐಡಿಯಾ ಲಿಮಿಟೆಡ್ 4.5 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡರೆ, ಭಾರ್ತಿ ಏರ್‌ಟೆಲ್ 5.2 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ. ಆದಾಗ್ಯೂ, ಅದೇ ತಿಂಗಳಲ್ಲಿ, ರಿಲಯನ್ಸ್ ಜಿಯೋ 1.6 ಮಿಲಿಯನ್ ಗ್ರಾಹಕರನ್ನು ಸೇರಿಸಿದೆ. ಇದು ಎರಡು ವರ್ಷಗಳಲ್ಲಿ ಅದರ ಕಡಿಮೆ ಮಾಸಿಕ ಸೇರ್ಪಡೆಗಳಲ್ಲಿ ಒಂದಾಗಿದೆ.

ರಿಲಯನ್ಸ್ ಜಿಯೋ ಈಗ ವೈರ್‌ಲೆಸ್ ಮಾರುಕಟ್ಟೆ ಪಾಲಿನ ಶೇ. 33.85ರಷ್ಟು ವಿಸ್ತಾರವನ್ನು ಹೊಂದಿದೆ, ಭಾರ್ತಿ ಏರ್‌ಟೆಲ್ ಲಿಮಿಟೆಡ್ ಮತ್ತು ವೊಡಾಫೋನ್ ಐಡಿಯಾ ಕ್ರಮವಾಗಿ ಶೇ. 28.06 ಮತ್ತು ಶೇ. 27.37 ನಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ.

ಭಾರತದಲ್ಲಿ ದೂರವಾಣಿ ಚಂದಾದಾರರ ಸಂಖ್ಯೆ ಮಾರ್ಚ್ ಅಂತ್ಯದ ವೇಳೆಗೆ 1,177.97 ದಶಲಕ್ಷದಿಂದ ಏಪ್ರಿಲ್ ಅಂತ್ಯದ ವೇಳೆಗೆ 1,169.44 ದಶಲಕ್ಷಕ್ಕೆ ಇಳಿದಿದೆ. ಇದು ಶೇ. 0.72ನಷ್ಟು ಕಡಿಮೆಯಾಗಿದೆ.

ನಗರ ದೂರವಾಣಿ ಚಂದಾದಾರಿಕೆ ಮಾರ್ಚ್ ಅಂತ್ಯದ ವೇಳೆಗೆ 656.46 ದಶಲಕ್ಷದಿಂದ ಏಪ್ರಿಲ್ ಅಂತ್ಯದ ವೇಳೆಗೆ 647.19 ದಶಲಕ್ಷಕ್ಕೆ ಇಳಿದಿದೆ. ಆದಾಗ್ಯೂ, ಇದೇ ಅವಧಿಯಲ್ಲಿ ಗ್ರಾಮೀಣ ಚಂದಾದಾರಿಕೆ 521.51 ದಶಲಕ್ಷದಿಂದ 522.24 ದಶಲಕ್ಷಕ್ಕೆ ಏರಿದೆ.

English summary
The first full month of India’s coronavirus lockdown saw the exit of 8.2 million mobile users, led by urban subscribers, regulatory data showed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X