ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಸ್ನೇಹಿ ಇ-ವಾಹನ ಶೋ ರೂಂಗೆ ಚಾಲನೆ ನೀಡಿದ ತೇಜಸ್ವಿ ಸೂರ್ಯ

|
Google Oneindia Kannada News

ಬೆಂಗಳೂರು, ಮಾರ್ಚ್ 15: ಜಿತೇಂದ್ರ ಇವಿ ಟೆಕ್ ಸಂಸ್ಥೆಯು ಅತಿಯಾಸ್ ಮೊಬಿಲಿಟಿ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಶೋ ರೂಂ ಅನ್ನು ಸಂಸದ ತೇಜಸ್ವಿ ಸೂರ್ಯ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಗೌರವ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿ, ಇ ಬೈಕ್ ಸವಾರಿ ಮಾಡಿದರು.

ಹೊಸ ಅತ್ಯಾಧುನಿಕ ಶೋ ರೂಂ ಗೆ ಚಾಲನೆ ನೀಡುವ ಮೂಲಕ ಬ್ಯಾಟರಿ ಚಾಲಿತ ವಾಹನಗಳನ್ನು ಪ್ರಮೋಟ್ ಮಾಡಲು ಜಿತೇಂದ್ರ ಇವಿ ಟೆಕ್ ಸಂಸ್ಥೆಯು ಕರ್ನಾಟಕದಲ್ಲಿ ತನ್ನ ಹೆಜ್ಜೆಯನ್ನು ಇಟ್ಟಿದೆ. ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಇ-ವಾಹನಗಳ ತಯಾರಿಕೆ ಮಾಡಲಾಗಿದ್ದು ಇದರಿಂದ ಗ್ರಾಹಕರಿಗೆ ಹಣ ಮತ್ತು ಸಮಯದ ಉಳಿತಾಯವಾಗುತ್ತದೆ. ಜತೆಗೆ ಪರಿಸರ ಸಂರಕ್ಷಣೆಗೆ ಕೂಡ ತನ್ನದೆ ಆದ ಕೊಡುಗೆಯನ್ನು ಇ-ವಾಹನಗಳು ನೀಡಲಿವೆ.

 ಬೆಂಗಳೂರು ಸಂಸ್ಥೆಯಿಂದ 6 ವಿಧದ ಎಲೆಕ್ಟ್ರಿಕ್ ವಾಹನ ಬಿಡುಗಡೆ ಬೆಂಗಳೂರು ಸಂಸ್ಥೆಯಿಂದ 6 ವಿಧದ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪರಿಕಲ್ಪನೆಯ ಅಡಿಯಲ್ಲಿ ಗ್ಲೋಬಲ್ ಎಲೆಕ್ಟ್ರಿಫಿಕೆಷನ್ ಮೊಮೆಂಟ್ ಅನ್ನು ಪ್ರಮೋಟ್ ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಈ ಸಂಸ್ಥೆಯು ಐಎಸ್ಒ 9001 ಪ್ರಮಾಣಿಕೃತವಾಗಿದೆ. ಸಂಸ್ಥೆಯ ಉತ್ಪನ್ನಗಳನ್ನು ಐಸಿಎಟಿ (ICAT) / ಎಆರ್‌ಎಐ (ARAI) ದೃಢೀಕರಿಸಿವೆ.

ಕಾರ್ಗೋ ಅನುಮೋದನೆಯನ್ನು ಸಹ ಪಡೆದಿದೆ

ಕಾರ್ಗೋ ಅನುಮೋದನೆಯನ್ನು ಸಹ ಪಡೆದಿದೆ

ಸಂಸ್ಥೆಯು ದ್ವಿಚಕ್ರ ಸ್ಕೂಟರ್, ಮೋಟರ್ ಸೈಕಲ್ ಮತ್ತು ತ್ರಿಚಕ್ರ ವಾಹನಗಳನ್ನು ಉತ್ಪಾದಿಸುತ್ತದೆ. ಹೈಸ್ಪೀಡ್ ವಾಹನವಾದ ಜೆಎಂಟಿ 1000 ಎಚ್‌ಎಸ್ ಒಂದು ಪ್ರಮುಖ ಮಾದರಿಯಾಗಿದ್ದು ಮತ್ತು ಸಾಗಾಣಿಕೆ ಉದ್ದೇಶದಿಂದ ಉತ್ಪಾದನೆ ಮಾಡಲಾಗಿದ್ದು ಕಾರ್ಗೋ ಅನುಮೋದನೆಯನ್ನು ಸಹ ಪಡೆದಿದೆ. ಜೆಎಂಟಿ 100 ಎಚ್ಎಸ್ ವಾಹನವು ಬಿ2ಬಿ ವ್ಯವಹಾರದಲ್ಲಿ ತೊಡಗಿಸಿಕೊಂಡ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಗಳ ಜನಪ್ರಿಯ ಆಯ್ಕೆ ಆಗಿದೆ.

ಬೆಂಗಳೂರಲ್ಲಿ ಸಿಕೆ ಮೋಟರ್ಸ್ ಎಲೆಕ್ಟ್ರಿಕ್ ವಾಹನಗಳ ಅನಾವರಣಬೆಂಗಳೂರಲ್ಲಿ ಸಿಕೆ ಮೋಟರ್ಸ್ ಎಲೆಕ್ಟ್ರಿಕ್ ವಾಹನಗಳ ಅನಾವರಣ

ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ

ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ

ಸದ್ಯದಲ್ಲೆ ಸಂಸ್ಥೆಯು ಜೆಇಟಿ 320 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಕೂಟರ್ ಅಂತರಾಷ್ಟ್ರಿಯ ಲುಕ್ ಮತ್ತು ಫೀಲ್ ಹೊಂದಿದೆ. ಇದರ ಜತೆಗೆ ಸಂಸ್ಥೆಯು 90 ಕಿಮೀ ಪ್ರತಿ ಗಂಟೆಗೆ ಚಲಿಸುವ ಕ್ಲಾಸೋ (Klasoo) ಹೈ ಸ್ಪೀಡ್ ಮೋಟರ್ ಸೈಕಲ್ ಅನ್ನು ಸಹ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಡಿಜಿಟಲ್ ಡಿಸ್ಪ್ಲೈ, ಐಒಟಿ ಆಧಾರಿತ ಕ್ಲಸ್ಟರ್ ಹೊಂದಿದ್ದು 120 ಕಿಮೀ ಮೈಲೆಜ್ ನೀಡುತ್ತದೆ. ಪ್ಯಾಸೆಂಜರ್ ಮತ್ತು ಲೋಡರ್ ವಿಭಾಗದಲ್ಲಿ ಎಲ್3 ಮತ್ತು ಎಲ್5 ತ್ರಿಚಕ್ರ ವಾಹನವನ್ನು ಸಹ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಂಸ್ಥೆಯು ಸಜ್ಜಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದ

ದೇಶದ ವಿವಿಧ ರಾಜ್ಯಗಳಲ್ಲಿ ಸಂಸ್ಥೆಯು ನೆಟ್ ವರ್ಕ್ ಅನ್ನು ಈಗಾಗಲೇ ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯು ಈಗಾಗಲೇ ಕಿನ್ಯಾ, ಉಗಾಂಡ ಮತ್ತು ಕತಾರ್ ದೇಶಗಳ ಜೊತೆಗೆ ಎಂಒಯು (MOU) ಮಾಡಿಕೊಂಡಿದೆ. ಯೂರೋಪಿನ ಒಂದು ದೊಡ್ಡ ಸಂಸ್ಥೆಯ ಜತೆಗೆ ಜಾಯಿಂಟ್ ವೆಂಚರ್ ಮಾಡಲು ಮುಂದಾಗಿದ್ದು ಇದು ಯಶಸ್ವಿಯಾಗುವ ಕೊನೆಯ ಹಂತದಲ್ಲಿದೆ.

ಬೆಂಗಳೂರಿನ ಪೆಟ್ರೋಲ್ ಬಂಕ್‌ಗಳಲ್ಲೂ EV ಚಾರ್ಜಿಂಗ್ ಕಿಯೋಸ್ಕ್ಬೆಂಗಳೂರಿನ ಪೆಟ್ರೋಲ್ ಬಂಕ್‌ಗಳಲ್ಲೂ EV ಚಾರ್ಜಿಂಗ್ ಕಿಯೋಸ್ಕ್

Recommended Video

ಚೀನಾದಲ್ಲಿ ಪತ್ತೆಯಾಯಿತು ಮತ್ತೊಂದು ವೈರಸ್ | Oneindia Kannada
ಉಚಿತ ಇ-ಇಂಧನ ಪಡೆದುಕೊಳ್ಳಿ

ಉಚಿತ ಇ-ಇಂಧನ ಪಡೆದುಕೊಳ್ಳಿ

ಜಿತೇಂದ್ರ ಇವಿ ಟೆಕ್ ಸಂಸ್ಥೆಯ ಸಹ ಸಂಸ್ಥಾಪಕ ಸಂಪ್ಕಿತ್ ಶಾ, ಸಂಸ್ಥೆಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವ್ಯವಹಾರದ ಮುಖ್ಯಸ್ಥ ಸುಧೀರ್ ಉಂಡೆಯ್ಯ ಮತ್ತು ಸಂಸ್ಥೆಯ ದಕ್ಷಿಣ ವಿಭಾಗದ ವಲಯ ವ್ಯವಸ್ಥಾಪಕ ಉಮೇಶ್ ಅವರು ಹೊಸ ಶೋ ರೂಂ ಚಾಲನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇತ್ತೀಚೆಗೆ ಕಂಪನಿಯು ತನ್ನ ಪ್ರಮುಖ ಮಾದರಿ ಜೆಎಂಟಿ 1000 ಎಚ್‌ಎಸ್‌ಗಾಗಿ ರೂ .5000 / - ಮೌಲ್ಯದ ಉಚಿತ ಇ-ಇಂಧನವನ್ನು ಘೋಷಿಸಿದೆ. ಇದು ಭಾರತೀಯ ಗ್ರಾಹಕರನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಲು ಪ್ರೇರೇಪಿಸುವ ಉದ್ಯಮದ ಮೊದಲ ಹೆಜ್ಜೆಯಾಗಿದೆ. ಈ ಕೊಡುಗೆ 2021 ಮಾರ್ಚ್ 31 ರವರೆಗೆ ಚಾಲ್ತಿಯಲ್ಲಿರುತ್ತದೆ.

English summary
Member of Parliament Tejasvi Surya innaugurated Atiyas Mobility e Vehicle Show room in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X